For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಸಿನಿಮಾ ಬಗ್ಗೆ ಹೀಗೊಂದು ಅನುಮಾನ ಶುರುವಾಗಿದೆ.!

  By Bharath Kumar
  |
  ರಜನಿಕಾಂತ್ ಸಿನಿಮಾ ಬಗ್ಗೆ ಹೀಗೊಂದು ಅನುಮಾನ | Filmibeat Kannada

  ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯವಾಗಿ ಸಕ್ರೀಯರಾಗಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಹೊಸ ಪಕ್ಷದ ಮೂಲಕ ಸ್ಪರ್ಧೆ ಮಾಡಲಿದ್ದಾರೆ. ಈ ಮಧ್ಯೆ ಶಂಕರ್ ನಿರ್ದೇಶನದಲ್ಲಿ ತಯಾರಾಗಿರುವ '2.0' ಚಿತ್ರದಲ್ಲಿ ತಲೈವಾ ಅಭಿನಯಿಸಿದ್ದಾರೆ. ಈ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿರುವ ರಜನಿ ಫ್ಯಾನ್ಸ್ ಗೆ ಅದಕ್ಕೂ ಮುಂಚೆಯೇ ಇನ್ನೊಂದು ಸರ್ಪ್ರೈಸ್ ಸಿಕ್ಕಿದೆ.

  ಪಾ ರಂಜಿತ್ ನಿರ್ದೇಶನದಲ್ಲಿ ಸೆಟ್ಟೇರಿದ್ದ 'ಕಾಲ ಕರಿಕಾಳನ್' ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಈ ಮೊದಲೇ ತಿಳಿಸಿದಂತೆ ಮಾರ್ಚ್ 1 ರಂದು 'ಕಾಲ' ಟೀಸರ್ ಬಿಡುಗಡೆಯಾಗಬೇಕಿತ್ತು. ಆದ್ರೆ, ಜಗದ್ಗುರು ಪೂಜ್ಯಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಅವರ ನಿಧನದ ಹಿನ್ನೆಲೆ ಟೀಸರ್ ಬಿಡುಗಡೆಯನ್ನ ಮುಂದೂಡಲಾಗಿತ್ತು.

  ರಜನಿಕಾಂತ್ ಗಾಗಿ ಒಂದು ವಾರ ಉಪವಾಸ ಮಾಡಿದ್ದ ಶ್ರೀದೇವಿ.!ರಜನಿಕಾಂತ್ ಗಾಗಿ ಒಂದು ವಾರ ಉಪವಾಸ ಮಾಡಿದ್ದ ಶ್ರೀದೇವಿ.!

  ಈಗ ಚಿತ್ರದ ನಿರ್ಮಾಪಕ ಟೀಸರ್ ಯಾವಾಗ ಬಿಡುಗಡೆಯಾಗುತ್ತೆ ಎನ್ನುವುದನ್ನ ಬಹಿರಂಗಪಡಿಸಿದ್ದು, ಮಾರ್ಚ್ 2 ರಂದು, ಅಂದ್ರೆ ನಾಳೆ 'ಕಾಲ' ಟೀಸರ್ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಅಭಿಮಾನಿಗಳಿಗೆ ಕಾಡುತ್ತಿರುವ ಅನುಮಾನವೇನು.? ಮುಂದೆ ಓದಿ....

  ಏಪ್ರಿಲ್ 27ಕ್ಕೆ ಕಾಲ.?

  ಏಪ್ರಿಲ್ 27ಕ್ಕೆ ಕಾಲ.?

  ಮಾರ್ಚ್ 1 ರಂದು 'ಕಾಲ ಕರಿಕಾಳನ್' ಟೀಸರ್ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೆ ಚಿತ್ರದ ರಿಲೀಸ್ ಡೇಟ್ ಕೂಡ ಘೋಷಿಸಿದ್ದು, ಏಪ್ರಿಲ್ 27 ರಂದು ಸಿನಿಮಾ ತೆರೆಕಾಣುತ್ತಿದೆ.

  2.0 ಸಿನಿಮಾ ಯಾವಾಗ.?

  2.0 ಸಿನಿಮಾ ಯಾವಾಗ.?

  ಇನ್ನು ಶಂಕರ್ ಮತ್ತು ರಜನಿಕಾಂತ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ '2.0' ಸಿನಿಮಾ ಇಷ್ಟೋತ್ತಿಗಾಗಲೇ ತೆರೆಕಾಣಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಮಯ ಹಿಡಿಯುತ್ತಿದ್ದು ಏಪ್ರಿಲ್ ವೇಳೆ ತೆರೆಗೆ ಬರಲು ಸಿದ್ದವಾಗುತ್ತಿದೆ.

  ಯಾರು ಮೊದಲು.?

  ಯಾರು ಮೊದಲು.?

  ಎರಡು ಸಿನಿಮಾಗಳು ಏಪ್ರಿಲ್ ಸಮಯದಲ್ಲೇ ತೆರೆಗೆ ಬರುವ ಸಾಧ್ಯತೆ ಇದ್ದು, ಯಾವ ಸಿನಿಮಾ ಮೊದಲು ಬರುತ್ತೆ ಎಂಬ ಕುತೂಹಲ ಕಾಡುತ್ತಿದೆ. ಸದ್ಯಕ್ಕೆ 'ಕಾಲ' ಸಿನಿಮಾ ಏಪ್ರಿಲ್ 27ಕ್ಕೆ ಬರೋದು ಖಚಿತ. ಹಾಗಿದ್ರೆ, '2.0' ಸಿನಿಮಾ ಯಾವಾಗ ಎಂದು ಮತ್ತಷ್ಟು ದಿನ ಕಾದುನೋಡೋಣ.

  ರಜನಿ ರಾಜಕೀಯದ ಬಗ್ಗೆ ಅಕ್ಷಯ್ ಕುಮಾರ್ ಏನಂದ್ರು?ರಜನಿ ರಾಜಕೀಯದ ಬಗ್ಗೆ ಅಕ್ಷಯ್ ಕುಮಾರ್ ಏನಂದ್ರು?

  ಧನುಶ್ ನಿರ್ಮಾಣದ ಚಿತ್ರ

  ಧನುಶ್ ನಿರ್ಮಾಣದ ಚಿತ್ರ

  ರಜನಿಕಾಂತ್ ಅಳಿಯ ಧನುಶ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. 'ಕಬಾಲಿ' ಚಿತ್ರವನ್ನ ನಿರ್ದೇಶನ ಮಾಡಿದ್ದ ಪಾ ರಂಜಿತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ನಟಿ ಹುಮಾ ಖುರೇಷಿ ನಾಯಕಿಯಾಗಿ ಅಭಿನಯಿಸಿದ್ದಾರೆ.

  '2.0', 'ಕಾಲ' ನಂತರ ರಜನಿಕಾಂತ್ ಕೊನೆಯ ಚಿತ್ರ ಘೋಷಣೆ'2.0', 'ಕಾಲ' ನಂತರ ರಜನಿಕಾಂತ್ ಕೊನೆಯ ಚಿತ್ರ ಘೋಷಣೆ

  ರಜನಿಕಾಂತ್ ಗೆ ಈ ಮೂರು ಜನ ಕ್ರಿಕೆಟಿಗರು ಅಂದ್ರೆ ಅಚ್ಚುಮೆಚ್ಚುರಜನಿಕಾಂತ್ ಗೆ ಈ ಮೂರು ಜನ ಕ್ರಿಕೆಟಿಗರು ಅಂದ್ರೆ ಅಚ್ಚುಮೆಚ್ಚು

  English summary
  Actor Dhanush, who is producing Kaala, on Thursday said that the team has decided to postpone the teaser release to March 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X