twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲೇ ಮಾತನಾಡಿದ ರಜನಿ : 'ಕಾಲಾ' ಬಿಡುಗಡೆಗೆ ಮನವಿ

    By Pavithra
    |

    Recommended Video

    ಕನ್ನಡಿಗರಿಗೆ ಕನ್ನಡದಲ್ಲೇ ಮನವಿ ಮಾಡಿಕೊಂಡ ರಜಿನಿ | Oneindia Kannada

    ನಾಳೆ ದೇಶದಾದ್ಯಂತ ಬಿಡುಗಡೆ ಆಗಬೇಕಿರುವ 'ಕಾಲಾ' ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂದು ಕನ್ನಡ ಪರ ಹೋರಾಟಗಾರರು ನಿರ್ಧಾರ ಮಾಡಿದ್ದಾರೆ. ಕಾವೇರಿ ವಿಚಾರವಾಗಿ ರಜನಿಕಾಂತ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಕನ್ನಡಿಗರು ಸಿನಿಮಾವನ್ನ ರಿಲೀಸ್ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ಸೇರಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೂ ಮನವಿ ಸಲ್ಲಿಸಿದ್ದಾರೆ.

    ಈಗಾಗಲೇ ಕರ್ನಾಟಕ ಹೈಕೋರ್ಟ್ ಸಿನಿಮಾ ಬಿಡುಗಡೆ ಸಮಯದಲ್ಲಿ ಡಿಐಜಿ, ಐಜಿಪಿಗಳು ಭದ್ರತೆಯ ಮೇಲುಸ್ತುವಾರಿ ವಹಿಸಬೇಕು ಎಂದಿದೆ. ಅಲ್ಲದೆ ಚಿತ್ರತಂಡವು ಚಿತ್ರ ಪ್ರದರ್ಶನದ ವಿವರಗಳನ್ನು ಪೊಲೀಸ್‌ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದು ಸೂಚಿಸಿದೆ.

    'ಕಾಲಾ' ಚಿತ್ರದ ಪರವಾಗಿ ನಿಂತ ಕರ್ನಾಟಕ ಹೈ ಕೋರ್ಟ್'ಕಾಲಾ' ಚಿತ್ರದ ಪರವಾಗಿ ನಿಂತ ಕರ್ನಾಟಕ ಹೈ ಕೋರ್ಟ್

    Rajinikanth has met the press for Kaala movie Ban in Karnataka

    ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ರಜನಿಕಾಂತ್ ಕರ್ನಾಟಕ ವಾಣಿಜ್ಯ ಮಂಡಳಿ ಸಿನಿಮಾವನ್ನು ಬಿಡುಗಡೆ ಮಾಡಲು ವಿರೋಧ ವ್ಯಕ್ತ ಪಡಿಸುತ್ತಿರುವುದು ಆಶ್ಚರ್ಯ ತಂದಿದೆ. ಆದರೆ ಕುಮಾರಸ್ವಾಮಿ ಅವರ ಮೇಲೆ ನಂಬಿಕೆ ಇದೆ ಎಂದಿದ್ದಾರೆ. ಅದಷ್ಟೇ ಅಲ್ಲದೆ ಕನ್ನಡದಲ್ಲೇ ಮಾತನಾಡಿದ ರಜನಿಕಾಂತ್ ಕರ್ನಾಟಕದ ಸಹೋದರ ಸಹೋದರಿಯರೇ ನಾನು ಯಾವುದೇ ತಪ್ಪು ಮಾಡಿಲ್ಲ.

    "ಸುಪ್ರೀಂ ಕೋರ್ಟ್ ಏನು ಹೇಳಿತ್ತು ಅದನ್ನೇ ನಾನು ಹೇಳಿದ್ದೇನೆ. ಯಾರೆಲ್ಲಾ ಸಿನಿಮಾವನ್ನ ನೋಡಬೇಕು ಅಂತಿದ್ದಾರೋ ಅದಕ್ಕೆ ಅವಕಾಶ ಮಾಡಿಕೊಡಿ. ಸಿನಿಮಾ ಬಿಡುಗಡೆ ಮಾಡಲು ಯಾವುದೇ ತೊಂದರೆ ಕೊಡಬೇಡಿ ಎಂದು ನಾನು ನಮ್ರತೆಯಿಂದ ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.

    English summary
    Actor Rajinikanth has met the press for 'Kaala' movie Ban in Karnataka. Rajinikanth Speaking in Kannada in press conference. Kala Cinema is releasing on June 7th
    Wednesday, June 6, 2018, 11:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X