twitter
    For Quick Alerts
    ALLOW NOTIFICATIONS  
    For Daily Alerts

    ರಜನಿಕಾಂತ್ ಆಪ್ತ ಸ್ನೇಹಿತ 'ಕಡ್ಡಿ' ರಾಮಚಂದ್ರ ರಾವ್ ನಿಧನ

    |

    ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಪ್ತ ಗೆಳಯ ರಾಮಚಂದ್ರ ರಾವ್ ಬುಧವಾರ (ಆಗಸ್ಟ್ 25) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 73 ವರ್ಷದ ರಾಮಚಂದ್ರರಾವ್ ಪತ್ರಕರ್ತರಾಗಿದ್ದರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಬಿಟ್ಟು ಅಗಲಿದ್ದಾರೆ ಎಂದು ತಿಳಿದು ಬಂದಿದೆ.

    ಕನ್ನಡದ ಖ್ಯಾತ ಸುದ್ದಿ ಪತ್ರಿಕೆ ಸಂಯುಕ್ತ ಕರ್ನಾಟಕದ ನಿವೃತ್ತ ಉದ್ಯೋಗಿ ರಾಮಚಂದ್ರರಾವ್ ಪತ್ರಿಕೆಯಲ್ಲಿ ಸುಮಾರು 39 ವರ್ಷ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿ 2007ರಲ್ಲಿ ನಿವೃತ್ತಿಯಾಗಿದ್ದರು. ರಾಮಚಂದ್ರ ರಾವ್ ನಿಧನಕ್ಕೆ ಸಂಯುಕ್ತ ಕರ್ನಾಟಕ ಸಂಸ್ಥೆ ಸಂತಾಪ ಸೂಚಿಸಿದ್ದು, ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ನಮನ ಸಲ್ಲಿಸಿದೆ.

    ಮತ್ತೆ ಅಜ್ಜನಾಗುತ್ತಿರುವ ನಟ ರಜನೀಕಾಂತ್ಮತ್ತೆ ಅಜ್ಜನಾಗುತ್ತಿರುವ ನಟ ರಜನೀಕಾಂತ್

    ''ಖ್ಯಾತ ನಟ ರಜನಿಕಾಂತ್ ಅವರ ಅಚ್ಚುಮೆಚ್ಚಿನ ಸ್ನೇಹಿತರಾಗಿದ್ದ, 'ಸಂಯುಕ್ತ ಕರ್ನಾಟಕ'ದ ನಿವೃತ್ತ ಉದ್ಯೋಗಿ ರಾಮಚಂದ್ರರಾವ್ (73) ಅವರು ವಿಧಿವಶರಾದರು. 'ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ 39 ವರ್ಷಗಳ ದೀರ್ಘಕಾಲ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿ 2007ರಲ್ಲಿ ನಿವೃತ್ತಿಯಾಗಿದ್ದ ರಾಮಚಂದ್ರರಾವ್ ಅವರನ್ನು ನಟ ರಜನಿಕಾಂತ್ 'ಕಡ್ಡಿ' ಎಂದೇ ಕರೆಯುತ್ತಿದ್ದರಂತೆ. ರಾಮಚಂದ್ರರಾವ್ ಅವರ ನಿಧನದಿಂದ ರಜನಿಕಾಂತ್ ಸ್ನೇಹಿತರ ಹಳೆಯ ಕೊಂಡಿಯೊಂದು ಕಳಚಿದಂತಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಬಂಧು-ಬಳಗ ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ. ರಾಮಚಂದ್ರರಾವ್ ಅವರ ಆತ್ಮಕ್ಕೆ ಆ ದೇವರು ಸದ್ಗತಿ ಕರುಣಿಸಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುವುದರೊಂದಿಗೆ ಲೋಕ ಶಿಕ್ಷಣ ಟ್ರಸ್ಟ್ ನ ಸಂಯುಕ್ತ ಕರ್ನಾಟಕ ಬೆಂಗಳೂರು ಬಳಗ ಶ್ರದ್ಧಾಂಜಲಿ ಸಲ್ಲಿಸಿತು.'' ಎಂದು ಪೋಸ್ಟ್ ಹಾಕಿದೆ. ಮುಂದೆ ಓದಿ...

    ರಜನಿ ಆಪ್ತ 'ಕಡ್ಡಿ' ನೆನಪು ಮಾತ್ರ

    ರಜನಿ ಆಪ್ತ 'ಕಡ್ಡಿ' ನೆನಪು ಮಾತ್ರ

    ಈ ಹಿಂದೆ ಹೇಳಿದಂತೆ ರಜನಿಕಾಂತ್ ಅವರ ಆಪ್ತ ಗೆಳಯರಲ್ಲಿ ರಾಮಚಂದ್ರ ರಾವ್ ಸಹ ಒಬ್ಬರು. ರಜನಿ ಇವರನ್ನು ಪ್ರೀತಿಯಿಂದ 'ಕಡ್ಡಿ' ಎಂದು ಕರೆಯುತ್ತಿದ್ದರು. 1966ರ ಸಮಯದಲ್ಲಿ ರಜನಿಕಾಂತ್, ರಾಮಚಂದ್ರರಾವ್ ಹಾಗೂ ಇನ್ನಿತರ ಸ್ನೇಹಿತರು ಹನುಮಂತನಗರದಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದರು ಎಂದು ಅನೇಕ ಕಡೆ ವರದಿಯಾಗಿದೆ. ವಿಶೇಷವಾಗಿ ರಾಮಚಂದ್ರರಾವ್ ಬಗ್ಗೆ ಹೇಳುವುದಾದರೆ, ಶಿಕ್ಷಣ ಮುಗಿಸಿ ಸಂಯುಕ್ತ ಕರ್ನಾಟಕದಲ್ಲಿ ಪ್ರೂಫ್ ರೀಡರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರಂತೆ. ರಜನಿಕಾಂತ್ ಸಹ ನಾಲ್ಕೈದು ತಿಂಗಳು ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡಿದ್ದರು ಎಂದು ಹೇಳಲಾಗಿದೆ.

    ರಾಮಚಂದ್ರರಾವ್‌ಗೆ ಸಹಾಯ ಮಾಡಿದ್ದರು

    ರಾಮಚಂದ್ರರಾವ್‌ಗೆ ಸಹಾಯ ಮಾಡಿದ್ದರು

    ರಾಮಚಂದ್ರರಾವ್ ಅವರನ್ನು ಭೇಟಿ ಮಾಡಲು ಮತ್ತು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ರಜನಿಕಾಂತ್ ಹಲವು ಬಾರಿ ಸಂಯುಕ್ತ ಕರ್ನಾಟಕ ಕಚೇರಿಗೆ ಭೇಟಿ ನೀಡಿದ್ದರು ಎಂದು ಲೋಕ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಉಮೇಶ್ ಭಟ್ ರಾವ್ ಹೇಳಿರುವುದು 2018ರ ನ್ಯೂಸ್ 18 ವರದಿಯಲ್ಲಿ ಉಲ್ಲೇಖವಾಗಿದೆ.

    'ಅಣ್ಣಾತ್ತೆ' ಎಂಟ್ರಿಯಲ್ಲಿ ಬದಲಾವಣೆ ಇಲ್ಲ, ನಿರ್ಧರಿಸಿದ ದಿನಕ್ಕೆ ಬರ್ತಾರೆ ತಲೈವಾ'ಅಣ್ಣಾತ್ತೆ' ಎಂಟ್ರಿಯಲ್ಲಿ ಬದಲಾವಣೆ ಇಲ್ಲ, ನಿರ್ಧರಿಸಿದ ದಿನಕ್ಕೆ ಬರ್ತಾರೆ ತಲೈವಾ

    ಸ್ನೇಹಿತನಿಗಾಗಿ ಕಚೇರಿ ಬರುತ್ತಿದ್ದರು

    ಸ್ನೇಹಿತನಿಗಾಗಿ ಕಚೇರಿ ಬರುತ್ತಿದ್ದರು

    ''ನಾನು ಎಚ್‌ಆರ್ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಂದಿಗೆ ಈ ವಿಚಾರವಾಗಿ ಪರಿಶೀಲಿಸಿದ್ದೆ. ನಮ್ಮ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡುತ್ತಿರುವ ರಾಮಚಂದ್ರ ರಾವ್ ಅವರು ರಜನಿಕಾಂತ್ ಅವರ ಆಪ್ತ ಸ್ನೇಹಿತರು ಎಂದು ತಿಳಿಯಿತು. ರಜನಿಕಾಂತ್ ಅವರು ತಮ್ಮ ಸ್ನೇಹಿತನನ್ನು ಭೇಟಿ ಮಾಡಲು ನಮ್ಮ ಕಚೇರಿಗೆ ಬರುತ್ತಿದ್ದರು. ಅವರು ಸಹಾಯ ಮಾಡುತ್ತಿದ್ದರು. ಆದರೆ ಇದು ಅವರ ಖಾಸಗಿ ಆಗಿತ್ತು. ರಜನಿಕಾಂತ್ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಕೆಲವು ವರ್ಷಗಳ ಹಿಂದೆ ನಿವೃತ್ತರಾದ ಅವರ ಸ್ನೇಹಿತ ರಾಮಚಂದ್ರ ರಾವ್ ಅವರಿಗೆ ಸಹಾಯ ಮಾಡುತ್ತಿದ್ದರು.'' ಎಂದು ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಉಮೇಶ್ ಭಟ್ ರಾವ್ ನ್ಯೂಸ್ 18 ಜೊತೆ ಮಾಹಿತಿ ಹಂಚಿಕೊಂಡಿದ್ದರು.

    ದೀಪಾವಳಿಗೆ 'ಅಣ್ಣಾತ್ತೆ' ಬಿಡುಗಡೆ

    ದೀಪಾವಳಿಗೆ 'ಅಣ್ಣಾತ್ತೆ' ಬಿಡುಗಡೆ

    ರಜನಿಕಾಂತ್ ಸಿನಿಮಾ ವಿಚಾರಕ್ಕೆ ಬಂದ್ರೆ ಸಿರುತೈ ಶಿವ ನಿರ್ದೇಶನದಲ್ಲಿ 'ಅಣ್ಣಾತ್ತೆ' ಸಿನಿಮಾ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ನಯನತಾರಾ, ಕೀರ್ತಿ ಸುರೇಶ್ ಪ್ರಮುಖ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಹಿರಿಯ ನಟಿಯರಾದ ಮೀನಾ ಮತ್ತು ಖುಷ್ಬೂ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ಇದೆ. ಸದ್ಯಕ್ಕೆ ಚಿತ್ರತಂಡ ಘೋಷಿಸಿರುವ ಪ್ರಕಾರ, ದೀಪಾವಳಿ ಪ್ರಯುಕ್ತ ನವೆಂಬರ್ 4 ರಂದು ಅಣ್ಣಾತ್ತೆ ಸಿನಿಮಾ ತೆರೆಗೆ ಬರಲಿದೆ.

    English summary
    Superstar Rajinikanth friend Ramachandra Rao passed away on wednesdady (august 25).
    Thursday, August 26, 2021, 13:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X