»   » ಹರಾಜಿಗೆ ಬಂತು ರಜನಿ ಹಾಕಿದ 'ಕಬಾಲಿ' ಸೂಟು.!

ಹರಾಜಿಗೆ ಬಂತು ರಜನಿ ಹಾಕಿದ 'ಕಬಾಲಿ' ಸೂಟು.!

Posted By:
Subscribe to Filmibeat Kannada

ರಾಜ-ಮಹಾರಾಜರು ಬಳಸಿರುವ ವಸ್ತುಗಳು ಮ್ಯೂಸಿಯಂ ಸೇರುವುದು, ಸ್ಟಾರ್ ಗಳು ಬಳಸಿರುವ ವಸ್ತುಗಳು ಹರಾಜಾಗುವ ಪ್ರಕ್ರಿಯೆ ತುಂಬಾ ಕಾಮನ್.

'ಬಾಬಾ' ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ತೊಟ್ಟಿದ್ದ ಕೆಂಪು ಪೇಟದಿಂದ ಹಿಡಿದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಕಿರುವ ಉಡುಪುಗಳ ವರೆಗೂ ಅನೇಕ ನಟರ ಅನೇಕ ವಸ್ತುಗಳು ಹರಾಜಿಗೆ ಬಂದಿತ್ತು. ಈಗ 'ಕಬಾಲಿ' ಸರದಿ.

Rajinikanth's 'Kabali' outfit to be Auctioned

'ಕಬಾಲಿ' ಚಿತ್ರದಲ್ಲಿ ತಲೈವಾ ರಜನಿ ಧರಿಸಿದ ಸ್ಟೈಲಿಶ್ ಸೂಟ್ ಗಳನ್ನ ಹರಾಜು ಮಾಡಲು ಚಿತ್ರತಂಡ ನಿರ್ಧರಿಸಿದೆ. ಇಡೀ 'ಕಬಾಲಿ' ಚಿತ್ರದಲ್ಲಿ ರಜನಿ ಮಿಂಚುವುದು ದುಬಾರಿ ಸೂಟ್ ನಲ್ಲೇ. [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

ಅನು ವರ್ಧನ್ ಮತ್ತು ಹೀಬಾ ಸೈತ್ ಎನ್ನುವ ಕಾಸ್ಟ್ಯೂಮ್ ಡಿಸೈನರ್ ಗಳು ರಜನಿಕಾಂತ್ ಗಾಗಿ 'ಕಬಾಲಿ' ಚಿತ್ರಕ್ಕೆ ಸ್ಪೆಷಲ್ ಆಗಿ ರೆಡಿ ಮಾಡಿದ್ದ ಸೂಟ್ ಗಳಿವು. ['ಕಬಾಲಿ' ಬಗ್ಗೆ ಹೊಸ ಸುದ್ದಿ ಓದುವ ಮುನ್ನ ಉಸಿರು ಬಿಗಿ ಹಿಡ್ಕೊಳ್ಳಿ.!]

ಇದೀಗ ಇದನ್ನ ಆನ್ ಲೈನ್ ಮೂಲಕ ಹರಾಜು ಹಾಕುವ ಪ್ಲಾನಿಂಗ್ ನಡೆಯುತ್ತಿದೆ. ರಜನಿ ತೊಟ್ಟಿದ್ದ ಸೂಟ್ ನಿಮಗೆ ಬೇಕಾದಲ್ಲಿ, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ, ಬೇಡಿಕೆ ತಕ್ಕ ಹಾಗೆ ದುಡ್ಡು ಕೊಟ್ಟು ಖರೀದಿಸಿ...

ಅಂದ್ಹಾಗೆ, ಆನ್ ಲೈನ್ ನಲ್ಲಿ ಇನ್ನೂ ಹರಾಜು ಪ್ರಕ್ರಿಯೆ ಶುರು ಆಗಿಲ್ಲ. ಆದ ತಕ್ಷಣ ನಿಮಗೆ ತಿಳಿಸುತ್ತೇವೆ.

English summary
Super Star Rajinikanth's outfit in his latest release 'Kabali', which caught the attention of many, will now be auctioned on an online platform, according to a report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada