»   » 'ತಲೈವಾ' ರಜನಿ ರಾಜಕೀಯಕ್ಕೆ ಬರಲು ಮನಸ್ಸು ಮಾಡಿರುವುದು ಇದೇ ಕಾರಣಕ್ಕೆ.!

'ತಲೈವಾ' ರಜನಿ ರಾಜಕೀಯಕ್ಕೆ ಬರಲು ಮನಸ್ಸು ಮಾಡಿರುವುದು ಇದೇ ಕಾರಣಕ್ಕೆ.!

Posted By: Naveen
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಎಂಟ್ರಿ ಬಗ್ಗೆ ಇಡೀ ದೇಶದಲ್ಲಿಯೇ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಎಲ್ಲರೂ ರಜನಿ ರಾಜಕೀಯಕ್ಕೆ ನಿಜವಾಗಿಯೂ ಬರುತ್ತಾರಾ ಎನ್ನುವ ಕುತೂಹಲದಲ್ಲಿ ಕಾಯುತ್ತಿದ್ದಾರೆ.

ರಜನಿ ಪೊಲಿಟಿಕಲ್ ಕೆರಿಯರ್ ಶುರು ಮಾಡುತ್ತಾರಾ ಎಂಬ ಬಗ್ಗೆ ರಜನಿ ಪರಮಾಪ್ತ ಗೆಳೆಯ ರಾಜ್ ಬಹದ್ದೂರ್ 'ಫಿಲ್ಮಿ ಬೀಟ್ ಕನ್ನಡ'ದ ಜೊತೆ ಮಾತನಾಡಿದ್ದಾರೆ. ರಜನಿ ತಮ್ಮ ರಾಜಕೀಯ ನಡೆ ಬಗ್ಗೆ ರಾಜ್ ಬಹದ್ದೂರ್ ಅವರ ಜೊತೆ ಚರ್ಚೆ ಮಾಡಿದ್ದು, ಆ ವಿಷಯದ ಬಗ್ಗೆ ಒಂದೊಂದು ಅಂಶವನ್ನು ಬಿಚ್ಚಿಟ್ಟಿದ್ದಾರೆ.

ಅಷ್ಟಕ್ಕೂ ಸಿನಿಮಾರಂಗದ ಸೂಪರ್ ಸ್ಟಾರ್ ಆಗಿರುವ ರಜನಿ ರಾಜಕೀಯಕ್ಕೆ ಬರುತ್ತಿರುವುದರ ಹಿಂದೆ ಒಂದು ದೊಡ್ಡ ಕಾರಣ ಇದೆ. ಅದೇನು ಎನ್ನುವ ಕುತೂಹಲ ನಿಮಗೆ ಇದ್ದರೆ, ಮುಂದೆ ಓದಿ.....

ಚರ್ಚೆ ನಡೆಸಿದ್ದರು

''ರಜನಿ ತನ್ನ ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳುವುದಕ್ಕೂ ಮುಂಚೆ ನನ್ನ ಜೊತೆ ಚರ್ಚೆ ಮಾಡುತ್ತಾರೆ. ಈಗ ರಾಜಕೀಯದ ವಿಷಯದ ಬಗ್ಗೆ ಸಹ ರಜನಿ ನನ್ನ ಜೊತೆ ಒಮ್ಮೆ ಮಾತನಾಡಿದ್ದರು'' - ರಾಜ್ ಬಹದ್ದೂರ್, ರಜನಿ ಸ್ನೇಹಿತ

ಬೆಂಗಳೂರಿಗೆ ಬಂದಿದ್ದರು

''ರಜನಿಕಾಂತ್ ಕೆಲ ದಿನಗಳ ಹಿಂದೆ ಮದುವೆ ಸಮಾರಂಭಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಆಗ ನನ್ನ ಜೊತೆ ಸತತ ನಾಲ್ಕು ಗಂಟೆಗಳ ಕಾಲ ಮಾತನಾಡಿದ್ದರು. ನಮ್ಮ ಈ ಚರ್ಚೆ ಹೆಚ್ಚಾಗಿ ರಾಜಕೀಯ ವಿಷಯಗಳನ್ನೇ ಒಳಗೊಂಡಿತ್ತು'' - ರಾಜ್ ಬಹದ್ದೂರ್, ರಜನಿ ಸ್ನೇಹಿತ

ಜನರಿಗಾಗಿ ಏನಾದರು ಮಾಡಬೇಕು

''ನನ್ನ ಜೊತೆ ಮಾತನಾಡುವಾಗ, ''ತಮಿಳು ನಾಡಿನ ಜನ ಸದ್ಯದ ಪರಿಸ್ಥಿತಿಯಲ್ಲಿ ತುಂಬ ಕಷ್ಟದಲ್ಲಿದ್ದಾರೆ. ನಾನು ಅವರಿಗೆ ಏನಾದರೂ ಮಾಡಬೇಕು. ಅನೇಕ ಅಭಿಮಾನಿಗಳು ಒಬ್ಬ ರಾಜಕೀಯ ವ್ಯಕ್ತಿಯಾಗಿ ನನ್ನನ್ನ ನೋಡುವುದಕ್ಕೆ ಇಷ್ಟ ಪಡುತ್ತಿದ್ದಾರೆ'' ಅಂತ ರಜನಿ ಪದೇ ಪದೇ ಹೇಳುತ್ತಿದ್ದ'' - ರಾಜ್ ಬಹದ್ದೂರ್, ರಜನಿ ಸ್ನೇಹಿತ

ರಾಜಕೀಯಕ್ಕೆ ಬರಬೇಕು

''ರಜನಿಕಾಂತ್ ರಾಜಕೀಯಕ್ಕೆ ಬರಬೇಕು ಎನ್ನುವುದು ನನ್ನ ಆಸೆ ಕೂಡ. ಅವನಿಗೆ ರೈತರ, ಕೂಲಿ ಮಾಡುವವರ, ಬಡವರ ಕಷ್ಟ ಗೊತ್ತು. ಯಾಕಂದ್ರೆ, ಅವನು ಒಂದು ಕಾಲದಲ್ಲಿ ಅದನ್ನೆಲ್ಲ ಅನುಭವಿಸಿದ್ದಾನೆ'' - ರಾಜ್ ಬಹದ್ದೂರ್, ರಜನಿ ಸ್ನೇಹಿತ

ಗೊಂದಲ ಆಗಿರಬಹುದು

''ರಜನಿಕಾಂತ್ ರಾಜಕೀಯಕ್ಕೆ ಬರುವ ಬಗ್ಗೆ ಅವರಿಗೂ ಸ್ವಲ್ಪ ಗೊಂದಲ ಇದೆ. ಅಲ್ಲದೆ, ತಮಿಳುನಾಡಿನಲ್ಲಿ ಜಯಲಲಿತಾ ಸಾವಿನ ಬಳಿಕ ಇತ್ತಿಚಿನ ರಾಜಕೀಯ ಬೆಳವಣಿಗೆಯ ಬಗ್ಗೆ ಅವನಿಗೆ ತುಂಬ ಬೇಸರವಿದೆ'' - ರಾಜ್ ಬಹದ್ದೂರ್, ರಜನಿ ಸ್ನೇಹಿತ

ರಜನಿ ರಾಜಕೀಯದ ಕಡೆ ಮನಸು ಮಾಡಿದ್ದು ಇದೇ ಕಾರಣ

''ರಜನಿಕಾಂತ್ ರಾಜಕೀಯಕ್ಕೆ ಬರಬೇಕು ಅಂತ ಮನಸು ಮಾಡಿದ್ದು ಜನರಿಗೆ ಒಳ್ಳೆಯದನ್ನು ಮಾಡಬೇಕು ಎನ್ನುವ ದೃಷ್ಠಿಯಿಂದ. ಬಡತನ ಇರಬಾರದು ಎನ್ನುವುದು ಅವರ ಆಸೆ. ತಮಿಳುನಾಡಿನ ಇತ್ತೀಚಿನ ರಾಜಕೀಯದ ಭ್ರಷ್ಟಾಚಾರ ನೋಡಲಾಗದೆ ರಾಜಕೀಯಕ್ಕೆ ಬರುವ ಆಲೋಚನೆ ಮಾಡಿದ್ದಾನೆ'' - ರಾಜ್ ಬಹದ್ದೂರ್, ರಜನಿ ಸ್ನೇಹಿತ

ಬಾಬಾ ಅಪ್ಪಣೆ ಕೊಡಬೇಕು

''ರಜನಿಕಾಂತ್ ಹಿಮಾಲಯದ ಬಾಬಾ ಒಬ್ಬರನ್ನು ಬಹಳ ನಂಬುತ್ತಾನೆ. ಏನೇ ಮಹತ್ವದ ಕೆಲಸ ಮಾಡಬೇಕಿದ್ದರೂ ಅವನಿಗೆ ಬಾಬಾ ಅಪ್ಪಣೆ ಆಗಬೇಕು. ಇನ್ನು ರಾಜಕೀಯಕ್ಕೆ ಹೋಗುವುದಕ್ಕೆ ಕೂಡ ಬಾಬಾ ಅವರ ಅಪ್ಪಣೆಗಾಗಿ ರಜನಿ ಕಾಯುತ್ತಿದ್ದಾನೆ'' - ರಾಜ್ ಬಹದ್ದೂರ್, ರಜನಿ ಸ್ನೇಹಿತ

ಬಾಬಾ ಹೇಳಿದರೆ ಖಂಡಿತ ಬರುತ್ತಾರೆ

''ಹಾಗೇನಾದರೂ ಬಾಬಾ ಆಶೀರ್ವಾದ ಮಾಡಿದರೆ, ರಜನಿ ಖಂಡಿತ ರಾಜಕೀಯಕ್ಕೆ ಬರುತ್ತಾನೆ. ಅವನ ಮಾತುಗಳಲ್ಲಿ ಕೂಡ ರಾಜಕೀಯಕ್ಕೆ ಬರುವ ಬಯಕೆ ಎದ್ದು ಕಾಣುತ್ತಿದೆ'' - ರಾಜ್ ಬಹದ್ದೂರ್, ರಜನಿ ಸ್ನೇಹಿತ.

English summary
Actor Rajinikanth Friend Raj Bahadur Spoke About Rajinikanth Political Entry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada