'ಕಾವೇರಿ' ಜೊತೆಗೆ 'ಕಾಲಾ'ಗೆ ಕಾಡುತ್ತಿರುವ 5 ವಿವಾದಗಳು.!

By Bharath Kumar

Recommended Video

ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡಿದೆ ಕಾಲಾ ಸಿನಿಮಾ | Filmibeat Kannada

ತಮಿಳು ನಟ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರಕ್ಕೆ ಕರ್ನಾಟಕದಲ್ಲಿ ಇಷ್ಟೆಲ್ಲಾ ಕಷ್ಟ-ಸಂಕಷ್ಟ ಆಗಲು ಕಾವೇರಿ ವಿಚಾರದಲ್ಲಿ ರಜನಿ ನೀಡಿದ್ದ ಹೇಳಿಕೆ ಕಾರಣ. ಇದು ನಿಜ ಕೂಡ.

ಆದ್ರೆ, ಕಾವೇರಿ ವಿವಾದದ ಜೊತೆಗೆ 'ಕಾಲಾ' ಚಿತ್ರವನ್ನ ಬೇರೆ ಬೇರೆ ವಿವಾದಗಳು ಒಟ್ಟಿಗೆ ಕಾಡುತ್ತಿದೆ. ಈ ಎಲ್ಲ ವಿವಾದಗಳ ಪರಿಣಾಮ ಸಿನಿಮಾ ಎಲ್ಲಿ ನಿಂತೋಗುತ್ತೋ ಎಂಬ ಆತಂಕ ಚಿತ್ರತಂಡವನ್ನ ಕಾಡುತ್ತಿದೆ.

ಇದರ ಮುಂದುವರೆದ ಭಾಗವೆಂಬಂತೆ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡರಲ್ಲೂ ಕಾಲಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಿದ್ದರೂ 'ಕಾಲಾ'ಗೆ ಕಾಡುತ್ತಿದೆ ಉಳಿದ ವಿವಾದಗಳು. ಹಾಗಿದ್ರೆ, 'ಕಾಲಾ' ಸಿನಿಮಾ ಎದುರಿಸುತ್ತಿರುವ ಆ ಕಾಂಟ್ರುವರ್ಸಿಗಳೇನು.? ಮುಂದೆ ಓದಿ...

ನಾಡಾರ್ ಸಮುದಾಯದ ವಿರೋಧ

ನಾಡಾರ್ ಸಮುದಾಯದ ವಿರೋಧ

ತಮಿಳುನಾಡಿನ ನಾಡಾರ್ ಸಮುದಾಯದ ಬಗ್ಗೆ 'ಕಾಲಾ' ಚಿತ್ರದಲ್ಲಿ ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು 101 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿ ಪತ್ರಕರ್ತರೊಬ್ಬರು ನೋಟಿಸ್ ನೀಡಿದ್ದಾರೆ. ಕಾಲಾ' ಚಿತ್ರದಲ್ಲಿ ರಜನಿಕಾಂತ್ ಅಭಿನಯಿಸಿರುವ ಪಾತ್ರಕ್ಕೆ ಮೂಲ ಈ ತಿರವಿಯಮ್ ನಾಡಾರ್ ಎಂಬುದು ಹೊಸ ಆರೋಪ. ತಿರವಿಯಮ್ ನಾಡಾರ್ ಮುಂಬೈನಲ್ಲಿ ನೆಲೆಸಿದ್ದ ತಮಿಳು ಕುಟುಂಬಗಳ ಪಾಲಿಗೆ ಜನನಾಯಕರಾಗಿದ್ದರು. ಆದ್ರೆ, ಸಿನಿಮಾದಲ್ಲಿ ಅವರನ್ನ ಮತ್ತು ಸಮುದಾಯವನ್ನ ಕೀಳಾಗಿ ಬಿಂಬಿಸಲಾಗಿದೆ ಎಂದು ಅವರ ಮಗ ಮಗ ಜವಾಹರ್‌ ನಡಾರ್ ದೂರಿದ್ದಾರೆ.

ಶೀರ್ಷಿಕೆ ವಿವಾದ

ಶೀರ್ಷಿಕೆ ವಿವಾದ

'ಕಾಲಾ' ಚಿತ್ರದ ಟೈಟಲ್ ಘೋಷಣೆಯಾದಾಗ ಕೆ.ರಾಜಶೇಖರ್ ಎಂಬುವರು ಈ ಟೈಟಲ್ ನಾನು ನೋಂದಣಿ ಮಾಡಿಸಿದ್ದೀನಿ ಎಂದು ವಿರೋಧ ವ್ಯಕ್ತಪಡಿಸಿದರು. ಶೀರ್ಷಿಕೆ ವಿವಾದ ಶುರು ಆಯ್ತು. ನಂತರ 'ಕಾಲಾ ಕರಿಕಾಳನ್' ಎಂದು ಟೈಟಲ್ ಬದಲಾಯಿತು. ಆಮೇಲೆ ಅದೇನ್ ಆಯ್ತೋ ಗೊತ್ತಿಲ್ಲ. ಇದು ತಣ್ಣಗಾಯಿತು.

ಕರ್ನಾಟಕದಲ್ಲಿ ವಿರೋಧ

ಕರ್ನಾಟಕದಲ್ಲಿ ವಿರೋಧ

ಕಾವೇರಿ ವಿಚಾರದಲ್ಲಿ ಕರ್ನಾಟಕದ ವಿರುದ್ಧವಾಗಿ ರಜನಿಕಾಂತ್ ಹೇಳಿಕೆ ನೀಡಿದ್ದರ ಹಿನ್ನೆಲೆ ಕಾಲಾ ಚಿತ್ರವನ್ನ ಕರ್ನಾಟಕದಲ್ಲಿ ವಿರೋಧ ಮಾಡಲಾಗ್ತಿದೆ., ಕನ್ನಡ ಪರ ಸಂಘಟನೆಗಳು ಕರ್ನಾಟಕದಲ್ಲಿ 'ಕಾಲಾ' ಬಿಡುಗಡೆ ಮಾಡದಿರಲು ಪ್ರತಿಭಟನೆ ಮಾಡುತ್ತಿದೆ. ಆದ್ರೆ, ಕರ್ನಾಟಕ ಹೈ ಕೋರ್ಟ್ ಸೂಕ್ತ ಭದ್ರತೆಯೊಂದಿಗೆ ರಿಲೀಸ್ ಮಾಡಿ ಎಂದು ಸರ್ಕಾರಕ್ಕೆ ಆದೇಶ ನೀಡಿದೆ. ಹೀಗಿದ್ದರೂ ಕನ್ನಡ ಪರ ಸಂಘಟನೆಗಳು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನೆ ಮಾಡುತ್ತಿದೆ.

ತಮಿಳು ಸಂಘಟನೆಗಳ ವಿರೋಧ

ತಮಿಳು ಸಂಘಟನೆಗಳ ವಿರೋಧ

ತೂತುಕುಡಿ ಹತ್ಯಾಕಾಂಡದ ಬಗ್ಗೆ ತಮಿಳು ಸಂಘಟನೆಗಳ ವಿರುದ್ಧ ರಜನಿಕಾಂತ್ ಕೊಟ್ಟ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಕೆಲ ಸಾಮಾಜಿಕ ಸಂಘಟನೆಗಳಿಂದ ಈ ರೀತಿಯ ಹತ್ಯೆಗಳು ಆಗುತ್ತಿದೆ ಎಂದು ಹೇಳಿದ್ದರು. ಹೀಗಾಗಿ ನಾರ್ವೆ ಹಾಗೂ ಸ್ವಿಟ್ಜರ್ಲ್ಯಾಂಡ್ ನಲ್ಲಿ 'ಕಾಲಾ' ಬಿಡುಗಡೆಗೆ ತಮಿಳು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಕಾಪಿರೈಟ್ ವಿವಾದ

ಕಾಪಿರೈಟ್ ವಿವಾದ

'ಕಾಲಾ 'ಚಿತ್ರದ ವಿರುದ್ಧ ಕಾಪಿರೈಟ್ ದೂರು ಕೂಡ ಕೇಳಿ ಬಂದಿದೆ. ನಿರ್ಮಾಪಕರ ಒಪ್ಪಿಗೆ ಇಲ್ಲದೇ 'ಕಾಲಾ' ಚಿತ್ರದಲ್ಲಿ ಕೆಲವು ಸನ್ನಿವೇಶ ಮತ್ತು ಹಾಡೊಂದನ್ನ ಕದಿಯಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಸುಪ್ರೀಂಕೋರ್ಟ್ ನಲ್ಲಿಚಿತ್ರಕ್ಕೆ ತಡೆ ನಿಡುವಂತೆ ಮನವಿ ಮಾಡಿದರು. ಆದ್ರೆ, ಕೋರ್ಟ್ ಸಮ್ಮತಿಸಿಲ್ಲ.

More from Filmibeat

English summary
Tamil actor rajinikanth starrer kaala movie faceing 5 different controversies from different issue. movie will releasing on june 7th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X