ಡಾ ರಾಜ್ ಪಾದಸ್ಪರ್ಶ ಮಾಡಿದ್ದೇ ಪರಮ ಭಾಗ್ಯ ಎಂದ ರಜನಿಕಾಂತ್
Recommended Video

ಡಾ ರಾಜ್ ಕುಮಾರ್..ಕನ್ನಡ ಪ್ರತಿ ಕಲಾ ಅಭಿಮಾನಿಗಳು ಮನಸ್ಸಾರೇ ಇಷ್ಟ ಪಡುವ ನಾಯಕ ನಟ. ಕಲಾವಿದ ಅನ್ನೋದಕ್ಕಿಂಕ ಅಣ್ಣಾವ್ರ ಸರಳತೆಗೆ ಮಾರೋ ಹೋದವರು ಅಸಂಖ್ಯಾತ ಜನರು.
ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಪರಭಾಷೆಯ ಕಲಾವಿದರು ತಂತ್ರಜ್ಞರು ಡಾ ರಾಜ್ ಕುಮಾರ್ ಅವರ ಸರಳ ಸಜ್ಜನಿಕೆಯನ್ನ ಇಷ್ಟ ಪಡುತ್ತಿದ್ದರು. ರಾಜ್ ಕುಮಾರ್ ಅಪಾರ ಸಂಖ್ಯೆ ಅಭಿಮಾನಿಗಳನ್ನ ಅಗಲಿ ಹೋಗಿ ಸಾಕಷ್ಟು ವರ್ಷಗಳಾದರೂ ಇಂದಿನ ಯುವಕರಿಗೂ ಆದರ್ಶವಾಗಿಯೇ ಉಳಿದಿದ್ದಾರೆ.
ಕನ್ನಡದ ನೆಲದಲ್ಲಿ ಹುಟ್ಟಿ ಕಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವ ತಲೈವಾ ರಜಿನಿಕಾಂತ್, ಡಾ ರಾಜ್ ಕುಮಾರ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಕೋಟ್ಯಾಂತರ ಜನ ಅಭಿಮಾನಿಗಳನ್ನ ಹೊಂದಿರುವ ರಜನಿಕಾಂತ್ 'ನಾನು ರಾಜ್ ಕುಮಾರ್ ಅವರ ಅಭಿಮಾನಿ' ಎಂದು ತಮ್ಮ ಫ್ಯಾನ್ಸ್ ಗಳಿಗೆ ತಿಳಿಸಿದ್ದಾರೆ. ಹಾಗಾದ್ರೆ ಅಣ್ಣಾವ್ರ ಬಗ್ಗೆ ರಜನಿ ಏನೆಲ್ಲಾ ಹೇಳಿದ್ದಾರೆ, ಮುಂದೆ ಓದಿ

ಅಣ್ಣಾವ್ರ ಬಗ್ಗೆ ರಜನಿಕಾಂತ್ ಮಾತು
ಡಾ ರಾಜ್ ಕುಮಾರ್ ಅವರಿಗೆ ನಾನು ಅಭಿಮಾನಿ ಆಗಿದ್ದೆ. ಶಿವಾಜಿ ಗಣೇಶನ್ ಹಾಗೂ ಎನ್ ಟಿ ಆರ್ ಅವರಂತೆ ಶ್ರೇಷ್ಠ ನಟ ಡಾ ರಾಜ್ ಕುಮಾರ್ ಎಂದಿದ್ದಾರೆ. ಅದಷ್ಟೇ ಅಲ್ಲದೆ ರಾಜ್ ಕುಮಾರ್ ನನ್ನ ಪಾಲಿನ ಆದರ್ಶ ಎಂದು ತಿಳಿಸಿದ್ದಾರೆ ರಜನಿ.

ಅವರ ಪಾದಸ್ಪರ್ಶ ಮಾಡಿದ್ದೇ ಪುಣ್ಯ
ಚೆನೈ ನಲ್ಲಿ ನಡೆಯುತ್ತಿರುವ ಅಭಿಮಾನಿಗಳ ಸಂವಾದ ಕಾರ್ಯಕ್ರಮದಲ್ಲಿ ರಜನಿಕಾಂತ್ ಡಾ ರಾಜ್ ಬಗ್ಗೆ ಮಾತನಾಡಿದ್ದಾರೆ. ಅವರನ್ನ ಸಾಕಷ್ಟು ಸಮಯ ಕಾದು ಭೇಟಿ ಮಾಡಿದ್ದೆ. ಅವರ ಪಾದ ಸ್ಪರ್ಶ ಮಾಡಿದ್ದೇ ನನ್ನ ಪುಣ್ಯ ಎಂದು ಅಭಿಮಾನಿಗಳ ಸಮ್ಮುಖದಲ್ಲಿ ಹೇಳಿದ್ದಾರೆ.

ಇಬ್ಬರು ಸಾಮಾನ್ಯರು ಸ್ಟಾರ್ ಆದಾಗ
ಡಾ ರಾಜ್ ಕುಮಾರ್ ರೈತರಾಗಿದ್ದವರು ನಂತರ ಕನ್ನಡದ ಸೂಪರ್ ಸ್ಟಾರ್ ಆಗಿ ಖ್ಯಾತಿ ಪಡೆದುಕೊಂಡವರು. ರಜನಿಕಾಂತ್ ಕೂಡ ಕಂಡಕ್ಟರ್ ಆಗಿದ್ದವರು ನಂತರದ ದಿನಗಳಲ್ಲಿ ಸೂಪರ್ ಸ್ಟಾರ್ ಆದರು.

ಡಾ ರಾಜ್- ರಜನಿ ಭಾವಜೀವಿಗಳು
ರಜನಿಕಾಂತ್ ಅವರ ಹೇಳಿಯ ಬಗ್ಗೆ ಮಾತನಾಡಿರುವ ರಾಘವೆಂದ್ರ ರಾಜ್ ಕುಮಾರ್ ರಜನಿ ಮತ್ತು ಅಪ್ಪಾಜಿ ಅವರ ಮಧ್ಯೆ ತುಂಬಾ ಸಾಮ್ಯತೆ ಇತ್ತು, ಇಬ್ಬರ ಹೆಸರು 'ರ' ಅಕ್ಷರದಿಂದ ಪ್ರಾರಂಭ ಆಗುತ್ತದೆ. ಇಬ್ಬರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುತ್ತಿದ್ದರು, ಬೆಂಗಳೂರಿಗೆ ಬಂದಾಗ ಸಾಕಷ್ಟು ಸಮಯ ಜೊತೆಯಲ್ಲಿ ಕಳೆಯುತ್ತಿದ್ದರು ಎಂದು ಹಳೆಯ ನೆನಪುಗಳನ್ನ ಬಿಚ್ಚಿಟ್ಟಿದ್ದಾರೆ.


Click it and Unblock the Notifications











