ಕನ್ನಡದಲ್ಲಿ ಸದ್ಯಕ್ಕಿಲ್ಲ ರಜನಿ 'ಪೇಟಾ', ತಲೈವಾ ಧ್ವನಿಯಲ್ಲಿ ಕನ್ನಡ.!

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ' ಸಿನಿಮಾ ಜನವರಿ 10 ರಂದು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಕನ್ನಡದಲ್ಲೂ ಪೇಟಾ ಬರಬೇಕಿತ್ತು. ಬಟ್, ಕನ್ನಡ ವರ್ಷನ್ ಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.

ಹೌದು, ಮೂಲ ಭಾಷೆಯ ಜೊತೆ ಕನ್ನಡದಲ್ಲೂ ಪೇಟಾ ರಿಲೀಸ್ ಆಗಬೇಕಿತ್ತು. ಆದ್ರೆ, ಕನ್ನಡದಲ್ಲಿ ಸ್ವತಃ ರಜನಿಕಾಂತ್ ಧ್ವನಿಯಲ್ಲೇ ಡಬ್ ಮಾಡಿಸುವ ಉದ್ದೇಶದಿಂದ ಡಬ್ಬಿಂಗ್ ಕೆಲಸಕ್ಕೆ ಬ್ರೇಕ್ ಹಾಕಲಾಗಿದೆಯಂತೆ.

ಹೀಗಂತ ಪೇಟಾ ಚಿತ್ರದ ಕರ್ನಾಟಕದ ವಿತರಕ ಜಾಕ್ ಮಂಜು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ''ರಜನಿಕಾಂತ್ ಅವರ ವಾಯ್ಸ್ ನಲ್ಲೇ ಪೇಟಾ ಸಿನಿಮಾ ಕನ್ನಡಕ್ಕೆ ಡಬ್ ಆದ್ರೆ ಚೆನ್ನಾಗಿರುತ್ತೆ. ಅದಕ್ಕಾಗಿಯೇ ಕಾಯುತ್ತಿದ್ದೇವೆ, ಅವರೊಂದಿಗೆ ಮಾತನಾಡಿದ ಬಳಿಕ ಡಬ್ ಮಾಡುತ್ತೇವೆ'' ಎಂದಿದ್ದಾರೆ. ಹಾಗಿದ್ರೆ, ಪೇಟಾ ಕನ್ನಡದಲ್ಲಿ ಯಾವಾಗ ಬರುತ್ತೆ?

ಒಂದೆರಡು ವಾರ ಮುಂದಕ್ಕೆ

ಒಂದೆರಡು ವಾರ ಮುಂದಕ್ಕೆ

ಜನವರಿ 10 ರಂದು ಪೇಟಾ ಮೂಲ ಭಾಷೆಯಲ್ಲಿ ಬರ್ತಿದೆ. ಆದ್ರೆ, ಆ ದಿನ ಕನ್ನಡದಲ್ಲಿ ಬರ್ತಿಲ್ಲ. ಒಂದೆರಡು ವಾರ ಬಿಟ್ಟು ಕನ್ನಡದಲ್ಲಿ ಬಿಡುಗಡೆ ಮಾಡಲು ಡಬ್ಬಿಂಗ್ ತಂಡ ನಿರ್ಧರಿಸಿದೆ. ಇಲ್ಲಿಯವರೆಗೂ ಪೇಟಾ ಕನ್ನಡದಲ್ಲಿ ಡಬ್ ಆಗಿಲ್ಲ ಎಂಬುದು ಖಚಿತವಾಗಿದೆ.

ರಜನಿ ಒಪ್ಪುತ್ತಾರಾ?

ರಜನಿ ಒಪ್ಪುತ್ತಾರಾ?

ರಜನಿಕಾಂತ್ ಅವರ ಕನ್ನಡದಲ್ಲಿ ಸರಗವಾಗಿ ಮಾತನಾಡಬಲ್ಲರು. ಅವರ ಧ್ವನಿಯಲ್ಲೇ ಡಬ್ ಮಾಡಿದ್ರೆ ಆ ಚಿತ್ರಕ್ಕೆ ಮೌಲ್ಯ ಹೆಚ್ಚಲಿದೆ ಎಂಬ ಮಾತಿದೆ. ಸದ್ಯದ ಪರಿಸ್ಥಿತಿಯಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ವಿರೋಧವೂ ಇದೆ. ಇಂತಹ ಸಂದರ್ಭದಲ್ಲಿ ರಜನಿಕಾಂತ್ ಡಬ್ ಮಾಡಲು ಒಪ್ಪುತ್ತಾರಾ ಗೊತ್ತಿಲ್ಲ.

ಏಕಕಾಲದಲ್ಲಿ ಪೇಟಾ ಬರಲಿ

ಏಕಕಾಲದಲ್ಲಿ ಪೇಟಾ ಬರಲಿ

ತಮಿಳು, ತೆಲುಗು ಮತ್ತು ಹಿಂದಿ ಜೊತೆ ಕನ್ನಡದಲ್ಲೂ ಏಕಕಾಲದಲ್ಲಿ ಪೇಟಾ ಬಿಡುಗಡೆಯಾಗಲಿ. ಇಲ್ಲವಾದಲ್ಲಿ ಬೇಡ ಎಂದು ವಿರೋಧಿಸುವವರು ಇದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪೇಟಾ ಕನ್ನಡ ಚಿತ್ರಕ್ಕೆ ರಜನಿ ಡಬ್ ಮಾಡ್ತಾರಾ ಕಾದುನೋಡಬೇಕಿದೆ.

ಪೇಟಾ ಚಿತ್ರದ ಬಗ್ಗೆ....

ಪೇಟಾ ಚಿತ್ರದ ಬಗ್ಗೆ....

ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿರುವ ಪೇಟಾ ಚಿತ್ರದಲ್ಲಿ ರಜನಿಕಾಂತ್ ಡಿಫ್ರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಮ್ರಾನ್, ತ್ರಿಷಾ, ವಿಜಯ್ ಸೇತುಪತಿ, ಶಶಿಕುಮಾರ್, ನವಾಜ್ಜುದ್ದಿನ್ ಸಿದ್ದಿಕಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸನ್ ಮೂವಿ ಪಿಕ್ಚರ್ಸ್ ವತಿಯಲ್ಲಿ ಕಳಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Superstar Rajinikanth staring ‘Petta’ is all set to release across the country this week and the Kannada version of the film will also be released after a couple of days. According to the reports, ‘Rajinikanth himself might be dubbing for ‘Petta’ in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X