ಪುಟ್ಟ ಬಾಲಕನ ಪ್ರಮಾಣಿಕತೆಗೆ ಮರುಳಾದ ರಜನಿಕಾಂತ್

By Pavithra

ಮಕ್ಕಳನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ಕಾರಣ ಮಕ್ಕಳು ನಿಷ್ಕಲ್ಮಶವಾದ ಮನಸ್ಸನ್ನು ಹೊಂದಿರುತ್ತಾರೆ. ದೊಡ್ಡವರ ತರ ಅವರಿಗೆ ಯಾವುದೇ ಬೇದ ಬಾವ ಇರುವುದಿಲ್ಲ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಾರೆ.

ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮ ಹಾಗೂ ಪರಿಶುದ್ಧವಾಗಿರುತ್ತದೆ ಎನ್ನುವುದು ಇತ್ತೀಚಿಗಷ್ಟೆ ಮತ್ತೆ ತಮಿಳುನಾಡಿನಲ್ಲಿ ಸಾಭೀತಾಗಿದೆ. ಇದರ ಬಗ್ಗೆ ತಿಳಿದುಕೊಂಡ ಸೂಪರ್ ಸ್ಟಾರ್ ರಜನಿಕಾಂತ್ ಪುಟ್ಟ ಬಾಲಕ ಯಾಸಿನ್ ಪ್ರಾಮಾಣಿಕತೆಗೆ ಮಾರು ಹೋಗಿದ್ದಾರೆ.

ಯಾಸಿನ್ ಕಾರ್ಯವನ್ನು ಮೆಚ್ಚಿಕೊಂಡು ಮನೆಗೆ ಕರೆಸಿಕೊಂಡು ಮರೆಯಲಾಗದ ಉಡುಗೊರೆ ಕೊಟ್ಟು, ಆತಿಥ್ಯವನ್ನು ನೀಡಿದ್ದಾರೆ. ಹಾಗಾದರೆ ತಮಿಳುನಾಡಿನ ಪುಟ್ಟ ಪೋರ ಯಾಸಿನ್ ಮಾಡಿದ ಅಂತಹ ಮಹಾನ್ ಕಾರ್ಯವೇನು? ಸೂಪರ್ ಸ್ಟಾರ್ ಕೊಟ್ಟ ಉಡುಗೊರೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಯಾಸಿನ್ ಕೆಲಸ ಮೆಚ್ಚಿನ ಸೂಪರ್ ಸ್ಟಾರ್

ಯಾಸಿನ್ ಕೆಲಸ ಮೆಚ್ಚಿನ ಸೂಪರ್ ಸ್ಟಾರ್

ಯಾಸಿನ್ ತಮಿಳುನಾಡಿನ ಮೂಲಕ ಪುಟ್ಟ ಪೋರ. 7 ವರ್ಷದ ಯಾಸಿನ್ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತೀಚಿಗಷ್ಟೆ ಯಾಸಿನ್ ಶಾಲೆಗೆ ಹೋಗುವಾಗ ದಾರಿಯಲ್ಲಿ 50 ಸಾವಿರ ಹಣವಿರುವ ಪರ್ಸ್ ಸಿಕ್ಕಿದೆ. ಯಾಸಿನ್ ಆ ಪರ್ಸ್ ಅನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಕೊಟ್ಟಿದ್ದಾನೆ.

ತಲುಪಿದ ಹಣ ಪೋಲೀಸರು

ತಲುಪಿದ ಹಣ ಪೋಲೀಸರು

ಮುಖ್ಯೋಪಾಧ್ಯಾಯರು ಪೋಲೀಸರ ಸಹಾಯದಿಂದ 50 ಸಾವಿರ ಹಣವನ್ನು ಸಂಬಂಧ ಪಟ್ಟವರಿಗೆ ತಲುಪಿಸಿದ್ದಾರೆ. ಈ ವಿಚಾರ ತಮಿಳುನಾಡಿನೆಲ್ಲೆಡೆ ವೈರಲ್ ಆಗಿತ್ತು.

ಯಾಸಿನ್ ಕುಟುಂಬಸ್ಥರನ್ನ ಆಹ್ವಾನಿಸಿದ ರಜನಿ

ಯಾಸಿನ್ ಕುಟುಂಬಸ್ಥರನ್ನ ಆಹ್ವಾನಿಸಿದ ರಜನಿ

ಈ ವಿಚಾರವನ್ನು ತಿಳಿದ ಸೂಪರ್ ಸ್ಟಾರ್ ರಜನಿಕಾಂತ್ ಯಾಸಿನ್ ಹಾಗೂ ಪೋಷಕರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಯಾಸಿನ್ ಪ್ರಾಮಾಣಿಕತೆಯನ್ನು ಮೆಚ್ಚಿ ರಜನಿಕಾಂತ್ ಅಭಿನಂದನೆ ಸಲ್ಲಿಸಿದ್ದಾರೆ.

ರಜನಿಯಿಂದ ಸಿಕ್ಕಿತೆ ವಿಶೇಷ ಉಡುಗೊರೆ

ರಜನಿಯಿಂದ ಸಿಕ್ಕಿತೆ ವಿಶೇಷ ಉಡುಗೊರೆ

ರಜನಿಕಾಂತ್ ಯಾಸಿನ್ ಅವರ ಮುಂದಿನ ವಿದ್ಯಾಭ್ಯಾಸದ ಖರ್ಚು-ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಯಾಸಿನ್ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಹೇಳಿದ್ದಾರೆ.

More from Filmibeat

English summary
Superstar Rajinikanth met the family of the Erode kid Mohammad Yasin who recently set an example for his schoolmates by returning a bag containing Rs 50,000 that he found abandoned on roadside near the school.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X