ರಜನಿಕಾಂತ್ ಸಿನಿಮಾ ಬಗ್ಗೆ ಹೀಗೊಂದು ಅನುಮಾನ ಶುರುವಾಗಿದೆ.!
Recommended Video

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯವಾಗಿ ಸಕ್ರೀಯರಾಗಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಹೊಸ ಪಕ್ಷದ ಮೂಲಕ ಸ್ಪರ್ಧೆ ಮಾಡಲಿದ್ದಾರೆ. ಈ ಮಧ್ಯೆ ಶಂಕರ್ ನಿರ್ದೇಶನದಲ್ಲಿ ತಯಾರಾಗಿರುವ '2.0' ಚಿತ್ರದಲ್ಲಿ ತಲೈವಾ ಅಭಿನಯಿಸಿದ್ದಾರೆ. ಈ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿರುವ ರಜನಿ ಫ್ಯಾನ್ಸ್ ಗೆ ಅದಕ್ಕೂ ಮುಂಚೆಯೇ ಇನ್ನೊಂದು ಸರ್ಪ್ರೈಸ್ ಸಿಕ್ಕಿದೆ.
ಪಾ ರಂಜಿತ್ ನಿರ್ದೇಶನದಲ್ಲಿ ಸೆಟ್ಟೇರಿದ್ದ 'ಕಾಲ ಕರಿಕಾಳನ್' ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಈ ಮೊದಲೇ ತಿಳಿಸಿದಂತೆ ಮಾರ್ಚ್ 1 ರಂದು 'ಕಾಲ' ಟೀಸರ್ ಬಿಡುಗಡೆಯಾಗಬೇಕಿತ್ತು. ಆದ್ರೆ, ಜಗದ್ಗುರು ಪೂಜ್ಯಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಅವರ ನಿಧನದ ಹಿನ್ನೆಲೆ ಟೀಸರ್ ಬಿಡುಗಡೆಯನ್ನ ಮುಂದೂಡಲಾಗಿತ್ತು.
ಈಗ ಚಿತ್ರದ ನಿರ್ಮಾಪಕ ಟೀಸರ್ ಯಾವಾಗ ಬಿಡುಗಡೆಯಾಗುತ್ತೆ ಎನ್ನುವುದನ್ನ ಬಹಿರಂಗಪಡಿಸಿದ್ದು, ಮಾರ್ಚ್ 2 ರಂದು, ಅಂದ್ರೆ ನಾಳೆ 'ಕಾಲ' ಟೀಸರ್ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಅಭಿಮಾನಿಗಳಿಗೆ ಕಾಡುತ್ತಿರುವ ಅನುಮಾನವೇನು.? ಮುಂದೆ ಓದಿ....

ಏಪ್ರಿಲ್ 27ಕ್ಕೆ ಕಾಲ.?
ಮಾರ್ಚ್ 1 ರಂದು 'ಕಾಲ ಕರಿಕಾಳನ್' ಟೀಸರ್ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೆ ಚಿತ್ರದ ರಿಲೀಸ್ ಡೇಟ್ ಕೂಡ ಘೋಷಿಸಿದ್ದು, ಏಪ್ರಿಲ್ 27 ರಂದು ಸಿನಿಮಾ ತೆರೆಕಾಣುತ್ತಿದೆ.

2.0 ಸಿನಿಮಾ ಯಾವಾಗ.?
ಇನ್ನು ಶಂಕರ್ ಮತ್ತು ರಜನಿಕಾಂತ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ '2.0' ಸಿನಿಮಾ ಇಷ್ಟೋತ್ತಿಗಾಗಲೇ ತೆರೆಕಾಣಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಮಯ ಹಿಡಿಯುತ್ತಿದ್ದು ಏಪ್ರಿಲ್ ವೇಳೆ ತೆರೆಗೆ ಬರಲು ಸಿದ್ದವಾಗುತ್ತಿದೆ.

ಯಾರು ಮೊದಲು.?
ಎರಡು ಸಿನಿಮಾಗಳು ಏಪ್ರಿಲ್ ಸಮಯದಲ್ಲೇ ತೆರೆಗೆ ಬರುವ ಸಾಧ್ಯತೆ ಇದ್ದು, ಯಾವ ಸಿನಿಮಾ ಮೊದಲು ಬರುತ್ತೆ ಎಂಬ ಕುತೂಹಲ ಕಾಡುತ್ತಿದೆ. ಸದ್ಯಕ್ಕೆ 'ಕಾಲ' ಸಿನಿಮಾ ಏಪ್ರಿಲ್ 27ಕ್ಕೆ ಬರೋದು ಖಚಿತ. ಹಾಗಿದ್ರೆ, '2.0' ಸಿನಿಮಾ ಯಾವಾಗ ಎಂದು ಮತ್ತಷ್ಟು ದಿನ ಕಾದುನೋಡೋಣ.

ಧನುಶ್ ನಿರ್ಮಾಣದ ಚಿತ್ರ
ರಜನಿಕಾಂತ್ ಅಳಿಯ ಧನುಶ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. 'ಕಬಾಲಿ' ಚಿತ್ರವನ್ನ ನಿರ್ದೇಶನ ಮಾಡಿದ್ದ ಪಾ ರಂಜಿತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ನಟಿ ಹುಮಾ ಖುರೇಷಿ ನಾಯಕಿಯಾಗಿ ಅಭಿನಯಿಸಿದ್ದಾರೆ.


Click it and Unblock the Notifications











