ರಜನಿ '2.0' ಕಲೆಕ್ಷನ್: ನಿರೀಕ್ಷೆ ಪರ್ವತದಷ್ಟು, ಗಳಿಸಿದ್ದು ಬೆಟ್ಟದಷ್ಟು.!
Recommended Video

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ರಿಲೀಸ್ ಗೂ ಮುಂಚೆ ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಕಲೆಕ್ಷನ್ ನಲ್ಲಿ ಈ ಹಿಂದಿನ ದಾಖಲೆಗಳನ್ನ ಧೂಳಿಪಟ ಮಾಡುತ್ತೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು.
'ಬಾಹುಬಲಿ' ಸಿನಿಮಾದ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡುತ್ತೆ, ಇಡೀ ಭಾರತೀಯ ಚಿತ್ರದಲ್ಲೇ '2.0' ಹೊಸ ದಾಖಲೆ ನಿರ್ಮಿಸುತ್ತೆ ಎಂದು ಹೊಗಳಿ ಅಟ್ಟಕ್ಕೇರಿಸಿದ್ದರು. ಆ ಮಾತಿನಂತೆ ರಜನಿ ಸಿನಿಮಾ ಮೊದಲ ಎರಡು ದಿನದ ಗಳಿಕೆಯಲ್ಲೇ ಯಶಸ್ವಿಯಾಗಿದೆ.
ಹೌದು, ರಿಲೀಸ್ ಗೂ ಮುನ್ನ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದ '2.0' ಈಗ ಪರ್ವತದಷ್ಟು ಸಾಧನೆ ಮಾಡಿದೆ. ಈ ಕಲೆಕ್ಷನ್ ನೋಡಿದ್ರೆ, ಭಾರತ ಚಿತ್ರರಂಗದಲ್ಲೇ ಇದ್ರ ದಾಖಲೆ ಮುರಿಯೋಕೆ ತುಂಬಾ ವರ್ಷಗಳು ಬೇಕಾಗಬಹುದು. ಅಷ್ಟಕ್ಕೂ, '2.0' ಗಳಿಸಿದೆಷ್ಟು.?

2.0 ಮೊದಲ ದಿನ ಗಳಿಕೆ
ಖ್ಯಾತ ವಿರ್ಮಶಕರು, ವಿಶ್ಲೇಷಕರು ಪ್ರಕಟ ಮಾಡಿರುವ ಪ್ರಕಾರ, ರಜನಿ ಮತ್ತು ಅಕ್ಷಯ್ ಕುಮಾರ್ ಜೋಡಿಯ '2.0' ಸಿನಿಮಾ ಕೇವಲ ಹಿಂದಿ ವರ್ಷನ್ ನಲ್ಲಿ ಮೊದಲ ದಿನ ಕೇವಲ 20 ಕೋಟಿ ಗಳಿಸಿದೆಯಂತೆ. ಬಟ್, ಜಗತ್ತಿನಾದ್ಯಂತ 100 ಗಳಿಸುವ ಮೂಲಕ ಹೊಸ ಚರಿತ್ರೆ ಸೃಷ್ಟಿಸಿದೆ.

100 ಕೋಟಿ ಗಳಿಸಿದ ರಜನಿ ಸಿನಿಮಾ
ಭಾರತ ಚಿತ್ರರಂಗದ ಇತಿಹಾಸದಲ್ಲೇ ಮೊದಲ ದಿನ ನೂರು ಕೋಟಿ ಗಳಿಸಿದ ಎರಡನೇ ಸಿನಿಮಾ 2.0. ಸದ್ಯದ ಮಾಹಿತಿ ಪ್ರಕಾರ, ಭಾರತದಲ್ಲಿ 85 ಕೋಟಿಸಿದೆ. ಹೊರದೇಶದಲ್ಲಿ 35 ಕೋಟಿ ಗಳಿಸಿದ್ದು, ಒಟ್ಟಾರೆ ಕಲೆಕ್ಷನ್ 115 ಕೋಟಿ ಆಗಿದೆಯಂತೆ. ಮೊದಲನೇ ಸಿನಿಮಾ ಬಾಹುಬಲಿ.

ಎರಡನೇ ದಿನ ಎಷ್ಟು.?
ಇನ್ನು 2.0 ಚಿತ್ರದ ಎರಡನೇ ದಿನ ಕಲೆಕ್ಷನ್ ನೋಡಿದ್ರೆ, ಮೊದಲ ದಿನಕ್ಕಿಂತ ಹೆಚ್ಚು ಗಳಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸದ್ಯದ ಹಿಂದಿ ವರ್ಷನ ಮಾತ್ರ 19 ಕೋಟಿ ಗಳಿಕೆ ಕಂಡಿದೆಯಂತೆ. ಹಿಂದಿ ವರ್ಷನ್ ಮೊದಲ ದಿನ 20 ಕೋಟಿ ಗಳಿಸಿತ್ತು. ಎರಡು ದಿನದಲ್ಲಿ ಬರಿ ಹಿಂದಿ ವರ್ಷನ್ ಮಾತ್ರ 39 ಕೋಟಿ ಕಲೆಕ್ಷನ್ ಮಾಡಿದೆ.

ವಿದೇಶಗಳಲ್ಲಿ ಹೇಗಿದೆ ಕಲೆಕ್ಷನ್
ಮಲೇಷಿಯಾದಲ್ಲಿ 4.5 ಕೋಟಿ, ಯುಕೆ ನಲ್ಲಿ 1.8 ಕೋಟಿ, ಯುಎಸ್ ನಲ್ಲಿ 10 ಕೋಟಿ ಸೇರಿದಂತೆ ವರ್ಲ್ಡ್ ವೈಡ್ ರಜನಿಯ ಸಿನಿಮಾ ಭಾರಿ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಇದು ಎರಡನೇ ದಿನ ಹಾಗೂ ವೀಕೆಂಡ್ ನಲ್ಲಿ ಮುಂದುವರಿದರೇ ಕಲೆಕ್ಷನ್ ನಲ್ಲಿ ಭಾರಿ ಮುನ್ನಡೆ ನೋಡಬಹುದು.

'ಬಾಹುಬಲಿ' ಹಿಂದಿಕ್ಕಲು ಸಾಧ್ಯವಾಗಲಿಲ್ಲ
ಬಾಹುಬಲಿ ದಿ ಕನ್ ಕ್ಲೂಷನ್ ಚಿತ್ರದ ಮೊದಲ ದಿನ ಕಲೆಕ್ಷನ್ ಒಟ್ಟಾರೆ 121 ಕೋಟಿ. ಈಗ ರಜನಿ ಸಿನಿಮಾ ಗಳಿಸಿರುವುದು 115 ಕೋಟಿ. ಅಲ್ಲಿಗೆ ಬಾಹುಬಲಿ ಚಿತ್ರದ ಮೊದಲ ದಿನದ ಗಳಿಕೆಯನ್ನ ಹಿಂದಿಕ್ಕುವಲ್ಲಿ 2.0 ಹಿನ್ನಡೆ ಅನುಭವಿಸಿದೆ.

543 ಕೋಟಿ ಬಜೆಟ್
ಅಂದ್ಹಾಗೆ, 2.0 ಸಿನಿಮಾದ ಒಟ್ಟಾರೆ ಬಜೆಟ್ 543 ಕೋಟಿ. ಚಿತ್ರದ ಸ್ಯಾಟ್ ಲೈಟ್ ಹಕ್ಕು 110 ಕೋಟಿ ಹಾಗೂ ಡಿಜಿಟಲ್ ಹಕ್ಕು 80 ಕೋಟಿಗೆ ಸೇಲ್ ಆಗಿದೆ. ಭಾರತದಲ್ಲಿ 6800 ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಕಂಡಿದ್ದು, ಜಗತ್ತಿನಾದ್ಯಂತ 10,000 ಸ್ಕ್ರೀನ್ ನಲ್ಲಿ ರಿಲೀಸ್ ಆಗಿದೆ. ಮೊದಲ ದಿನ 100 ಕೋಟಿ ಗಳಿಸಿರುವ ಈ ಸಿನಿಮಾ ಮೊದಲ ವಾರಾಂತ್ಯಕ್ಕೆ ಹಾಕಿದ ಬಂಡವಾಳ ವಾಪಸ್ ಪಡೆಯುವ ನಿರೀಕ್ಷೆಯಿದೆ.


Click it and Unblock the Notifications











