For Quick Alerts
  ALLOW NOTIFICATIONS  
  For Daily Alerts

  ಸೌತ್ ಸಿನಿ ಬಾತ್: ರವಿಶಂಕರ್ ಗುರೂಜಿ ಭೇಟಿ ಮಾಡಿದ ರಜನಿ, ನಾಗ್ ಹೊಸ ಸಿನಿಮಾ

  |

  ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಮಕ್ಕಳು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ. ವರದಿಗಳ ಪ್ರಕಾರ ಬೆಂಗಳೂರಿನ ಅಶ್ರಮಕ್ಕೆ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

  ಇತ್ತೀಚಿಗಷ್ಟೆ ಅಣ್ಣಾತ್ತೆ ಸಿನಿಮಾ ಚಿತ್ರೀಕರಣ ಮುಗಿಸಿರುವ ರಜನಿಕಾಂತ್ ಬೆಂಗಳೂರಿನ ರವಿಶಂಕರ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ರಜನಿಕಾಂತ್ ಜೊತೆ ಪುತ್ರಿಯರಾದ ಐಶ್ವರ್ಯ ಮತ್ತು ಸೌಂದರ್ಯ ಜೊತೆಯಲ್ಲಿದ್ದರು.

  ಚಿತ್ರಮಂದಿರಕ್ಕೆ ನೋ, ಟಿವಿ-ಒಟಿಟಿಗೆ ಜೈ ಎಂದ ವಿಜಯ್ ಸೇತುಪತಿ ಚಿತ್ರಚಿತ್ರಮಂದಿರಕ್ಕೆ ನೋ, ಟಿವಿ-ಒಟಿಟಿಗೆ ಜೈ ಎಂದ ವಿಜಯ್ ಸೇತುಪತಿ ಚಿತ್ರ

  ಇನ್ನು ತಮಿಳಿನ ಹಾಸ್ಯ ನಟ ವಡಿವೇಲು ಸಹ ರವಿಶಂಕರ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿರುವುದು ವಿಶೇಷ. ಈ ಫೋಟೋವೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗೆ ಒಂದೇ ಸಮಯದಲ್ಲಿ ಇಬ್ಬರು ತಮಿಳು ನಟರು ರವಿಶಂಕರ್ ಗುರೂಜಿ ಭೇಟಿ ಮಾಡಿರುವುದು ಗಮನಾರ್ಹ. ಈ ಸುದ್ದಿಯ ಜೊತೆ ಸೌತ್ ಇಂಡಸ್ಟ್ರಿಯಲ್ಲಿ ಬೇರೆ ಯಾವೆಲ್ಲ ಸಿನಿಮಾ ಸುದ್ದಿಗಳಿವೆ? ಮುಂದೆ ಓದಿ...

  ನಾಗಾರ್ಜುನ ಹೊಸ ಸಿನಿಮಾ

  ನಾಗಾರ್ಜುನ ಹೊಸ ಸಿನಿಮಾ

  ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷವಾಗಿ ಇಂದು (ಆಗಸ್ಟ್ 29) ಹೊಸ ಸಿನಿಮಾ ಘೋಷಣೆಯಾಗಿದೆ. ಪ್ರವೀಣ್ ಸತ್ತರು ನಿರ್ದೇಶನದಲ್ಲಿ ತಯಾರಾಗಲಿರುವ ಈ ಚಿತ್ರಕ್ಕೆ 'ದಿ ಗೋಸ್ಟ್' ಎಂದು ಹೆಸರಿಟ್ಟಿದ್ದು, ಕಾಜಲ್ ಅಗರ್ ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಇದೇ ದಿನ ನಾಗಾರ್ಜುನ ಅಭಿನಯಿಸಲಿರುವ 'ಬಂಗಾರರಾಜು' ಚಿತ್ರದ ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ.

  ಶ್ರುತಿ ಹಾಸನ್ ಹಳೆಯ ಫೋಟೋ

  ಶ್ರುತಿ ಹಾಸನ್ ಹಳೆಯ ಫೋಟೋ

  ದಕ್ಷಿಣ ಭಾರತದ ಖ್ಯಾತ ಸಿನಿತಾರೆ ಶ್ರುತಿ ಹಾಸನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 17ನೇ ವಯಸ್ಸಿನಲ್ಲಿ ಶ್ರುತಿ ಹಾಸನ್ ಮಾಡಲಿಂಗ್‌ಗಾಗಿ ಮಾಡಿಸಿದ ಫೋಟೋಶೂಟ್ ಚಿತ್ರಗಳು ಶೇರ್ ಮಾಡಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ 'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್ ಅಭಿನಯಿಸುತ್ತಿದ್ದಾರೆ.

  ಪವರ್ ಸ್ಟಾರ್ ಕೈಯಲ್ಲಿದೆ 5 ಚಿತ್ರಗಳು, ಯಾವುದಕ್ಕೆ ಹೆಚ್ಚು ಕಾಯ್ತಿದ್ದೀರಾ?ಪವರ್ ಸ್ಟಾರ್ ಕೈಯಲ್ಲಿದೆ 5 ಚಿತ್ರಗಳು, ಯಾವುದಕ್ಕೆ ಹೆಚ್ಚು ಕಾಯ್ತಿದ್ದೀರಾ?

  ಪಿವಿ ಸಿಂಧು ಗೌರವಿಸಿದ ಮೆಗಾಸ್ಟಾರ್

  ಪಿವಿ ಸಿಂಧು ಗೌರವಿಸಿದ ಮೆಗಾಸ್ಟಾರ್

  ಟೋಕಿಯೋ ಒಲಂಪಿಕ್‌ನಲ್ಲಿ 2020ರಲ್ಲಿ ಕಂಚಿನ ಪದ ಗೆದ್ದಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರಿಗೆ ಮೆಗಾಸ್ಟಾರ್ ಚಿರಂಜೀವಿ ತಮ್ಮ ಮನೆಗೆ ಆಹ್ವಾನಿಸಿ ಅಭಿನಂದಿಸಿದರು. ಈ ವೇಳೆ ಚಿರಂಜೀವಿ, ರಾಮ್ ಚರಣ್ ತೇಜ, ವರುಣ್ ತೇಜ, ರಾಣಾ ದಗ್ಗುಬಾಟಿ, ನಾಗಾರ್ಜುನ, ವೈಷ್ಣವ್ ತೇಜ, ಸಾಯಿ ಧರಮ್ ತೇಜ ಭಾಗಿಯಾಗಿದ್ದರು.

  ಪೊನ್ನಿಯನ್ ಸೆಲ್ವನ್ ಮುಗಿಸಿದ ವಿಕ್ರಮ್

  ಪೊನ್ನಿಯನ್ ಸೆಲ್ವನ್ ಮುಗಿಸಿದ ವಿಕ್ರಮ್

  ಜಯಂ ರವಿ, ಐಶ್ವರ್ಯ ರೈ ಬಚ್ಚನ್ ನಂತರ ನಟ ಚಿಯಾನ್ ವಿಕ್ರಂ ಸಹ ಪೊನ್ನಿಯನ್ ಸೆಲ್ವನ್ ಚಿತ್ರೀಕರಣ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ. ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ ಮೆಗಾ ಸಿನಿಮಾ ಇದಾಗಿದ್ದು, ದಕ್ಷಿಣ ಭಾರತದ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ತ್ರಿಷಾ, ಪ್ರಕಾಶ್ ರಾಜ್, ವಿಕ್ರಂ ಪ್ರಭು, ವಿಕ್ರಂ, ಐಶ್ವರ್ಯ ಲಕ್ಷ್ಮಿ, ಪಾರ್ಥಿಬನ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.

  ಅಣ್ಣಾತ್ತೆ ಸಾಹಸ ದೃಶ್ಯ ಮುಕ್ತಾಯ

  ಅಣ್ಣಾತ್ತೆ ಸಾಹಸ ದೃಶ್ಯ ಮುಕ್ತಾಯ

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ ಅಣ್ಣಾತ್ತೆ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ಮುಕ್ತಾಯವಾಗಿದೆ. ರಜನಿಕಾಂತ್ ಸಹ ತಮ್ಮ ಭಾಗದ ಪೂರ್ಣ ಶೂಟಿಂಗ್ ಮುಗಿಸಿದ್ದಾರೆ ಎಂಬ ಮಾಹಿತಿ ಇದೆ. ಸಿರುತೈ ಶಿವ ನಿರ್ದೇಶನದ ಈ ಚಿತ್ರದಲ್ಲಿ ನಯನತಾರ, ಕೀರ್ತಿ ಸುರೇಶ್, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದ್ದಾರೆ.

  English summary
  Superstar Rajinikanth family and Comedian Vadivelu meets Ravi shankar guruji. telugu actor nagarjuna announce his new film titled As Ghost.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X