ಖಾಕಿ ತೊಟ್ಟ ಸೂಪರ್ ಸ್ಟಾರ್ ಮುಂಬೈನಲ್ಲಿ 'ದರ್ಬಾರ್'

ಕಬಾಲಿ, ಕಾಲಾ ಚಿತ್ರಗಳ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಪೇಟಾ ಎಂಬ ಮಾಸ್ ಸಿನಿಮಾ ಮಾಡಿದ್ದರು. ಪಕ್ಕಾ ಲೋಕಲ್ ಆಗಿ ನಟಿಸಿದ್ದ ಈ ಚಿತ್ರದಲ್ಲಿ ತಲೈವಾ ಅಭಿಮಾನಿಗಳಿಗೆ ಇಷ್ಟ ಆಗಿದ್ದರು.

ಅದಾದ ಬಳಿಕ ಈಗ ಎ.ಆರ್ ಮುರುಗದಾಸ್ ಜೊತೆ ದರ್ಬಾರ್ ಸಿನಿಮಾ ಮಾಡ್ತಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈಗ ಎರಡು ಎಚ್.ಡಿ ಪೋಸ್ಟರ್ ರಿಲೀಸ್ ಆಗಿದೆ.

ಹೊಸ ಪೋಸ್ಟರ್ ಗಳು ಸಖತ್ ಸ್ಟೈಲಿಶ್ ಆಗಿದ್ದು, ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ ದರ್ಬಾರ್ ಟಾಪ್ ನಲ್ಲಿತ್ತು. ಅಂದ್ಹಾಗೆ, ಈ ಚಿತ್ರದಲ್ಲಿ ತಲೈವಾ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಈಗಾಗಲೇ ಖಾಕಿ ತೊಟ್ಟಿದ್ದ ರಜನಿಯ ವರ್ಕಿಂಗ್ ಚಿತ್ರ ಗಮನ ಸೆಳೆದಿತ್ತು. ಇದೀಗ, ಅಧಿಕೃತವಾಗಿ ಪೊಲೀಸ್ ಗೆಟಪ್ ನಲ್ಲಿರುವ ರಜನಿ ಫೋಟೋ ಬಹಿರಂಗವಾಗಿದೆ.

Rajinikanth Darbar Movie New Poster Released

ಸುಮಾರು ಎರಡು ದಶಕದ ನಂತರ ರಜನಿಕಾಂತ್ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದು, ಸಹಜವಾಗಿ ಕುತೂಹಲ ಹೆಚ್ಚಿಸಿದೆ. ಇನ್ನುಳಿದಂತೆ ನಯನತಾರ ಈ ಚಿತ್ರದಲ್ಲಿ ನಾಯಕಿಯಾಗಿದ್ದು, ನವಾಬ್ ಶಾ, ಸುನೀಲ್ ಶೆಟ್ಟಿ ಮತ್ತು ಪ್ರತೀಕ್ ಬಬ್ಬರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೊಂದು ಮೂಲದ ಪ್ರಕಾರ ರಜನಿಕಾಂತ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ಲೈಕಾ ಪ್ರೊಡಕ್ಷನ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ತಮಿಳಿನ ದೊಡ್ಡ ಸಿನಿಮಾ ಇದಾಗಲಿದೆಯಂತೆ.

More from Filmibeat

English summary
Director ar murugadoss has reveled Thalaivar's Rage and Cool Look from Darbar movie. the movie directed by ar murugadoss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X