Coolie advance booking: ಬೆಂಗಳೂರಿನಲ್ಲಿ 'ಕೂಲಿ' ಟಿಕೆಟ್ ಸೋಲ್ಡೌಟ್; ಎಲ್ಲೆಲ್ಲಿ ಟಿಕೆಟ್ ದರ ಹೇಗಿದೆ?

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾ ಬಿಡುಗಡೆಗೆ 5 ದಿನ ಬಾಕಿಯಿದ್ದು ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಕೂಡ ಅಭಿಮಾನಿಗಳು ಸಿನಿಮಾ ನೋಡಲು ಕಾಯ್ತಿದ್ದು ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕೆಲ ಶೋಗಳ ಟಿಕೆಟ್ ಸೋಲ್ಡೌಟ್ ಆಗಿದೆ.

ಆಗಸ್ಟ್ 14(ಗುರುವಾರ)ರಂದು 'ಕೂಲಿ' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್, ಸತ್ಯರಾಜ್, ಶ್ರುತಿ ಹಾಸನ್, ರಚಿತಾ ರಾಮ್ ಸೇರಿ ದೊಡ್ಡ ತಾರಾಗಣವಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದ್ದು ಭಾರೀ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ.

Rajinikanth s Coolie Sparks Frenzy in Bengaluru Advance Tickets Sell Out Within Minutes

ಕರ್ನಾಟಕದಲ್ಲಿ ರಜನಿಕಾಂತ್ ಸಿನಿಮಾಗಳಿಗೆ ಬಹಳ ಕ್ರೇಜ್ ಇದೆ. ಉಪೇಂದ್ರ, ರಚಿತಾ ರಾಮ್ ನಟಿಸಿರುವುದರಿಂದ ಕುತೂಹಲ ಹೆಚ್ಚಾಗಿದೆ. ಈಗ ಕರ್ನಾಟದಲ್ಲಿ ಕೂಡ 'ಕೂಲಿ' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರು ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಲು ಮುಂದಾಗಿದ್ದಾರೆ.

ಕೆಲ ಶೋಗಳು ಸೋಲ್ಡೌಟ್

ಬೆಂಗಳೂರಿನಲ್ಲಿ 'ಕೂಲಿ' ಫೀವರ್ ಹೇಗಿದೆ ಅಂದ್ರೆ ಕೆಲವೇ ನಿಮಿಷಗಳಲ್ಲಿ ಕೆಲ ಶೋಗಳ ಟಿಕೆಟ್ ಸೋಲ್ಡೌಟ್ ಆಗಿದೆ. ಸಾಕಷ್ಟು ಕಡೆಗಳಲ್ಲಿ ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ. ಮಲ್ಲೇಶ್ವರಂನಲ್ಲಿರುವ ಸಂಪಿಗೆ ಚಿತ್ರಮಂದಿರದಲ್ಲಿ ಮೊದಲ ದಿನದ 5 ಶೋಗಳು ಟಿಕೆಟ್ ಖಾಲಿಯಾಗಿದೆ. ಇನ್ನು ರಾಮಮೂರ್ತಿ ನಗರದ ಶ್ರೀಲಕ್ಷ್ಮಿ ಚಿತ್ರಮಂದಿರದ 5 ಶೋಗಳ ಟಿಕೆಟ್ ಸೋಲ್ಡೌಟ್ ಆಗೋಗಿದೆ. ಬೊಮ್ಮನಹಳ್ಳಿಯ ಶ್ರೀಕೃಷ್ಣ ಚಿತ್ರಮಂದಿರದ ಬೆಳಗಿನ ಶೋ, ಆರ್‌ಟಿ ನಗರದ ಶ್ರೀ ರಾಧಾಕೃಷ್ಣ ಹಾಗೂ ಕೆ. ಆರ್ ಪುರಂ ಬಳಿಯ ಪುಷ್ಪಾಂಜಲಿ ಚಿತ್ರಮಂದಿರದಲ್ಲೂ ಆಗಸ್ಟ್ 14ರ ಬೆಳಗಿನ ಜಾವ 6 ಗಂಟೆ ಶೋ ಟಿಕೆಟ್ ಖಾಲಿಯಾಗಿದೆ.

ಟಿಕೆಟ್ ದರ ಎಷ್ಟಿದೆ?

ಕರ್ನಾಟದಲ್ಲಿ ಸಿನಿಮಾ ಟಿಕೆಟ್ ದರ ನಿಗದಿಗೆ ಸರ್ಕಾರ ಮುಂದಾಗಿದೆ. ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಕಡೆ 200 ರೂ. ಟಿಕೆಟ್ ದರ ದಾಟದಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಮೊದಲಿನಿಂದಲೂ ಪರಭಾಷೆಯ ದೊಡ್ಡ ಸಿನಿಮಾಗಳ ಟಿಕೆಟ್ ದರ ಕರ್ನಾಟಕದಲ್ಲಿ 1000 ರೂ. ಅಧಿಕ ದರಕ್ಕೆ ಮಾರಾಟ ಮಾಡಲಾಗಿತ್ತು. ಇದೀಗ 'ಕೂಲಿ' ಚಿತ್ರದ ವಿಚಾರದಲ್ಲಿ ಕೂಡ ಹೀಗೆ ಆಗ್ತಿದೆ. ಕೆಲವೆಡೆ 1000 ರೂ, 1500 ರೂ. ಹಾಗೂ 2000 ರೂ.ವರೆಗೆ ಟಿಕೆಟ್ ದರ ಇದೆ. ಹೆಚ್ಚು ಬೇಡಿಕೆ ಇರುವ ಕಡೆ ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರದಲ್ಲಿ ಕೂಡ ಟಿಕೆಟ್ ದರ 500 ರೂ.ದಿಂದ 700 ರೂ. ಹೆಚ್ಚಿಸಿದ್ದಾರೆ.

Rajinikanth s Coolie Sparks Frenzy in Bengaluru Advance Tickets Sell Out Within Minutes

ಬೆಳಗ್ಗೆ 6 ಗಂಟೆಗೆ ಶೋ

ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆಯಡಿ ಬೆಳಗ್ಗೆ 6.30ಕ್ಕೂ ಮುನ್ನ ಹಾಗೂ ರಾತ್ರಿ 10.30 ಬಳಿಕ ಸಿನಿಮಾ ಪ್ರದರ್ಶನಕ್ಕೆ ಅವಕಾಶವಿಲ್ಲ. ಕೆಲವೊಮ್ಮೆ ಈ ಸಿನಿಮಾ ಮೀರಿ ಸಿನಿಮಾ ಪ್ರದರ್ಶನ ಮಾಡಿರುವು ಉದಾಹರಣೆ ಇದೆ. ಇದೇ ಕಾರಣಕ್ಕೆ ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಚಿತ್ರದ ಮಧ್ಯರಾತ್ರಿ, ಬೆಳ್ಳಂಬೆಳಗ್ಗೆ ಶೋಗಳು ರದ್ದಾಗಿತ್ತು. ಅಂದಹಾಗೆ 'ಕೂಲಿ' ಬೆಂಗಳೂರಿನಲ್ಲಿ ಬೆಳಗ್ಗೆ 6.30ಕ್ಕೆ ಮೊದಲ ಪ್ರದರ್ಶನ ಆರಂಭಿಸುತ್ತಿದೆ. ಆದರೆ ತಮಿಳುನಾಡಿನಲ್ಲಿ ಕೂಡ ಬೆಳಗ್ಗೆ 9.30ರ ನಂತರವೇ ಸಿನಿಮಾ ಪ್ರದರ್ಶನ ಶುರುವಾಗಲಿದೆ.

ಭಾರೀ ಓಪನಿಂಗ್ ನಿರೀಕ್ಷೆ

'ಕೂಲಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ಕೊಟ್ಟಿದೆ. ಸಿನಿಮಾ ಕಾಲಾವಧಿ 2 ಗಂಟೆ 49 ನಿಮಿಷಗಳು. ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ. 22 ಕೋಟಿ ರೂ.ಗೆ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ. ಹಾಗಾಗಿ ಇಲ್ಲಿಯೂ ಭಾರೀ ಗಳಿಕೆ ನಿರೀಕ್ಷಿಸಲಾಗುತ್ತಿದೆ. ವೀರೇಶ್ ಹಾಗೂ ತ್ರಿವೇಣಿ ಚಿತ್ರಮಂದಿರಗಳಲ್ಲಿ ಚಿತ್ರದ ಕನ್ನಡ ವರ್ಷನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ.

More from Filmibeat

English summary
Rajinikanth's Coolie Movie advance ticket booking in bengaluru open
Read more about: rajinikanth upendra rachita ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X