For Quick Alerts
  ALLOW NOTIFICATIONS  
  For Daily Alerts

  ಟೀಸರ್: 'ಕಬಾಲಿ'ಗಿಂತ ಜೋರಾಗಿದೆ 'ಕಾಲ'ನ ರೌಡಿಸಂ

  By Bharath Kumar
  |

  ''ತಲೈವಾ ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಗುತ್ತೋ ಆಗೆಲ್ಲ ದೀಪಾವಳಿನೇ'' ಎಂದು ತಮಿಳು ನಟ ಧನುಶ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಧನುಶ್ ಅವರ ಈ ಖುಷಿಗೆ ಕಾರಣ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲ' ಚಿತ್ರದ ಟೀಸರ್ ರಿಲೀಸ್ ಆಗಿರುವುದು.

  ಈ ಮೊದಲೇ ಹೇಳಿದಂತೆ ಮಾರ್ಚ್ 2 ರಂದು ಕಾಲ ಟೀಸರ್ ಬರುತ್ತೆ ಎನ್ನಲಾಗಿತ್ತು. ಹೀಗಾಗಿ, ಮಾರ್ಚ್ 1ರ ಮಧ್ಯರಾತ್ರಿ 12 ಗಂಟೆಗೆ ಕಾಲ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ಬಿಡುಗಡೆಯಾಗಿರುವ 13 ಗಂಟೆಗಳಲ್ಲಿ ಸುಮಾರು 44 ಲಕ್ಷಕ್ಕೂ ಅಧಕ ಜನ ಟೀಸರ್ ನೋಡಿದ್ದಾರೆ. ಇನ್ನು ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.

  ರಜನಿಕಾಂತ್ ಸಿನಿಮಾ ಬಗ್ಗೆ ಹೀಗೊಂದು ಅನುಮಾನ ಶುರುವಾಗಿದೆ.!ರಜನಿಕಾಂತ್ ಸಿನಿಮಾ ಬಗ್ಗೆ ಹೀಗೊಂದು ಅನುಮಾನ ಶುರುವಾಗಿದೆ.!

  ಕಬಾಲಿ ಚಿತ್ರವನ್ನ ನಿರ್ದೇಶನ ಮಾಡಿದ್ದ ಪಾ ರಂಜಿತ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಮುಂಬೈನಲ್ಲಿ ನೆಲೆಸಿದ್ದ ಕಾಲ ಎಂಬ ಗ್ಯಾಂಗ್ ಸ್ಟರ್ ಕುರಿತಾದ ಈ ಚಿತ್ರ ಇದಾಗಿದ್ದು, ಮಾಸ್ ರೌಡಿಯಾಗಿ ರಜನಿಕಾಂತ್ ಮತ್ತೆ ಎಂಟ್ರಿ ಕೊಡ್ತಿದ್ದಾರೆ.

  ಇದಕ್ಕೂ ಮುಂಚೆ ಕಬಾಲಿ ಚಿತ್ರದಲ್ಲೂ ರಜನಿಕಾಂತ್ ಗ್ಯಾಂಗ್ ಸ್ಟರ್ ಪಾತ್ರ ನಿರ್ವಹಿಸಿದ್ದರು. ಆದ್ರೆ, ಅದು ಸ್ವಲ್ಪ ಕ್ಲಾಸ್ ಆಗಿತ್ತು. ಮಲೇಷಿಯಾದಲ್ಲಿ ನಡೆಯುವ ಕಥೆಯಲ್ಲಿ ರಜನಿ ಸಿನಿಮಾ ಪೂರ್ತಿ ಸೂಟ್ ನಲ್ಲಿ ಮಿಂಚಿದ್ದರು. ಆದ್ರೆ, ಕಾಲ ಚಿತ್ರದಲ್ಲಿ ಔಟ್ ಅಂಡ್ ಔಟ್ ಲೋಕಲ್ ಆಗಿ ಕಾಣಿಸಿಕೊಂಡಿದ್ದಾರೆ.

  rajinikanth kala teaser tredning in youtube

  ಇನ್ನುಳಿದಂತೆ ರಜನಿಕಾಂತ್ ಅಳಿಯ ಧನುಶ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಬಾಲಿವುಡ್ ನಟಿ ಹುಮಾ ಖುರೇಷಿ ನಾಯಕಿಯಾಗಿ ಅಭಿನಯಿಸಿದ್ದು, ನಾನಾ ಪಟೇಕರ್, ಅಂಜಲಿ ಪಟೇಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಂತೋಷ್ ನಾರಾಯಣ್ ಸಂಗೀತ ನೀಡಿದ್ದಾರೆ. ಏಪ್ರಿಲ್ 27ರಂದು 'ಕಾಲ' ಸಿನಿಮಾ ತೆರೆಕಾಣಲಿದೆ.

  ಕನ್ನಡದ ಈ ನಟನ ಚಿತ್ರಕ್ಕೆ ಬಂಡವಾಳ ಹಾಕಲು ಬಂದ ಧನುಷ್ಕನ್ನಡದ ಈ ನಟನ ಚಿತ್ರಕ್ಕೆ ಬಂಡವಾಳ ಹಾಕಲು ಬಂದ ಧನುಷ್

  ಚಿತ್ರಪಟ: ಮುಂಬೈನಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ರಜನಿಯ 'ಕಾಲ ಕರಿಕಾಲನ್' ಚಿತ್ರೀಕರಣಚಿತ್ರಪಟ: ಮುಂಬೈನಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ರಜನಿಯ 'ಕಾಲ ಕರಿಕಾಲನ್' ಚಿತ್ರೀಕರಣ

  English summary
  The much-awaited teaser of actor Rajinikanth’s Kaala was released at midnight on Friday. “Always Deepavali when a thailavar movie teaser releases,” tweeted actor Dhanush.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X