For Quick Alerts
  ALLOW NOTIFICATIONS  
  For Daily Alerts

  ರಜನಿ 164ನೇ ಚಿತ್ರದ ಫಸ್ಟ್ ಲುಕ್: ಮತ್ತೆ 'ಡಾನ್' ಆದ ತಲೈವಾ.!

  By Bharath Kumar
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಚಿತ್ರಕ್ಕಾಗಿ ಇಡೀ ಚಿತ್ರಜಗತ್ತು ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಈ ಮಧ್ಯೆ ರಜನಿ ಅಭಿನಯಿಸಲಿರುವ 164ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೈಟಲ್ ಬಿಡುಗಡೆ ಆಗಿದೆ.

  'ಕಬಾಲಿ' ಚಿತ್ರದ ನಂತರ ಮತ್ತೊಮ್ಮೆ ಡಾನ್ ಪಾತ್ರದಲ್ಲಿ ತಲೈವಾ ಮಿಂಚಲಿದ್ದು, ಈಗ ರಿಲೀಸ್ ಆಗಿರುವ ಪೋಸ್ಟರ್ ಸಖತ್ ಹವಾ ಎಬ್ಬಿಸಿದೆ.['2.0' ಚಿತ್ರದಲ್ಲಿ ರಜನಿ ಹೀರೋ ಅಲ್ಲ, ಅಕ್ಷಯ್ ಹೀರೋ ಅಂತೆ]

  ಈ ಚಿತ್ರವನ್ನ ರಜನಿಕಾಂತ್ ಅಳಿಯ ನಟ ಧನುಶ್ ನಿರ್ಮಾಣ ಮಾಡುತ್ತಿದ್ದು, ಈ ಪೋಸ್ಟರ್ ನ್ನ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.....

  ರಜನಿಯ 164ನೇ ಚಿತ್ರದ ಫಸ್ಟ್ ಲುಕ್

  ರಜನಿಯ 164ನೇ ಚಿತ್ರದ ಫಸ್ಟ್ ಲುಕ್

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಲಿರುವ 164ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರಕ್ಕೆ 'ಕಾಲ ಕರಿಕಾಲನ್' ಎಂಬ ಟೈಟಲ್ ಫಿಕ್ಸ್ ಆಗಿದ್ದು, ನಟ ಧನುಶ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

  'ಕಾಲ ಕರಿಕಾಲನ್' ಯಾರು ಗೊತ್ತಾ?

  'ಕಾಲ ಕರಿಕಾಲನ್' ಯಾರು ಗೊತ್ತಾ?

  ಚೋಳರ ರಾಜ 'ಕರಿಕಾಲ'. ದಕ್ಷಿಣ ಭಾರತವನ್ನಾಳಿದ ರಾಜರಲ್ಲಿ ಕರಿಕಾಲ ಕೂಡ ಒಬ್ಬ. ರಜನಿ ಚಿತ್ರಕ್ಕೆ ಈ ರಾಜನ ಹೆಸರು ಇಟ್ಟಿರುವುದು ಸಾಮಾನ್ಯವಾಗಿ ಕುತೂಹಲ ಹೆಚ್ಚಾಗಿದೆ.

  ಪಾ ರಂಜಿತ್ ಆಕ್ಷನ್ ಕಟ್

  ಪಾ ರಂಜಿತ್ ಆಕ್ಷನ್ ಕಟ್

  'ಕಬಾಲಿ' ಚಿತ್ರವನ್ನ ನಿರ್ದೇಶನ ಮಾಡಿದ್ದ ಪಾ.ರಂಜಿತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗ್ಯಾಂಗ್ ಸ್ಟರ್ ಚಿತ್ರದ ಮೂಲಕ ರಜನಿ ಅಭಿಮಾನಿಗಳನ್ನ ರಂಜಿಸಿದ್ದ ಪಾ ರಂಜಿತ್ ಈಗ ಮತ್ತೊಂದು 'ರಾ' ಸ್ಟೈಲ್ ಸಿನಿಮಾವನ್ನ ನೀಡಲಿದ್ದಾರಂತೆ. 'ಕಾಲಾ' ಪೋಸ್ಟರ್ ನೋಡುತ್ತಿದ್ದರೇ, ಕಾಲಾ ಚಿತ್ರದಲ್ಲೂ ರಜನಿಕಾಂತ್ ಗ್ಯಾಂಗ್ ಸ್ಟರ್ ಪಾತ್ರವನ್ನ ನಿರ್ವಹಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ.

  ರಜನಿ ಅಳಿಯ ನಿರ್ಮಾಣ

  ರಜನಿ ಅಳಿಯ ನಿರ್ಮಾಣ

  ಇನ್ನು ಈ ಚಿತ್ರವನ್ನ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಶ್ ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.[ಈ ನಟನಿಗೆ ರಜನಿಕಾಂತ್ ತಂದೆಯಂತೆ, ಧನುಷ್ ಸ್ಫೂರ್ತಿಯಂತೆ!]

  ರಜನಿಗೆ ಬಾಲಿವುಡ್ ನಾಯಕಿ ಸಾಥ್

  ರಜನಿಗೆ ಬಾಲಿವುಡ್ ನಾಯಕಿ ಸಾಥ್

  ತಲೈವಾಗೆ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಹುಮಾ ಖುರೇಶಿ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. ಈ ಹಿಂದೆ ವಿದ್ಯಾಬಾಲನ್ ನಾಯಕಿ ಆಗುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದ್ರೆ, ಡೇಟ್ ಸಮಸ್ಯೆಯಿಂದ ವಿದ್ಯಾ ಬದಲಿಗೆ ಹುಮಾ ಖುರೇಶಿ ಸ್ಥಾನ ಪಡೆದುಕೊಂಡಿದ್ದಾರೆ.

  ಮೇ 28ಕ್ಕೆ ಮುಹೂರ್ತ

  ಮೇ 28ಕ್ಕೆ ಮುಹೂರ್ತ

  ರಜನಿಕಾಂತ್ ಅವರ ಈ ಸಿನಿಮಾ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗಲಿದೆ. ಎಲ್ಲ ಅಂದುಕೊಂಡಂತೆ ಆದರೇ, ಮೇ 28 ರಂದು ಈ ಚಿತ್ರಕ್ಕೆ ರಜನಿಕಾಂತ್ ಚಾಲನೆ ನೀಡಲಿದ್ದಾರಂತೆ.

  '2.0' ಯಾವಾಗ?

  '2.0' ಯಾವಾಗ?

  ರಜನಿಕಾಂತ್ ಹಾಗೂ ನಿರ್ದೇಶಕ ಶಂಕರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ '2.0' ಚಿತ್ರ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸದಿಂದ ಮುಂದಿನ ವರ್ಷದಲ್ಲಿ ಬರಲು ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ಜನವರಿ 25 ರಂದು '2.0' ತೆರೆಕಾಣಲಿದೆಯಂತೆ. ರಜನಿಕಾಂತ್, ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

  English summary
  superstar Rajinikanth's upcoming film titled 'Kaala Karikaalan' and Released First Look of the Movie. 'Kaala' Directed by Pa Ranjith and Produced by Actor Dhanush. It is Rajinikanth 164th Movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X