For Quick Alerts
  ALLOW NOTIFICATIONS  
  For Daily Alerts

  ಚೊಚ್ಚಲ ಮಗು ನಿರೀಕ್ಷೆಯಲ್ಲಿ ಸೌಂದರ್ಯಾ ರಜನಿಕಾಂತ್

  By ಶಂಕರ್, ಚೆನ್ನೈ
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಮತ್ತೊಮ್ಮೆ ತಾತನಾಗುವ ಯೋಗ ಕೂಡಿಬಂದಿದೆ. ಅವರ ಕಿರಿಮಗಳು ಸೌಂದರ್ಯಾ ಆರ್ ಅಶ್ವಿನ್ ಅವರು ಇದೀಗ ನಾಲ್ಕು ತಿಂಗಳ ಗರ್ಭಿಣಿ. ಕೆಲ ತಿಂಗಳ ಬಳಿಕ ರಜನಿಕಾಂತ್ (64) ಅವರಿಗೆ ಮೊಮ್ಮಗು ಜೊತೆ ಆಟವಾಡುವ ಚಾನ್ಸ್ ಸಿಗಲಿದೆ.

  2010ರಲ್ಲಿ ಬಿಜಿನೆಸ್ ಮ್ಯಾನ್ ಅಶ್ವಿನಿ ರಾಮ್ ಕುಮಾರ್ ಅವರ ಕೈಹಿಡಿದಿದ್ದರು ಸೌಂದರ್ಯಾ ರಜನಿಕಾಂತ್. ಅನಿಮೇಷನ್ ಚಿತ್ರ 'ಕೊಚ್ಚಡಿಯಾನ್' ಮೂಲಕ ಸೌಂದರ್ಯಾ ಅವರು ನಿರ್ದೇಶಕಿಯಾಗಿ ಬದಲಾಗಿದ್ದರು. ಆ ಚಿತ್ರಕ್ಕೆ ತಾಂತ್ರಿಕ ಅಂಶಗಳಿಂದ ಉತ್ತಮ ಹೆಸರು ಬಂದರೂ ವ್ಯವಹಾರಿಕವಾಗಿ ಸೋತಿತು. [ಸೌಂದರ್ಯಾ ರಜನಿಕಾಂತ್ ಗೆ ಒಂದು ಬಹಿರಂಗ ಪತ್ರ]

  ಸದ್ಯಕ್ಕೆ ಸೌಂದರ್ಯಾ ಅವರು ಈರೋಸ್ ಅವರ ಡಿಜಿಟಲ್ ಇನ್ನೋವೇಶನ್ ಗೆ ಕ್ರಿಯೇಟಿವ್ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಕಡೆ ರಜನಿಕಾಂತ್ ಅಭಿನಯದ 'ಲಿಂಗಾ' ಚಿತ್ರ ಬಾಕ್ಸ್ ಆಫೀಸಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್ ಹಾಗೂ ಧನುಷ್ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕಿರಿಯ ಮಗಳು ಸೌಂದರ್ಯಾ ಚೊಚ್ಚಲ ಮಗು ನಿರೀಕ್ಷೆಯಲ್ಲಿದ್ದಾರೆ.

  ಈ ಹಿಂದೆ ಕೊಚ್ಚಡಿಯಾನ್ ಆಡಿಯೋ ಬಿಡುಗಡೆ ವೇಳೆ ರಜನಿಕಾಂತ್ ಮಾತನಾಡುತ್ತಾ, "ನನ್ನ ಪ್ರಕಾರ ತಾಯಂದಿರು ಹೆಚ್ಚಿನ ಸಮಯವನ್ನು ತಮ್ಮ ಮಕ್ಕಳು ಹಾಗೂ ಕುಟುಂಬದ ಜೊತೆಗೆ ಕಳೆಯಬೇಕು. ಆಗಷ್ಟೇ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ..."

  "ನನ್ನ ಮಗಳಿಗೂ ನಾನು ಇದೇ ಸಲಹೆಯನ್ನು ಕೊಡುತ್ತಿದ್ದೇನೆ. ಮಕ್ಕಳಿಗೆ 10-12 ವರ್ಷ ತುಂಬುವವರೆಗೂ ಅವರ ಜೊತೆಗೆ ಇದ್ದು ಬಳಿಕ ತಮ್ಮ ವೃತ್ತಿ ಬದುಕಿನ ಕಡೆಗೆ ಗಮನಹರಿಸಲಿ" ಎಂದಿದ್ದರು.

  ಆಗ ಸೌಂದರ್ಯಾ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, "ಕೊಚ್ಚಡಿಯಾನ್ ಚಿತ್ರ ನನ್ನ ಚೊಚ್ಚಲ ಮಗು ಇದ್ದಂತೆ. ಆ ಚಿತ್ರದ ಬಳಿಕವಷ್ಟೇ ಅಪ್ಪನ ಮಾತಿನಂತೆ ಮಕ್ಕಳು, ಕುಟುಂಬದ ಕಡೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇನೆ" ಎಂದಿದ್ದರು.

  English summary
  Rajinikanth's younger daughter Soundarya R Ashwin is reportedly expecting her first child. She made her directorial debut with 'Kochadaiyaan' in 2014, first motion capture film featuring her father in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X