»   » ಅಂಬರೀಶ್-ಸುದೀಪ್ ಸಿನಿಮಾ ಹಿಂದಿದ್ದಾರೆ ಸ್ಟೈಲ್ ಕಿಂಗ್ ರಜನಿಕಾಂತ್.!

ಅಂಬರೀಶ್-ಸುದೀಪ್ ಸಿನಿಮಾ ಹಿಂದಿದ್ದಾರೆ ಸ್ಟೈಲ್ ಕಿಂಗ್ ರಜನಿಕಾಂತ್.!

Posted By:
Subscribe to Filmibeat Kannada
ಅಂಬರೀಶ್-ಸುದೀಪ್ ಸಿನಿಮಾ ಹಿಂದಿದ್ದಾರೆ ಸ್ಟೈಲ್ ಕಿಂಗ್ ರಜನಿಕಾಂತ್ | Filmibeat Kannada

ನಟ ಅಂಬರೀಶ್ ಮತ್ತು ಸುದೀಪ್ ಈಗ ಒಟ್ಟಿಗೆ ಸಿನಿಮಾ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇತ್ತೀಚಿಗಷ್ಟೆ ಈ ಚಿತ್ರದ ನಿರ್ದೇಶಕರ ಬಗ್ಗೆ ಕೂಡ ಬ್ರೇಕಿಂಗ್ ನ್ಯೂಸ್ ಬಂದಿತ್ತು. ಇದೀಗ ಈ ಚಿತ್ರದ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಷಯ ಹೊರಬಂದಿದೆ.

ಅಂಬರೀಶ್ ಮತ್ತು ಸುದೀಪ್ ಜೋಡಿಯ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಹಿಂದೆ ನಟ ರಜನಿಕಾಂತ್ ಇದ್ದಾರಂತೆ. ಈ ಚಿತ್ರ ಶುರುವಾಗುವುದಕ್ಕೆ ರಜನಿ ಪ್ರಮುಖ ಕಾರಣವಂತೆ.

ಹೌದು... ಇತ್ತೀಚಿಗಷ್ಟೆ ಸಂದರ್ಶನವೊಂದಲ್ಲಿ ಮಾತನಾಡಿರುವ ಅಂಬರೀಶ್ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಕೆಲ ವಿಚಾರದ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಮುಂದೆ ಓದಿ...

ಅಂಬಿಗೆ ರಜನಿಕಾಂತ್ ಕರೆ

ತಮಿಳಿನ 'ಪವರ್ ಪಾಂಡಿ' ಸಿನಿಮಾ ನೋಡಿದ ರಜನಿಕಾಂತ್ ಇತ್ತೀಚಿಗೆ ಒಮ್ಮೆ ಅಂಬರೀಶ್ ಅವರಿಗೆ ಕರೆ ಮಾಡಿ ''ನೀವು ಒಂದು ಸಾರಿ 'ಪವರ್ ಪಾಂಡಿ' ಸಿನಿಮಾ ನೋಡಿ, ಈ ಚಿತ್ರ ನಿಮಗೆ ಸೂಟ್ ಆಗುತ್ತದೆ... ನೀವು ಈ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ'' ಎಂದು ಹೇಳಿದರಂತೆ.

ಅಂಬರೀಶ್ ಅವರಿಗೂ ಇಷ್ಟ ಆಯ್ತು

ರಜನಿ ಮಾತಿನಂತೆ 'ಪವರ್ ಪಾಂಡಿ' ಸಿನಿಮಾವನ್ನು ಅಂಬರೀಶ್ ನೋಡಿದ್ದಾರೆ. ಅಂಬಿಗೆ ಕೂಡ ಚಿತ್ರ ಬಹಳ ಇಷ್ಟ ಆಗಿದೆ. ಆ ಬಳಿಕ ಈ ಚಿತ್ರವನ್ನು ಮಾಡುವ ಬಯಕೆ ಅಂಬಿಯಲ್ಲಿ ಹುಟ್ಟಿಕೊಂಡಿದೆ.

ಕೈ ಜೋಡಿಸಿದ ಕಿಚ್ಚ

ಅಂಬಿ ಕನಸಿಗೆ ಕೈ ಜೋಡಿಸಿದ ಕಿಚ್ಚ ಈ ಚಿತ್ರವನ್ನು ತಮ್ಮ ಬ್ಯಾನರ್ ನಲ್ಲಿ ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದರು. ಅಲ್ಲದೆ ಚಿತ್ರಕ್ಕೆ 'ಅಂಬಿ ನಿಂಗ್ ವಯಸ್ಸಾಯ್ತೋ' ಎನ್ನುವ ಟೈಟಲ್ ಕೂಡ ಸುದೀಪ್ ಅವರೇ ಇಟ್ಟರು.

ಧನುಷ್ ಪಾತ್ರದಲ್ಲಿ ಸುದೀಪ್

ಚಿತ್ರ ನಿರ್ಮಾಣದ ಜೊತೆಗೆ ಸುದೀಪ್ ಇಲ್ಲಿ ನಟನೆ ಕೂಡ ಮಾಡಲಿದ್ದಾರೆ. ತಮಿಳಿನಲ್ಲಿ ಧನುಷ್ ಮಾಡಿದ ಪಾತ್ರವನ್ನು ಸುದೀಪ್ ಇಲ್ಲಿ ನಿರ್ವಹಿಸುತ್ತಿದ್ದು, ಅಂಬರೀಶ್ ಅವರ ಪಾತ್ರದ ಸಣ್ಣ ವಯಸ್ಸಿನ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ.

'ಪವರ್ ಪಾಂಡಿ' ಚಿತ್ರದ ಬಗ್ಗೆ

ತಮಿಳಿನ 'ಪವರ್ ಪಾಂಡಿ' ಸಿನಿಮಾ ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ತೆರೆಗೆ ಬಂದಿತ್ತು. ನಟ ಧನುಷ್ ಈ ಚಿತ್ರವನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದರು. ರಾಜ್ ಕಿರಣ್ 'ಪವರ್ ಪಾಂಡಿ'ಯ ನಾಯಕನಾಗಿದ್ದರು.

'ಅಂಬಿ ನಿಂಗ್ ವಯಸ್ಸಾಯ್ತೋ' ಈ ಟೈಟಲ್ ಕೊಟ್ಟಿದ್ದು ಯಾರು?

ನಿರ್ದೇಶಕನ ಆಯ್ಕೆ

ಸದ್ಯ ಕನ್ನಡದಲ್ಲಿ ಈ ಚಿತ್ರಕ್ಕೆ ನಿರ್ದೇಶಕರ ಆಯ್ಕೆ ಆಗಿದ್ದಾರೆ. ಸುದೀಪ್ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ 26ರ ಯುವಕ ಗುರುದತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಸುದೀಪ್-ಅಂಬರೀಶ್ ಜೋಡಿಗೆ 26ರ ಯುವಕ ಆಕ್ಷನ್ ಕಟ್.!

ಗುರುದತ್ ಬಗ್ಗೆ

ಅಂದ್ಹಾಗೆ, ಗುರುದತ್ ಗಣಿಗ ಅಲಿಯಾಸ್ ಗುರು ಸುಮಾರು 9 ವರ್ಷಗಳಿಂದ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 6 ವರ್ಷದಿಂದ ಸುದೀಪ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ತಮ್ಮ ಸಹ ನಿರ್ದೇಶನ ಮೇಲೆ ನಂಬಿಕೆ ಇಟ್ಟು ಸುದೀಪ್ ಈ ಸಿನಿಮಾ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

English summary
Kannada Actor Rajinikanth referred Ambareesh to do 'Power Pandi' movie remake.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X