ರಜನಿಕಾಂತ್ ಗೆ ಪೈಪೋಟಿ ನೀಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್

Recommended Video

ರಜಿನಿಕಾಂತ್ ರ 2.0 ಸಿನಿಮಾಗೆ ಪೈಪೋಟಿ ಕೊಟ್ಟ ಯಶ್ ಮಾಸ್ಟರ್ ಪೀಸ್ ಸಿನಿಮಾ | Oneindia Kannada

ಭಾರತೀಯ ಚಿತ್ರರಂಗದಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಗೆ ಒಂದು ವಿಶೇಷ ಸ್ಥಾನವಿದೆ. ಚಿತ್ರಜಗತ್ತಿನಲ್ಲಿ ಭಾರತದ ಕೀರ್ತಿಯನ್ನ ಹೆಚ್ಚಿಸಿದ ಕಲಾವಿದ ಅಂದ್ರು ತಪ್ಪಾಗಲಾರದು. ಇಂತಹ ನಟನಿಗೆ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಪೈಪೋಟಿ ನೀಡ್ತಿದ್ದಾರೆ.

ಹೌದು, ನಿಮಗೆ ಅಚ್ಚರಿಯಾದ್ರು ಈ ವಿಷ್ಯವನ್ನ ನೀವು ನಂಬಲೇಬೇಕು. ಅದು ಬೇರೆ ಸಿನಿಮಾಗೂ ಅಲ್ಲ. ತಲೈವಾ ಅಭಿನಯದ '2.0' ಚಿತ್ರಕ್ಕೆ ಅನ್ನೋದು ಮತ್ತೊಂದು ಸರ್ಪ್ರೈಸ್.

ರಜನಿಕಾಂತ್ ಅಭಿನಯದ '2.0' ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಈ ಟೀಸರ್ ರಿಲೀಸ್ ಆಗಿದೆ. 1 ನಿಮಿಷ 30 ಸೆಕೆಂಡ್ ಕಾಲಾವಧಿ ಹೊಂದಿರುವ ಹಿಂದಿ ಟೀಸರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇಂತಹ ಸ್ಟಾರ್ ಗೆ ನಮ್ಮ ಯಶ್ ಹೇಗೆ ಕಾಂಪಿಟೇಶನ್ ಕೊಡ್ತಿದ್ದಾರೆ. ಅದು ಹೇಗೆ ಅಂತ ಮುಂದೆ ಓದಿ.....

'ಹವಾ' ಎಬ್ಬಿಸಿರುವ '2.0'

'ಹವಾ' ಎಬ್ಬಿಸಿರುವ '2.0'

ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಟೀಸರ್ ರಿಲೀಸ್ ಮಾಡಿರುವ 2.0 ಸಿನಿಮಾ ಮೂರು ಭಾಷೆಗಳಲ್ಲೂ ಟ್ರೆಂಡಿಂಗ್ ನಲ್ಲಿದೆ. ಅದರಲ್ಲೂ ಹಿಂದಿ ಭಾಷೆಯ ಟೀಸರ್ ನ್ನ ಇದುವರೆಗೂ 1.3 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ.

'2.0' ಪೈಪೋಟಿ ನೀಡಿದ 'ಮಾಸ್ಟರ್ ಪೀಸ್'

'2.0' ಪೈಪೋಟಿ ನೀಡಿದ 'ಮಾಸ್ಟರ್ ಪೀಸ್'

ಇಂತಹ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾ ತೀವ್ರ ಪೈಪೋಟಿ ನೀಡುತ್ತಿದೆ. '2.0' ಸಿನಿಮಾದ ಟೀಸರ್ ಮೊದಲ ಸ್ಥಾನದಲ್ಲಿದ್ದರೇ, 2015 ರಲ್ಲಿ ತೆರೆಕಂಡಿದ್ದ 'ಮಾಸ್ಟರ್ ಪೀಸ್' ಸಿನಿಮಾ ಎರಡನೇ ಸ್ಥಾನದಲ್ಲಿದೆ. ಹೌದು, ಮೂರು ವರ್ಷದ ಹಿಂದಿನ ಸಿನಿಮಾ ಈಗಲೂ ಇಷ್ಟರ ಮಟ್ಟಿಗೆ ಹವಾ ಸೃಷ್ಟಿಸಿರುವುದು ನಿಜಕ್ಕೂ ವಿಶೇಷವೇ ಸರಿ.

ಎರಡು ದಿನದ ಮುಂಚೆ ಅಪ್ ಲೌಡ್

ಎರಡು ದಿನದ ಮುಂಚೆ ಅಪ್ ಲೌಡ್

ಅಂದ್ಹಾಗೆ, 'ಮಾಸ್ಟರ್ ಪೀಸ್' ಸಿನಿಮಾ ಬಿಡುಗಡೆಯಾಗಿ ಮೂರು ವರ್ಷ ಆಗಿದೆ. ಆದ್ರೆ, ಯೂಟ್ಯೂಬ್ ನಲ್ಲಿ ಸಿನಿಮಾ ಅಪ್ ಲೌಡ್ ಆಗಿರುವುದು ಈಗ. ಸೆಪ್ಟೆಂಬರ್ 12 ರಂದು, ಅಂದ್ರೆ ರಜನಿಯ '2.0' ಟೀಸರ್ ಬರುವ ಹಿಂದಿನ ದಿನ 'ಮಾಸ್ಟರ್ ಪೀಸ್' ಯೂಟ್ಯೂಬ್ ನಲ್ಲಿ ಅಪ್ ಲೌಡ್ ಆಗಿದೆ. ಅಷ್ಟರಲ್ಲೇ 33 ಲಕ್ಷಕ್ಕೂ ಅಧಿಕ ಜನರು ಸಿನಿಮಾ ನೋಡಿದ್ದಾರೆ.

ಹಿಂದಿಯಲ್ಲೂ 'ಮಾಸ್ಟರ್ ಪೀಸ್' ಕಮಾಲ್

ಹಿಂದಿಯಲ್ಲೂ 'ಮಾಸ್ಟರ್ ಪೀಸ್' ಕಮಾಲ್

ಇನ್ನು 'ಮಾಸ್ಟರ್ ಪೀಸ್' ಸಿನಿಮಾ ಹಿಂದಿಯಲ್ಲಿ ಡಬ್ ಆಗಿದೆ. ಡಬ್ ವರ್ಷನ್ ಸಿನಿಮಾ 2016ರಲ್ಲೇ ಯೂಟ್ಯೂಬ್ ಗೆ ಅಪ್ ಲೌಡ್ ಆಗಿದೆ. ಈ ಚಿತ್ರವನ್ನ ಇದುವರೆಗೂ ಸುಮಾರು 3.7 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

'2.0' ರಿಲೀಸ್ ಆಗಬೇಕಿದೆ

'2.0' ರಿಲೀಸ್ ಆಗಬೇಕಿದೆ

ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ರಿಲೀಸ್ ಆಗಬೇಕಿದೆ. ಶಂಕರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, 453 ಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗಿದೆ. ಆದ್ರೆ, ಯಶ್, ಶಾನ್ವಿ ಅಭಿನಯದ ಮಾಸ್ಟರ್ ಪೀಸ್ ಥಿಯೇಟರ್ ನಲ್ಲಿ ಪ್ರದರ್ಶನ ಕಂಡು, ಯೂಟ್ಯೂಬ್ ನಲ್ಲಿ ಮರು ಪ್ರದರ್ಶನವಾಗುತ್ತಿದೆ. ಅಲ್ಲಿಗೆ ಯಶ್ ಹುಡುಗರ ಹವಾ ಎಷ್ಟರ ಮಟ್ಟಿಗೆ ಇದೆ ಎಂಬುದನ್ನ ಊಹೆ ಮಾಡಿಕೊಳ್ಳಿ.

More from Filmibeat

English summary
Rajinikanth and Akshay Kumar starrer 2.0 teaser went on to garner over 32 million views on the internet within 24 hours of its release. kannada actor yash's masterpiece take second place in youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X