ಬೆಂಗಳೂರಿನ ಚಿತ್ರಮಂದಿರಗಳಲ್ಲಿ 'ಕಾಲಾ'ಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ

By Naveen

Recommended Video

Kaala movie : ಕನ್ನಡಿಗರನ್ನ ಎದುರುಹಾಕಿಕೊಂಡ ಕಾಲಾಗೆ ಬಂದ ದುರ್ಗತಿ | Oneindia Kannada

ಕರ್ನಾಟಕದಲ್ಲಿ ವಿವಾದ ಹುಟ್ಟಿಸಿದ್ದ ನಟ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ಇಂದು ಬಿಡುಗಡೆಯಾಗಬೇಕಿತ್ತು. ಆದರೆ ಸದ್ಯದವರೆಗೆ ಬೆಂಗಳೂರಿನ ಯಾವುದೇ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ನಡೆದಿಲ್ಲ.

ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ಊರ್ವಶಿ, ಭೂಮಿಕಾ, ಅಂಜನ್, ಪೂರ್ಣಿಮಾ, ಅಭಿನಯ ಸೇರಿದಂತೆ ಹಲವೆಡೆ ಚಿತ್ರಮಂದಿರದ ಮಾಲಿಕರು ಇಲ್ಲಿಯವರೆಗೂ ಚಿತ್ರ ಪ್ರದರ್ಶನಕ್ಕೆ ಪ್ಲಾನ್ ಮಾಡಿಲ್ಲ. ರಜನಿ ನಟನೆಯ ಬಹುತೇಕ ಸಿನಿಮಾಗಳು ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿತ್ತು. ಆದರೆ 'ಕಾಲಾ' ಚಿತ್ರಕ್ಕೆ ಸದ್ಯದ ವರೆಗೆ ರಿಲೀಸ್ ಆಗಿಲ್ಲ.

ಚಿತ್ರದ ವಿತರಕರ ಪ್ರಕಾರ ಇಂದು ಕೆಲವೆಡೆ ಬೆಳಿಗ್ಗೆ ಸಿನಿಮಾ ಪ್ರದರ್ಶನವಾಗುತ್ತೆ ಅನ್ನೊ ಮಾತು ಕೇಳಿ ಬಂದಿತ್ತು. ಕರ್ನಾಟಕ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕನ್ನಡ ಪರ ಸಂಘಟನೆಗಳ ವತಿಯಿಂದ ರಾತ್ರಿ ಪೂರ್ತಿ ಟಿಕೆಟ್ ಕೊಡದಂತೆ ಊರ್ವಶಿ, ಕಾವೇರಿ, ಪೂರ್ಣಿಮಾ, ಸಂಪಿಗೆ, ಅಂಜನ್ ಚಿತ್ರಮಂದಿರಗಳ ಮುಂದೆ ಕಾವಲು ಕಾದಿದ್ದರು.

Rajinikanth Kaala Tamil movie is not yet released in Bengaluru

ಪ್ರದರ್ಶನ ಇನ್ನೂ ಆಗದಿದ್ದರೂ 'ಕಾಲ' ಟಿಕೆಟ್ ಗಾಗಿ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಜೊತೆಗೆ ಚಿತ್ರಮಂದಿರಗಳ ಮುಂದೆ ಕೂಡ 'ಕಾಲಾ' ಪೋಸ್ಟರ್ ಬ್ಯಾನರ್ ಗಳು ಕಾಣುತ್ತಿಲ್ಲ. ಕಾವೇರಿ ಬಗ್ಗೆ ರಜನಿ ನೀಡಿದ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, 'ಕಾಲಾ' ರಿಲೀಸ್ ಗೆ ಅದು ಸಮಸ್ಯೆ ತಂದಿದೆ.

More from Filmibeat

English summary
'Kaala' controversy : Super Star Rajinikanth 'Kaala' Tamil movie is not yet released in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X