ಇಪ್ಪತ್ನಾಲ್ಕು ಗಂಟೆಗಳಲ್ಲೇ ರಜನಿ 'ಲಿಂಗಾ' ನಕಲಿ ಸಿಡಿಗಳು!
ಸೂಪರ್ ಸ್ಟಾರ್ ರಜನಿಕಾಂತ್ ಲಿಂಗಾ ಬಿಡುಗಡೆಯಾಗಿ ಇನ್ನೂ ಇಪ್ಪತ್ನಾಲ್ಕು ಗಂಟೆಗಳು ಕಳೆದಿಲ್ಲ ಆಗಲೇ ನಕಲಿ ಸಿಡಿಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಪೈರಸಿಯನ್ನು ತಡೆಯಲು ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರೂ ನಕಲಿ ಸಿಡಿಗಳು ಬಿಡುಗಡೆಯಾಗಿ ಶಾಕ್ ಗೆ ಗುರಿ ಮಾಡಿವೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಪೊಲೀಸರು ದಾಳಿ ಮಾಡಿ ಲಿಂಗಾ ಚಿತ್ರಕ್ಕೆ ಸಂಬಂಧಿಸಿದ ಮೂರು ಸಾವಿರ ನಕಲಿ ಸಿಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಜೊತೆಗೆ ನಕಲಿ ಸಿಡಿಗಳೂ ಹೊರಬಂದ ಹಿನ್ನೆಲೆಯಲ್ಲಿ ಚಿತ್ರೋದ್ಯಮ ಕಂಗಾಲಾಗಿದೆ. [ಲಿಂಗಾ ಚಿತ್ರ ವಿಮರ್ಶೆ]

ಎರಡು ಮನೆಗಳಲ್ಲಿ ಅತ್ಯಾಧುನಿಕ ತಾಂತ್ರಿಕ ಪರಿಕರಗಳ ಮೂಲಕ ಸಿನಿಮಾ ಬಿಡುಗಡೆಯಾದ ದಿನವೇ ಸಿಡಿಗಳನ್ನು ತಯಾರಿಸಿ ಇತರೆ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಾ ಕೋಟ್ಯಾಂತರ ರುಪಾಯಿ ವ್ಯವಹಾರ ನಡೆಸುತ್ತಿದ್ದ ದಂಧೆಯನ್ನು ಪೊಲೀಸಲು ಬಯಲಿಗೆಳೆದಿದ್ದಾರೆ.

More from Filmibeat
English summary
Rajinikanth and Sonakshi Sinha, Anushka Shetty's Lingga pirated CDs are sezied on it's release in Vinukonda town on Friday by CCS police.


Click it and Unblock the Notifications











