twitter
    For Quick Alerts
    ALLOW NOTIFICATIONS  
    For Daily Alerts

    18 ದಿನಗಳ ಬಳಿಕವೂ ಧೂಳೆಬ್ಬಿಸುತ್ತಿರುವ ‘ಅಣ್ಣಾತ್ತೆ’ ಕನ್ನಡಕ್ಕೆ ಡಬ್: ರಜನಿಗೆ ಧ್ವನಿ ಯಾರದ್ದು?

    |

    'ಅಣ್ಣಾತ್ತೆ' ಸಿನಿಮಾ ತೆರೆಕಂಡಾಗ ಸೂಪರ್‌ಸ್ಟಾರ್ ರಜನಿಕಾಂತ್ ಜಮಾನ ಮುಗಿದೇ ಹೋಯಿತು ಅಂದಿದ್ದರು. 'ಅಣ್ಣಾತ್ತೆ' ಸಿನಿಮಾಗೆ ವಿಮರ್ಶಕರು ಉಗಿದು ಉಪ್ಪಿನಕಾಯಿ ಹಾಕಿದ್ದರು. ರಜನಿಕಾಂತ್ ಕರಿಯರ್‌ನಲ್ಲೇ ಇದು ಕೆಟ್ಟ ಸಿನಿಮಾ ಅನ್ನುವ ಕಮೆಂಟ್‌ಗಳೂ ಕೂಡ ಬಂದಿದ್ದವು. ಆದರೆ, ಯಾರೇ ಎನಂದರೂ, ಅದೆಷ್ಟೇ ಕೆಟ್ಟದಾಗಿ ಕಮೆಂಟ್ ಮಾಡಿದರೂ 'ಅಣ್ಣಾತ್ತೆ' ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಲೇ ಇದೆ.

    'ಅಣ್ಣಾತ್ತೆ' ತೆರೆಕಂಡು ಮೂರು ವಾರಗಳಾಗಿವೆ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾವನ್ನು ಓಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ದೀಪಾವಳಿ ಹಬ್ಬಕ್ಕೆ ತೆರೆಕಂಡಿದ್ದ 'ಅಣ್ಣಾತ್ತೆ' ಚಿತ್ರ ಅಲ್ಲಿಂದ ಇಲ್ಲಿವರೆಗೂ ಬಾಕ್ಸಾಫೀಸ್‌ನಲ್ಲಿ ನಾನ್ ಸ್ಟಾಪ್ ಓಡುತ್ತಲೇ ಇದೆ. ರಜನಿ ಇಮೇಜ್‌ನಿಂದಲೇ ಸಿನಿಮಾ ಧೂಳೆಬ್ಬಿಸುತ್ತಿದೆ. ಇನ್ನೊಂದು ರಜನಿಯ ಕನ್ನಡ ಅಭಿಮಾನಿಗಳಿಗೊಂದು ಸಿಹಿ ಸುದ್ದಿಯಿದೆ. 'ಅಣ್ಣಾತ್ತೆ' ಕನ್ನಡಕ್ಕೂ ಡಬ್ ಆಗುತ್ತಿದೆ.

    18 ದಿನ ಬಾಕ್ಸಾಫೀಸ್‌ನಲ್ಲಿ ರಜನಿ ‘ಅಣ್ಣಾತ್ತೆ’ ದರ್ಬಾರ್

    18 ದಿನ ಬಾಕ್ಸಾಫೀಸ್‌ನಲ್ಲಿ ರಜನಿ ‘ಅಣ್ಣಾತ್ತೆ’ ದರ್ಬಾರ್

    ರಜನಿಕಾಂತ್ 'ಅಣ್ಣಾತ್ತೆ' ಬಿಡುಗಡೆ ಆದಲ್ಲಿಂದ ಬಾಕ್ಸಾಫೀಸ್‌ ಚಿಂದು ಉಡಾಯಿಸುತ್ತಿದೆ. ಸಿನಿಮಾ ಬಿಡುಗಡೆಯಾಗಿ ಮೂರು ವಾರ ಆದರೂ ಗಲ್ಲಾಪೆಟ್ಟಿಗೆಯಲ್ಲಿ ಓಟ ನಿಲ್ಲುತ್ತಿಲ್ಲ. 'ಅಣ್ಣಾತ್ತೆ' ಸಿನಿಮಾದಿಂದ ತಲೈವಾ ತನ್ನ ತಾಕತ್ತು ಏನು ಅನ್ನುವುದನ್ನು ಸಾಭೀತು ಮಾಡಿದ್ದಾರೆ. 18 ದಿನಗಳಲ್ಲಿ 'ಅಣ್ಣಾತ್ತೆ' ಕಲೆಕ್ಷನ್ ಅದ್ಭುತವಾಗಿದ್ದು, ಆದಷ್ಟು ಬೇಗ 250 ಕೋಟಿ ಕ್ಲಬ್ ಸೇರಲಿದೆ. ಇನ್ನೂ ಮೂರನೇ ವಾರದಲ್ಲೂ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ.

    ಅತೀ ವೇಗವಾಗಿ 200 ಕೋಟಿ ದಾಟಿದ 'ಅಣ್ಣಾತ್ತೆ'

    ಅತೀ ವೇಗವಾಗಿ 200 ಕೋಟಿ ದಾಟಿದ 'ಅಣ್ಣಾತ್ತೆ'

    ದೀಪಾವಳಿ ಹಬ್ಬಕ್ಕೆ 'ಅಣ್ಣಾತ್ತೆ' ಭರ್ಜರಿ ಕಲೆಕ್ಷನ್ ಮಾಡಿತ್ತು. ಮೊದಲ ವಾರ ಈ ಸಿನಿಮಾ ವಿಶ್ವದಾದ್ಯಂತ ಗಳಿಸಿದ್ದು 200 ಕೋಟಿ. ಎರಡನೇ ವಾರ ಹಾಗೂ ಮೂರನೇ ವಾರವೂ ಸಿನಿಮಾ ಬಾಕ್ಸಾಫೀಸ್ ಅನ್ನು ಲೂಟಿ ಮಾಡಿದೆ. ಅಕ್ಷಯ್ ಕುಮಾರ್ ಸಿನಿಮಾ ಸೂರ್ಯವಂಶಿ 200 ಕೋಟಿ ದಾಟಲು ಪರದಾಡುತ್ತಿರುವಾಗ, ರಜಿನಿ 'ಅಣ್ಣಾತ್ತೆ' ಒಂದೇ ವಾರದಲ್ಲಿ 200 ಕೋಟಿ ಕ್ಲಬ್‌ನಲ್ಲಿ ತನ್ನ ಹೆಸರು ದಾಖಲಿಸಿತ್ತು. ಇನ್ನು ನಂತರದ ಎರಡು ವಾರ ಕೂಡ ಸೂಪರ್ ಕಲೆಕ್ಷನ್ ಮಾಡಿದೆ.

    ಮೊದಲ ವಾರ-202.47 ಕೋಟಿ, ಎರಡನೇ ವಾರ-26.32 ಕೋಟಿ, ಮೂರನೇ ವಾರ- 3 ದಿನದ ಗಳಿಕೆ 5.88 ಕೋಟಿ ದಾಟಿದೆ. ಒಟ್ಟು 18 ದಿನಗಳ ಗಳಿಕೆ 234.67 ಕೋಟಿ ಎಂದು ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯಬಾಲನ್ ಶೇರ್ ಮಾಡಿದ್ದಾರೆ.

    ಕನ್ನಡಕ್ಕೆ ಡಬ್ ಆಗುತ್ತಿದೆ 'ಅಣ್ಣಾತ್ತೆ'

    ಕನ್ನಡಕ್ಕೆ ಡಬ್ ಆಗುತ್ತಿದೆ 'ಅಣ್ಣಾತ್ತೆ'

    ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಂತೆ ರಜನಿಕಾಂತ್ 'ಅಣ್ಣಾತ್ತೆ' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲು ಚಿತ್ರತಂಡ ಮುಂದಾಗಿದೆ. 'ಅಣ್ಣಾತ್ತೆ' ಬಿಡುಗಡೆಯಾಗಿ ಯಶಸ್ಸು ಗಳಿಸಿದ ಬೆನ್ನಲ್ಲೇ ಡಬ್ ಕೆಲಸ ಆರಂಭ ಆಗಿದೆ ಎನ್ನಲಾಗಿದೆ. ರಜನಿಕಾಂತ್ ಪಾತ್ರಕ್ಕೆ ಡೈಲಾಗ್ ಕಿಂಗ್ ಸಾಯಿಕುಮಾರ್ ಧ್ವನಿ ನೀಡುತ್ತಾರೆ ಅನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಡೈಲಾಗ್ ಕಿಂಗ್ ಹಾಗೂ ರಜನಿ ಕಾಂಬಿನೇಷನ್‌ ಹೇಗಿರುತ್ತೆ ಅನ್ನುವುದನ್ನು ನೋಡಲು ಪ್ರೇಕ್ಷಕರು ಕಾದು ಕೂತಿದ್ದಾರೆ.

    ಥಿಯೇಟರ್‌ನಲ್ಲಿ 'ಅಣ್ಣಾತ್ತೆ' ರಿಲೀಸ್ ಅನುಮಾನ

    ಥಿಯೇಟರ್‌ನಲ್ಲಿ 'ಅಣ್ಣಾತ್ತೆ' ರಿಲೀಸ್ ಅನುಮಾನ

    'ಅಣ್ಣಾತ್ತೆ' ಕನ್ನಡಕ್ಕೆ ಡಬ್ ಮಾಡಲು ಮುಂದಾಗಿರುವುದು ಸರಿ. ಆದರೆ, ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದು ಅನುಮಾನ ಎನ್ನಲಾಗಿದೆ. ಸನ್ ಫಿಕ್ಚರ್ಸ್ ಸಿನಿಮಾ ನಿರ್ಮಾಣ ಮಾಡಿರುವುದರಿಂದ ಚಿತ್ರವನ್ನು ಟಿವಿಯಲ್ಲಿ ಪ್ರೀಮಿಯರ್ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿದೆ.

    English summary
    So far, Rajinikanth Annaatthe has grossed Rs 234.67 crore worldwide and in few days it will cross Rs 250 crore-mark. Team also planning to dub in kannada.
    Tuesday, November 23, 2021, 14:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X