ಸಂಭಾವನೆ ಕುರಿತು 27 ವರ್ಷದ ಹಿಂದೆ ರಜನಿ ಹೇಳಿದ್ದ ಮಾತು ಸಖತ್ ವೈರಲ್
Recommended Video
ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಂಭಾವನೆ ಎಷ್ಟು ಎಂಬುದು ಸಿನಿಪ್ರಪಂಚದ ಬಹುದೊಡ್ಡ ಪ್ರಶ್ನೆ. ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ ಅಂದ್ರೂ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ದಾಖಲೆ ಹೊಂದಿದ್ದಾರೆ. ಬಹುಶಃ ಈಗ ರಜನಿ ಸಂಭಾವನೆ ಕಮ್ಮಿಯಾಗಿದೆ ಎಂಬ ಮಾತಿದೆ.
ಈಗ ವಿಷ್ಯ ಏನಪ್ಪಾ ಅಂದ್ರೆ ರಜನಿಕಾಂತ್ ಅವರು ಸುಮಾರು 27 ವರ್ಷದ ಹಿಂದೆ ತಮ್ಮ ಸಂಭಾವನೆ ಕುರಿತು ಓಪನ್ ಆಗಿ ಮಾತನಾಡಿದ್ದರು. ನಿರ್ಮಾಪಕರ ಸಮ್ಮುಖದಲ್ಲಿ ಸಂಭಾವನೆ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದ ತಲೈವಾ ಖಡಕ್ ಆಗಿ ಸೂಚನೆ ಒಂದನ್ನ ನೀಡಿದ್ದರು.
ಅಷ್ಟಕ್ಕೂ, ರಜನಿಕಾಂತ್ ಎರಡೂವರೆ ದಶಕಗಳಿಂದ ಸಂಭಾವನೆ ಬಗ್ಗೆ ಏನು ಹೇಳಿದ್ದರು? ಈಗೇಕೆ ಆ ಮಾತು ವೈರಲ್ ಆಗಿದೆ? ಮುಂದೆ ಓದಿ....

ಆಗಲೇ ರಜನಿ ಸಂಭಾವನೆ ಬಗ್ಗೆ ಚರ್ಚೆಯಾಗಿತ್ತು
ರಜನಿಕಾಂತ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ಅಣ್ಣಾಮಲೈ ಯಶಸ್ಸಿನ ಸುದ್ದಿಗೋಷ್ಠಿಯಲ್ಲಿ ತಲೈವಾ ಮಾತನಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಂಭಾವನೆ ಕುರಿತು ರಜನಿ ಮಾತನಾಡಿದ್ದರು. ರಜನಿಕಾಂತ್ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎಂಬ ಚರ್ಚೆ ಆಗ ದೊಡ್ಡದಾಗಿತ್ತು. ಆ ಬಗ್ಗೆ ಬಹಿರಂಗವಾಗಿ ಸ್ಪಷ್ಟನೆ ನೀಡಿದ್ದರು ಸೂಪರ್ ಸ್ಟಾರ್.

ಸಿನಿಮಾ ನಷ್ಟ ಆದರೆ ನಾನು ದುಡ್ಡು ವಾಪಸ್ ಕೊಡ್ತಿನಿ
ರಜನಿಕಾಂತ್ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎಂದು ಆಗ ನಿರ್ಮಾಪಕರು ಹೇಳಿಕೊಳ್ಳುತ್ತಿದ್ದರು. ಅದಕ್ಕೆ ಸ್ಪಷ್ಟನೆ ನೀಡಿದ್ದ ರಜನಿ ''ನಾನು ಸಂಭಾವನೆ ಹೆಚ್ಚು ಕೇಳುತ್ತಿದ್ದೇನೆ ಅಂದ್ರೆ ಆ ಚಿತ್ರದ ಬಗ್ಗೆ ನನಗೆ ಗೊತ್ತು. ಅದಕ್ಕಾಗಿಯೇ ನಾನು ದುಡ್ಡು ಕೇಳಿದ್ದೇನೆ. ಒಂದು ವೇಳೆ ನಿಮಗೆ ನಷ್ಟ ಆದರೇ ಅದನ್ನ ನಾನು ವಾಪಸ್ ಕೊಡುತ್ತೇನೆ'' ಎಂದಿದ್ದರು.

ಲಾಭ ಬಂದಾಗ ನೀವು ಲೆಕ್ಕ ಕೊಡಿ
''ಒಂದು ವೇಳೆ ನಿಮಗೆ ಲಾಭ ಬಂದ್ರೆ ನನಗೆ ಆ ಲಾಭವನ್ನ ಕೊಡಬೇಡಿ. ಎಷ್ಟು ದುಡ್ಡು ಬಂತು ಎಂದು ನನಗೆ ತಿಳಿಸಿ. ನಾನು ಖುಷಿ ಪಡುತ್ತೇನೆ. ನೀವು ನ್ಯಾಯವಾಗಿ ಇದ್ದರೆ ನಾನು ನ್ಯಾಯವಾಗಿ ಇರುತ್ತೇನೆ. ನೀವು ಅನ್ಯಾಯದ ಕಡೆ ಹೋದರೆ....ನಾನು....ಹೇಳಬಾರದು ಬಿಡಿ'' ಎಂದು ರಜನಿಕಾಂತ್ ನಿರ್ಮಾಪಕ ಹಾಗೂ ಚಿತ್ರಮಂದಿರ ಮಾಲೀಕರಿಗೆ ಮುಕ್ತವಾಗಿ ಹೇಳಿದ್ದರು.

ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ರಜನಿ
ರಜನಿಕಾಂತ್ ಈ ಮಾತುಗಳನ್ನ ಸುಮ್ಮನೆ ಬಿಲ್ಡಪ್ ಗೆ ಹೇಳಿರಲಿಲ್ಲ. ಈ ಮಾತಿನಂತೆ ನಡೆದುಕೊಂಡಿದ್ದಾರೆ. ಬಾಬಾ ಸಿನಿಮಾ ಮಾಡಿದಾಗ ಸಿನಿಮಾ ಸೋಲು ಕಂಡಿತು. ಈ ವೇಳೆ ವಿತರಕರಿಗೆ ಕೈಯಾರು ದುಡ್ಡು ವಾಪಸ್ ನೀಡಿ ಮೆಚ್ಚುಗೆ ಗಳಿಸಿದ್ದರು. 'ಲಿಂಗಾ' ಸಿನಿಮಾ ಸೋತಾಗಲೂ ವಿತರಕರಿಗೆ ನಷ್ಟ ಭರಿಸಿಕೊಟ್ಟಿದ್ದರು.


Click it and Unblock the Notifications











