For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಮುಂದೆ ದೊಡ್ಡ ಬಾಂಬ್ ಸ್ಫೋಟಿಸಿದ 'ತಮಿಳಿಗ' ರಜನಿಕಾಂತ್.!

  By Harshitha
  |

  'ಸೂಪರ್ ಸ್ಟಾರ್' ಬಾಯಲ್ಲಿ ''ನಾನು ಅಪ್ಪಟ ತಮಿಳಿಗ' ಎಂಬ ಮಾತು ಹೊರಬಂದಿದೆ.

  ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ತಮಿಳು ಚಿತ್ರರಂಗದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ರಜನಿಕಾಂತ್ ''ನಾನು ಅಪ್ಪಟ ತಮಿಳಿಗ'' ಎಂದು ಎದೆ ತಟ್ಟಿಕೊಂಡು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

  ಕರ್ನಾಟಕದಲ್ಲಿ 23 ವರ್ಷಗಳ ಕಾಲ ಇದ್ದರೂ, ತಮಿಳು ಅಭಿಮಾನಿಗಳನ್ನೆಲ್ಲಾ ಓಲೈಸಲು ರಜನಿಕಾಂತ್ ನಿಜವಾದ 'ರಾಜಕೀಯ' ಶುರು ಮಾಡಿರುವಂತಿದೆ. ಮುಂದೆ ಓದಿ....

  ತಮಿಳು ಅಭಿಮಾನಿಗಳ ಸಮ್ಮುಖದಲ್ಲಿ ರಜನಿಕಾಂತ್ ಮನದಾಳ

  ತಮಿಳು ಅಭಿಮಾನಿಗಳ ಸಮ್ಮುಖದಲ್ಲಿ ರಜನಿಕಾಂತ್ ಮನದಾಳ

  ಬರೋಬ್ಬರಿ ಎಂಟು ವರ್ಷಗಳ ಬಳಿಕ ತಮ್ಮ ಅಭಿಮಾನಿಗಳನ್ನ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ಮಾಡಿದ್ದರು. ಈ ತಿಂಗಳ 15ನೇ ತಾರೀಖಿನಿಂದ ಅಭಿಮಾನಗಳನ್ನ ಮೀಟ್ ಮಾಡಲು ಶುರು ಮಾಡಿದ ರಜನಿ, ಅದೇ ಫ್ಯಾನ್ಸ್ ಸಮ್ಮುಖದಲ್ಲಿ ತಮ್ಮಲ್ಲಿರುವ 'ತಮಿಳು' ಅಭಿಮಾನವನ್ನ ಹೊರಹಾಕಿದ್ದಾರೆ.

  ಒಂದು ವಿಷಯ 'ಕ್ಲಿಯರ್' ಮಾಡಿದ ರಜನಿಕಾಂತ್

  ಒಂದು ವಿಷಯ 'ಕ್ಲಿಯರ್' ಮಾಡಿದ ರಜನಿಕಾಂತ್

  ಸಾವಿರಾರು ಅಭಿಮಾನಿಗಳ ಸಮಕ್ಷಮದಲ್ಲಿ ಒಂದು ವಿಷಯವನ್ನ ರಜನಿಕಾಂತ್ 'ಕ್ಲಿಯರ್' ಮಾಡಿದರು. ರಜನಿಕಾಂತ್ ಸ್ಫೋಟಿಸಿದ 'ಆ' ವಿಷಯ ಏನು ಅಂದ್ರೆ....

  'ನಾನು ಅಪ್ಪಟ ತಮಿಳಿಗ'

  'ನಾನು ಅಪ್ಪಟ ತಮಿಳಿಗ'

  ''ನಾನು ಅಪ್ಪಟ ತಮಿಳಿಗ' ಎಂದು ಒತ್ತಿ ಒತ್ತಿ ಖುಷಿಯಿಂದ ಹೇಳಲು ಶುರು ಮಾಡಿದ ರಜನಿಕಾಂತ್, ಅದಕ್ಕೆ ಪುರಾವೆ ನೀಡಲು ಆರಂಭಿಸಿದರು.

  ಕರ್ನಾಟಕದಲ್ಲಿ ಇದ್ದದು ಎಷ್ಟು ವರ್ಷ.?

  ಕರ್ನಾಟಕದಲ್ಲಿ ಇದ್ದದು ಎಷ್ಟು ವರ್ಷ.?

  ''ನಾನು ನಿಮಗೊಂದು ವಿಷಯವನ್ನ ಕ್ಲಿಯರ್ ಮಾಡಬೇಕು. ನಾನು ತಮಿಳಿಗನಾ ಇಲ್ಲ ಕನ್ನಡಿಗನಾ ಅನ್ನೋದನ್ನ ಇವತ್ತು ಹೇಳ್ತೀನಿ. ನನಗೀಗ 67 ವರ್ಷ ವಯಸ್ಸು. 23 ವರ್ಷ ಕರ್ನಾಟಕದಲ್ಲಿದ್ದೆ. 44 ವರ್ಷದಿಂದ ತಮಿಳುನಾಡಿನಲ್ಲಿದ್ದೇನೆ. ನಿಮ್ಮ ಜೊತೆಯೇ ಬೆಳೆದಿದ್ದೇನೆ'' ಎಂದು ತಮಿಳು ಅಭಿಮಾನಿಗಳ ಮುಂದೆ ಹೆಮ್ಮೆಯಿಂದ ಹೇಳಿಕೊಂಡರು ರಜನಿಕಾಂತ್.

  ತಮಿಳಿಗನನ್ನಾಗಿಸಿದ್ದು ನೀವೇ....

  ತಮಿಳಿಗನನ್ನಾಗಿಸಿದ್ದು ನೀವೇ....

  ''ಕರ್ನಾಟಕದಲ್ಲಿ ಮರಾಠಿಗನಾಗಿಯೋ ಕನ್ನಡಿಗನಾಗಿಯೋ ನಾನು ಇಲ್ಲಿಗೆ ಬಂದಿದ್ರೂ ಸಹ ನೀವು ನನ್ನನ್ನ ಬೆಂಬಲಿಸಿದ್ರಿ. ನನ್ನನ್ನ ನೀವೇ ತಮಿಳಿಗನನ್ನಾಗಿಸಿದ್ದು'' - ರಜನಿಕಾಂತ್

  ರಜನಿ ಪೂರ್ವಿಕರು ತಮಿಳಿನವರಂತೆ.!

  ರಜನಿ ಪೂರ್ವಿಕರು ತಮಿಳಿನವರಂತೆ.!

  ''ನನ್ನ ಪೂರ್ವಿಕರು.. ನನ್ನ ತಂದೆಯವರೆಲ್ಲಾ ಹುಟ್ಟಿದ್ದು ಕೃಷ್ಣಗಿರಿ ಜಿಲ್ಲೆಯಲ್ಲಿ ಅಂತ ಈಗಾಗಲೇ ಹೇಳಿದ್ದೀನಿ'' - ರಜನಿಕಾಂತ್

  ಬೇರೆ ರಾಜ್ಯಕ್ಕೆ ಹೋಗಲ್ಲ.!

  ಬೇರೆ ರಾಜ್ಯಕ್ಕೆ ಹೋಗಲ್ಲ.!

  ''ನೀವು ನನ್ನನ್ನ ಎಲ್ಲಿಯಾದರೂ ಹೋಗು ಅಂತ ಇಲ್ಲಿಂದ ಹೊರದಬ್ಬಿದರೆ, ನಾನು ಹಿಮಾಲಯಕ್ಕೆ ಹೋಗಿ ಬೀಳುತ್ತೇನೆಯೇ ಹೊರತು ಬೇರೆ ಯಾವ ರಾಜ್ಯಕ್ಕೂ ಹೋಗುವುದಿಲ್ಲ'' - ರಜನಿಕಾಂತ್

  ತಮಿಳಿನ ಜನ = ಒಳ್ಳೆಯ ಜನ

  ತಮಿಳಿನ ಜನ = ಒಳ್ಳೆಯ ಜನ

  ''ಯಾಕಂದ್ರೆ, ತಮಿಳುನಾಡಿನ ಜನ ತುಂಬಾ ಒಳ್ಳೆಯ ಜನ. ಒಳ್ಳೆಯ ಮನಸ್ಸು ಇರುವವರು. ಭೂಮಿಯಲ್ಲಿ ನಾನು ಇದ್ದರೆ ಇಲ್ಲೇ ಇರುತ್ತೇನೆ. ಇಲ್ಲಾಂದ್ರೆ, ಸಿದ್ಧಪುರುಷರು ಇರುವ ಹಿಮಾಲಯದಲ್ಲಿ ಇರುತ್ತೇನೆ'' - ರಜನಿಕಾಂತ್

  ನಿಜವಾದ 'ರಾಜಕೀಯ' ಶುರು ಮಾಡಿದ್ರಾ ರಜನಿ.?

  ನಿಜವಾದ 'ರಾಜಕೀಯ' ಶುರು ಮಾಡಿದ್ರಾ ರಜನಿ.?

  ತಮಿಳುನಾಡು ರಾಜಕೀಯ ವಲಯದಲ್ಲಿ ರಜನಿಕಾಂತ್ ಹೆಸರು ಕೇಳಿಬರುತ್ತಲೇ ಇದೆ. ಸದ್ಯದಲ್ಲಿಯೇ ರಜನಿಕಾಂತ್ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕೂಡ ಇದೆ. ಹೀಗಾಗಿ, ತಮಿಳರನ್ನ ಓಲೈಸಲು ರಜನಿಕಾಂತ್ ಹೀಗೆಲ್ಲ ಮಾತನಾಡುತ್ತಿದ್ದಾರಾ ಎಂಬ ಅನುಮಾನ ಹಲವರಲ್ಲಿ ಮೂಡಿರುವುದು ಸತ್ಯ.

  ರಜನಿಗೆ ರಾಜಕೀಯದಲ್ಲಿ ಭವಿಷ್ಯ ಇಲ್ಲ.?

  ರಜನಿಗೆ ರಾಜಕೀಯದಲ್ಲಿ ಭವಿಷ್ಯ ಇಲ್ಲ.?

  ರಜನಿಕಾಂತ್ ಮೂಲತಃ ತಮಿಳಿಗ ಅಲ್ಲ. ಅವರಿಗೆ ತಮಿಳುನಾಡು ರಾಜಕೀಯದಲ್ಲಿ ಭವಿಷ್ಯ ಇಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದ ಬೆನ್ನಲ್ಲೇ, ರಜನಿಕಾಂತ್ ತಮ್ಮ 'ಮೂಲ'ದ ಬಗ್ಗೆ 'ಕ್ಲಾರಿಟಿ' ನೀಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

  English summary
  Super Star Rajinikanth says he is true Tamilian.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X