For Quick Alerts
  ALLOW NOTIFICATIONS  
  For Daily Alerts

  ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್

  |

  ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರು ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಬಹಳ ಅಪರೂಪ. ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಗೋವಾ ಚಲನಚಿತ್ರೋತ್ಸವ.

  ಹೌದು, ಭಾರತದ ದೇಶದ ಪ್ರತಿಷ್ಠಿತ ಚಲನಚಿತ್ರವೋತ್ಸವಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಈ ಇಬ್ಬರು ದಿಗ್ಗಜ ನಟರು ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

  ತಮಿಳಿನ ಈ ಇಬ್ಬರು ನಟರ ಜೊತೆ ನಟಿಸಬೇಕಂತೆ ರಶ್ಮಿಕಾತಮಿಳಿನ ಈ ಇಬ್ಬರು ನಟರ ಜೊತೆ ನಟಿಸಬೇಕಂತೆ ರಶ್ಮಿಕಾ

  ನವೆಂಬರ್ 20 ರಂದು ಈ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮ ನಡಯಲಿದ್ದು, ಇದು 50ನೇ ಆವೃತ್ತಿ ಆಗಿರುವುದು ವಿಶೇಷವಾಗಿದೆ. ಈ ಬಗ್ಗೆ ಖ್ಯಾತ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

  ಕೇಂದ್ರ ಮಾಹಿತಿ ಮತ್ತು ಪ್ರಸರಣ ಇಲಾಖೆ ಸಚಿವರಾಗಿರುವ ಪ್ರಕಾಶ್ ಜಾವಡೇಕರ್ ಅವರು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ''ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅತಿಥಿಯಾಗಿ ಬರ್ತಿದ್ದಾರೆ'' ಎಂದು ಪ್ರಕಟಿಸಿದ್ದರು.

  Rajinikanth And Amitabh Bachchan Will Participate In Goa Film Festival

  ಅಮಿತಾಭ್ ಬಚ್ಚನ್ ಅಂದು ಹೇಳಿದ್ದ ಮಾತನ್ನ ಚಿರಂಜೀವಿ ಕೇಳಲೇ ಇಲ್ಲಅಮಿತಾಭ್ ಬಚ್ಚನ್ ಅಂದು ಹೇಳಿದ್ದ ಮಾತನ್ನ ಚಿರಂಜೀವಿ ಕೇಳಲೇ ಇಲ್ಲ

  ಇದಕ್ಕೆ ಪ್ರತಿಕ್ರಿಯಿಸಿದ್ದ ರಜನಿಕಾಂತ್, ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದರು. ಗೋವಾ ಚಿತ್ರೋತ್ಸವದಲ್ಲಿ ಭಾರತದಿಂದ ಗುಜರಾತಿ ಸಿನಿಮಾ 'ಹೆಲೋರೆ' ಮತ್ತು ಮಲಯಾಳಂ ಭಾಷೆಯ 'ಉಯಿರೇ' ಎರಡು ಚಿತ್ರಗಳು ವಿದೇಶಿ ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಿದೆ. ನವೆಂಬರ್ 28ಕ್ಕೆ ಚಿತ್ರೋತ್ಸವದ ಸಮಾರೂಪ ಸಮಾರಂಭ ನಡೆಯಲಿದೆ.

  English summary
  Super star Rajinikanth and bollywood megastar amitabh bachchan will participate in goa international film festival inauguration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X