ಚೌತಿ ಹಬ್ಬಕ್ಕೆ ರಜನಿ 'ಲಿಂಗಾ' ಚೂಟಿ ಫಸ್ಟ್ ಲುಕ್
ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಲಿಂಗಾ' ಚಿತ್ರೀಕರಣ ರಾಜ್ಯದಲ್ಲಿ ಭರದಿಂದ ಸಾಗುತ್ತಿದೆ. ಅಭಿಮಾನಿಗಳಿಗೆ ನೀಡಿದ ಭರವಸೆಯಂತೆ ಗಣೇಶ ಚೌತಿ ಕೊಡುಗೆಯಾಗಿ ಲಿಂಗಾ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಾಕ್ ಲೈನ್ ಪ್ರೊಡೆಕ್ಷನ್ ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಮಾತ್ರ ಕಾಣಿಸಿಕೊಂಡ ಈ ಪೋಸ್ಟರ್ ಭರ್ಜರಿ ಹಿಟ್ ಆಗಿದೆ.
ಕರ್ನಾಟಕದ ಶಿವಮೊಗ್ಗ, ಕೊಲ್ಲೂರು, ಲಿಂಗನಮಕ್ಕಿ, ಜೋಗ ಮುಂತಾದೆಡೆ ಲಿಂಗಾ ಚಿತ್ರೀಕರಣ ನಡೆದಿದೆ. ಕನ್ನಡದ ಧೀರ ನಿರ್ಮಾಪಕ ಎಂದೇ ಕರೆಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಅದ್ದೂರಿ ಚಿತ್ರ ಇದಾಗಿದೆ. ಚಿತ್ರದ ಮೊದಲ ಲುಕ್ ನೋಡಲು ಅಭಿಮಾನಿಗಳು ಸಾಮಾಜಿಕ ಜಾಲ ತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಕಾತುರದಿಂದ ಕಾದಿದ್ದರು. [ಚಿತ್ರೀಕರಣಕ್ಕೆ ಶಿವಮೊಗ್ಗದಲ್ಲಿ ವಿರೋಧ]
ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಕೆಎಸ್ ರವಿಕುಮಾರ್ ನಿರ್ದೇಶನದ ಲಿಂಗಾ ಚಿತ್ರದ ಫಸ್ಟ್ ಲುಕ್ ಭರ್ಜರಿ ಹಿಟ್ ಆಗಿದ್ದು, ರಾಕ್ ಲೈನ್ ಎಂಟರ್ ಟೈನ್ಮೆಂಟ್ ಫೇಸ್ ಬುಕ್ ಪುಟದಲ್ಲಿ ಕಂಡಿರುವ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಗೆ 23,660 ಲೈಕ್ಸ್, 10,635 ಹಂಚಿಕೆ, 885ಕ್ಕೂ ಹೆಚ್ಚು ಕಾಮೆಂಟ್ ಗಳು ಹರಿದು ಬಂದಿದೆ. ಫಸ್ಟ್ ಲುಕ್ ನೋಡಲು ಚಿತ್ರವನ್ನು ಕ್ಲಿಕ್ ಮಾಡಿ

ರಜನಿ ಜತೆ ಪಡೆಯಪ್ಪ, ಮುತ್ತು ಚಿತ್ರಗಳಲ್ಲಿ ದುಡಿದ ಯಶಸ್ವಿ ನಿರ್ದೇಶಕ ಕೆ.ಎಸ್.ರವಿಕುಮಾರ್ ಆಕ್ಷನ್, ಕಟ್ ಹೇಳುತ್ತಿರುವ ಲಿಂಗಾ ಚಿತ್ರದಲ್ಲಿ ರಜನಿ ಕಾಂತ್ ಜೋಡಿಯಾಗಿ ಸೋನಾಕ್ಷಿ ಸಿನ್ಹಾ, ಅನುಷ್ಕಾ ಶೆಟ್ಟಿ, ತೆಲುಗು ನಟ ಜಗಪತಿ ಬಾಬು, ದೇವ್ ಗಿಲ್, ಸಂತಾನಂ, ಮನೋಬಲ ಮುಂತಾದವರಿದ್ದಾರೆ. ರತ್ನವೇಲು ಕ್ಯಾಮೆರಾವರ್ಕ್, ಎ.ಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ.[ರಜನಿ 'ಲಿಂಗಾ' ಬಗ್ಗೆ ಸುದ್ದಿ ಪ್ರಸಾರಕ್ಕೆ ತಡೆ]
ಚಿತ್ರದ ಕಥೆ ಏನು?: ಈ ಚಿತ್ರದಲ್ಲಿ ಮುಳ್ಳಪೆರಿಯಾರ್ ಅಣೆಕಟ್ಟಿನ ಪ್ರಸ್ತಾವನೆ ಇರುತ್ತದೆ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. ಸುಮಾರು 400 ವರ್ಷಗಳ ಹಿಂದೆ ಬ್ರಿಟೀಷರು ನಿರ್ಮಿಸಿದ ಈ ಅಣೆಕಟ್ಟು ವಿಚಾರದಲ್ಲಿ ತಮಿಳುನಾಡು, ಕೇರಳ ರಾಜ್ಯಗಳ ನಡುವೆ ವಿವಾದ ಇನ್ನೂ ಜೀವಂತವಾಗಿದೆ. ಹಾಗಾಗಿ 'ಲಿಂಗಾ' ಚಿತ್ರ ಚರ್ಚೆಯ ವಸ್ತುವಾಗಿದೆ. ಚಿತ್ರದಲ್ಲಿ ರಜನಿ ಅವರು ಜಿಲ್ಲಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ['ಲಿಂಗಾ' ಸ್ಟೋರಿಲೈನ್ ಲೀಕ್]


Click it and Unblock the Notifications











