ಕೊನೆಗೂ ಕೇಕ್ ಕಟ್ ಮಾಡಿ, ತಂಡದ ಜೊತೆಗೆ ಜೈಲರ್ ಸಕ್ಸಸ್ ಸಂಭ್ರಮಿಸಿದ ರಜನಿಕಾಂತ್!
ಹಲವು ದಾಖಲೆಗಳನ್ನು ಮುರಿದು, ಹೊಸ ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿರುವ ಈ ವರ್ಷದ ಸೂಪರ್ ಹಿಟ್ ಚಿತ್ರ 'ಜೈಲರ್'. ಸಿನಿಮಾ ತಂಡ ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿದ್ದರೇ ನಟ ರಜನಿಕಾಂತ್ ಮಾತ್ರ ಯಾವುದನ್ನೂ ತಲೆಗೆ ಹಾಕಿಕೊಳ್ಳದೇ ದೇವಾಲಯಗಳು, ರಾಜ್ಯಗಳಿಗೆ ಪ್ರವಾಸ ಮಾಡುತ್ತಿದ್ದರು.
ಈಗ ಜೈಲರ್ ಸಿನಿಮಾ ಭಾರತದಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ, ವಿಶ್ವದಾದ್ಯಂತ 600 ಕೋಟಿ ಗಳಿಸಿದ್ದು, ಚಿತ್ರತಂಡ ಇದರ ಸಂಭ್ರಮವನ್ನು ಆಚರಿಸಿದೆ. ಈ ಸಂಭ್ರಮಕ್ಕೆ ರಜನಿಕಾಂತ್ ಸಾಕ್ಷಿಯಾಗಿದ್ದಾರೆ. ಕೊನೆಗೂ ಸಿನಿಮಾ ಸಕ್ಸಸ್ ನಲ್ಲಿ ರಜನಿ ಭಾಗಿಯಾಗಿರುವುದಕ್ಕೆ ಚಿತ್ರತಂಡದ ಜೊತೆಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ತಂಡದ ಜೊತೆ ಕೇಕ್ ಕತ್ತರಿಸಿದ ರಜನಿಕಾಂತ್
ಉತ್ತರ ಭಾರತ ಪ್ರವಾಸದಿಂದ ಹಿಂದಿರುಗಿರುವ ನಟ ರಜನಿಕಾಂತ್ ಚಿತ್ರ ತಂಡದ ಸಂಭ್ರಮಾಚರಣೆಯಲ್ಲಿ ಕೊನೆಗೂ ಭಾಗಿಯಾಗಿದ್ದಾರೆ. ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ರಜನಿಕಾಂತ್ ತಮ್ಮ ತಂಡದ ಸದಸ್ಯರೊಂದಿಗೆ ವಿಶೇಷ ಕೇಕ್ ಕತ್ತರಿಸಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಪೊನ್ನಿಯಿನ್ ಸೆಲ್ವನ್ 2 ಅನ್ನು ಬಿಟ್ಟು ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಲನಚಿತ್ರವಾಗಿದೆ.
ಚಲನಚಿತ್ರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಟ್ವಿಟರ್‌ನಲ್ಲಿ ಜೈಲರ್ ಸಕ್ಸಸ್ ಆಚರಣೆಯ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ಜೈಲರ್ ಯಶಸ್ಸಿನ ಆಚರಣೆ! ಈ ವರ್ಷದ ಅತ್ಯಂತ ಲಾಭದಾಯಕ ಕಾಲಿವುಡ್ ಚಲನಚಿತ್ರ..." ಎಂದು ಶೀರ್ಷಿಕೆ ನೀಡಿದ್ದಾರೆ.

ಜೈಲರ್ ಸಂಭ್ರಮಾಚರಣೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ರಜನಿಕಾಂತ್ ಅಭಿಮಾನಿಗಳು ಟ್ವಿಟರ್‌ನಲ್ಲಿ 'ತಲೈವರ್ 170' ಅನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದ್ದಾರೆ. 'ತಲೈವರ್ 170' ರಜನಿಕಾಂತ್ ಅವರ ಮುಂದಿನ ಚಿತ್ರವಾಗಿದ್ದು, ಇದರ ಮಹೂರ್ತಕ್ಕಾಗಿ ಪೂಜೆ ನಡೆಯುತ್ತಿದೆ ಎಂಬ ವದಂತಿಗಳು ಹರಡಿದ್ದವು .
ಜೈಲರ್
ಜೈಲರ್ ಆಗಸ್ಟ್ 10 ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು. ಇದು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಕ್ರಮವಾಗಿ 400 ಕೋಟಿ ಮತ್ತು 100 ಕೋಟಿ ದಾಟಿದೆ. ಭಾರತದಲ್ಲಿ 300 ಕೋಟಿ ದಾಖಲೆಯನ್ನು ಮಾಡಿರುವ ಜೈಲರ್ ವಿಶ್ವಾದ್ಯಂತ 600 ಕೋಟಿ ಗಡಿ ದಾಟಿದ್ದಾರೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ವಿಶೇಷ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಮಗ್ರ ತಾರಾಗಣದಲ್ಲಿ ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಿನಾಯಕನ್ ಮತ್ತು ಯೋಗಿ ಬಾಬು ಇದ್ದಾರೆ. ಇದಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ.
ರಜನಿಕಾಂತ್ ಅವರ ಹೊಸ ಚಿತ್ರ 'ತಲೈವರ್ 170'
ರಜನಿಕಾಂತ್ ತಮ್ಮ 170ನೇ ಚಿತ್ರದ ಚಿತ್ರೀಕರಣ ಆರಂಭಿಸಲಿದ್ದಾರೆ. ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ತಲೈವರ್ 170 ಎಂಬ ಶೀರ್ಷಿಕೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. 'ತಲೈವರ್ 170' ಯಲ್ಲಿ ಅಮಿತಾಬ್ ಬಚ್ಚನ್, ಮಂಜು ವಾರಿಯರ್, ಫಹಾದ್ ಫಾಸಿಲ್ ಮತ್ತು ಶರ್ವಾನಂದ್ ನಟಿಸಿದ್ದಾರೆ ಎಂಬ ಮಾಹಿತಿಯಿದೆ.
ನಟ ರಜನಿಕಾಂತ್ ಪ್ರವಾಸ
ಜೈಲರ್ ಬಿಡುಗಡೆಗೂ ಮುನ್ನ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದ ನಟ ರಜನಿಕಾಂತ್ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಜಾರ್ಖಂಡ್‌ನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದರು. ಅವುಗಳಲ್ಲಿ ಚಮೋಲಿಯ ಬದರಿನಾಥ ದೇವಾಲಯ, ರಾಮ ಜನ್ಮಭೂಮಿ ಮತ್ತು ಅಯೋಧ್ಯೆಯ ಹನುಮಾನ್ ಗರ್ಹಿ ದೇವಾಲಯಗಳು ಸೇರಿದ್ದವು.


Click it and Unblock the Notifications











