»   » ರಜನಿಕಾಂತ್-ಅಕ್ಷಯ್ '2.0' ಚಿತ್ರಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಪ್ರಚಾರವೇ..!

ರಜನಿಕಾಂತ್-ಅಕ್ಷಯ್ '2.0' ಚಿತ್ರಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಪ್ರಚಾರವೇ..!

Posted By:
Subscribe to Filmibeat Kannada

ಸದ್ಯದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಚಿತ್ರ '2.0'. ಕೇವಲ ಫಸ್ಟ್ ಲುಕ್ ನಿಂದಲೇ ದೇಶದಾದ್ಯಂತ ಸಿನಿಪ್ರಿಯರ ಗಮನ ಸೆಳೆದಿರುವ ಚಿತ್ರ ಈಗ ಇನ್ನೊಂದು ಸಾಹಸಕ್ಕೆ ಮುಂದಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ '2.0' ಚಿತ್ರಕ್ಕೆ ಹಾಲಿವುಡ್ ರೇಂಜ್ ನಲ್ಲಿ ಈಗ ಪ್ರಚಾರ ಕಾರ್ಯ ಆರಂಭವಾಗಿದೆ. ಚಿತ್ರದ ಪ್ರಮೋಷನ್ ನೋಡಿದ್ರೆ ಬಹುಶಃ ಭಾರತೀಯ ಚಿತ್ರಕ್ಕೆ ಇಷ್ಟು ದೊಡ್ಡ ಮಟ್ಟದ ಪ್ರಚಾರವೇ ಎಂದು ನೋಡಿದವರು ಬಾಯ ಮೇಲೆ ಬೆರಳಿಟ್ಟುಕೊಳ್ಳುವಲ್ಲಿ ಸಂಶಯವಿಲ್ಲ. ಮುಂದೆ ಓದಿರಿ.

ಹಾಲಿವುಡ್‌ ರೇಂಜ್‌ನಲ್ಲಿ ಪ್ರಚಾರ ಕಾರ್ಯ

ಈಗಾಗಲೇ ಚಿತ್ರದ ಪೂರ್ಣ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದ್ದರಿಂದ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿರುವ ಲೈಕಾ ಪ್ರೊಡಕ್ಷನ್ಸ್ ಕ್ರಿಯೇಟಿವ್ ಹೆಡ್ ರಾಜು ಮಹಾಲಿಂಗಂ ರವರು ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ಮಾಡಲು ಚಿತ್ರತಂಡ ಜಗತ್ತಿನಾದ್ಯಂತ ಸಂಚಾರ ಮಾಡಲಿದೆ ಎಂದು ಹೇಳಿದ್ದಾರೆ.

ಚಿತ್ರ ಪ್ರಚಾರಕ್ಕಾಗಿ ಮಾಡಿದ ಸಾಹಸವಿದು

ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ '2.0' ಚಿತ್ರದ ಲೋಗೋ ಹೊಂದಿರುವ ಬಲೂನ್ ಅನ್ನು ಲಾಸ್ ಏಂಜಲೀಸ್ ನ ಹಾಲಿವುಡ್ ಪಾರ್ಕ್ ನಲ್ಲಿ ಹಾರಿಸಿದೆ. ಈ ಬಗ್ಗೆ ರಾಜು ಮಹಾಲಿಂಗಂ ರವರೇ ಟ್ವೀಟ್ ಮಾಡಿದ್ದಾರೆ.

ದುಬಾರಿ ಬಜೆಟ್ ಸಿನಿಮಾ

ಭಾರತೀಯ ಚಿತ್ರರಂಗದ ಅತಿ ದುಬಾರಿ ವೆಚ್ಚದ ಚಿತ್ರಗಳಲ್ಲಿ '2.0' ಸಹ ಒಂದಾಗಿದ್ದು, ಚಿತ್ರಕ್ಕೆ 350 ಕೋಟಿಗಿಂತ ಹೆಚ್ಚು ಬಂಡವಾಳ ಹೂಡಲಾಗಿದೆ. ಈ ಚಿತ್ರದಲ್ಲಿ ಆಮಿ ಜಾಕ್ಸನ್ ಅಭಿನಯಿಸಿದ್ದಾರೆ.

ದೀಪಾವಳಿ ಹಬ್ಬಕ್ಕೆ ಟೀಸರ್

'2.0' ಚಿತ್ರದ ಟೀಸರ್ ಅನ್ನು ದೀಪಾವಳಿ ಹಬ್ಬದಂದು ಬಿಡುಗಡೆ ಮಾಡಲು ನಿಶ್ಚಯಿಸಿದ್ದು, ಟ್ರೈಲರ್ ಅನ್ನು ರಜನಿಕಾಂತ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗುತ್ತದೆಯಂತೆ. ಎಸ್. ಶಂಕರ್ ನಿರ್ದೇಶನ, ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರವನ್ನು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ.

English summary
Rajinikanth, Akshay Kumar starrer '2.0' Film’s Hot Air Balloon Shows India’s Power in Hollywood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada