»   » ನೂತನ ದಂಪತಿಗಳಿಗೆ ರಾಯರ ಪಟ ಕೊಟ್ಟ ರಜನಿ

ನೂತನ ದಂಪತಿಗಳಿಗೆ ರಾಯರ ಪಟ ಕೊಟ್ಟ ರಜನಿ

Posted By:
Subscribe to Filmibeat Kannada

ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ತಾರಾ ಜೋಡಿಗೆ ಸೂಪರ್ ಸ್ಟಾರ್ ರಜನಿಕಾಂತ್ ರಾಯರ ಪಟವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ನೂತನ ದಂಪತಿಗಳು ಬೇರಾರು ಅಲ್ಲ ಸ್ನೇಹಾ ಹಾಗೂ ಪ್ರಸನ್ನ. ಇವರಿಬ್ಬರ ಮದುವೆಗೆ ರಜನಿ ಹೋಗಲು ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ ಅವರು ಕೊಂಚ ಬಿಡುವು ಮಾಡಿಕೊಂಡು ಸ್ನೇಹಾ ಪ್ರಸನ್ನ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಅವರ ಅನಿರೀಕ್ಷಿತ ಆಗಮನದಿಂದ ನೂತನ ದಂಪತಿಗಳು ಕೊಂಚ ಗಲಿಬಿಲಿಯಾಗಿದ್ದಾರೆ. ಬಳಿಕ ಸಾವರಿಸಿಕೊಂಡು ರಜನಿ ಅವರನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ರಜನಿ ಇಬ್ಬರನ್ನೂ ನಿಮ್ಮ ಸಂಸಾರ ಜೀವನ ಹಾಲುಜೇನಿನಂತಿರಲಿ ಎಂದು ಶುಭಹಾರೈಸಿದ್ದಾರೆ.

ಇವರಿಬ್ಬರಿಗೂ ವಿಶೇಷವಾಗಿ ತಯಾರಿಸಿದ ಗುರು ರಾಯರ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ರಾಯರ ಕೃಪೆ ನಿಮಗಿರಲಿ ಎಂದಿದ್ದಾರೆ. ಒಟ್ಟಿನಲ್ಲಿ ಸೂಪರ್ ಸ್ಟಾರ್ ಆಗಮನದಿಂದ ಸ್ನೇಹಾ ಮತ್ತು ಪ್ರಸನ್ನ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ರಜನಿ ಭೇಟಿಯ ಚಿತ್ರವನ್ನು ಅವರಿಬ್ಬರೂ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ನೀವೀಗ ನೋಡುತ್ತಿರುವುದು ಅದೇ ಚಿತ್ರ. (ಏಜೆನ್ಸೀಸ್)

English summary
Super Star Rajinikanth has recently visited the star couple after their wedding and blessed the newly married couple Sneha and Prasanna. He also gifted them a specially painted photograph of Raghavendra Swamy.The star couple were so delighted about Rajinikanth’s gesture.
Please Wait while comments are loading...