For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ 13ಕ್ಕೆ ರಜನಿ ಅಭಿನಯದ '2.0' ಟೀಸರ್ ನಿಮ್ಮ ಮುಂದೆ.!

  By Harshitha
  |

  ಸೂಪರ್ ಸ್ಟಾರ್.. ದಕ್ಷಿಣ ಭಾರತದ ಸ್ಟಂಟ್ ಗಾಡ್ ರಜನಿಕಾಂತ್ ಅಭಿನಯದ '2.0' ಸಿನಿಮಾ ಸೆಟ್ಟೇರಿ ಎರಡ್ಮೂರು ವರ್ಷಗಳು ಕಳೆದಿವೆ. '2.0' ಸಿನಿಮಾ ಯಾವಾಗ ಬಿಡುಗಡೆ ಆಗುತ್ತೋ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  '2.0' ಸಿನಿಮಾದಲ್ಲಿ ಗ್ರಾಫಿಕ್ಸ್ ಕೆಲಸ ಜಾಸ್ತಿ ಇರುವುದರಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸ ತಡವಾಗುತ್ತಿದೆ. ಇದೇ ವರ್ಷದ ನವೆಂಬರ್ ಹೊತ್ತಿಗೆ '2.0' ಸಿನಿಮಾ ತೆರೆಗೆ ಬರಲಿದೆ ಅಂತ ಹೇಳಲಾಗಿದೆ. ಆದ್ರೆ, ಅದಕ್ಕೂ ಮುನ್ನವೇ ಚಿತ್ರತಂಡ ನಿಮಗೆಲ್ಲ ಒಂದು ಗುಡ್ ನ್ಯೂಸ್ ಕೊಟ್ಟಿದೆ.

  ಕೊನೆಗೂ ರಜನಿಯ '2.0' ಚಿತ್ರದ ರಿಲೀಸ್ ದಿನಾಂಕ ಪಕ್ಕಾ ಆಯ್ತು ಕೊನೆಗೂ ರಜನಿಯ '2.0' ಚಿತ್ರದ ರಿಲೀಸ್ ದಿನಾಂಕ ಪಕ್ಕಾ ಆಯ್ತು

  ಗೌರಿ-ಗಣೇಶ್ ಹಬ್ಬದ ಶುಭ ಸಂದರ್ಭದಂದು ರಜನಿಕಾಂತ್, ಅಕ್ಷಯ್ ಕುಮಾರ್ ಅಭಿನಯದ '2.0' ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಸೆಪ್ಟೆಂಬರ್ 13 ರಂದು '2.0' ಟೀಸರ್ ನಿಮ್ಮ ಮುಂದೆ ಬರಲಿದೆ ಅಂತ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  ವಿಡಿಯೋ: 'ಹಾಲಿವುಡ್'ನ ಮೀರಿಸುವಂತೆ ಸಿದ್ದವಾಗಿದೆ '2.0' ಚಿತ್ರ ವಿಡಿಯೋ: 'ಹಾಲಿವುಡ್'ನ ಮೀರಿಸುವಂತೆ ಸಿದ್ದವಾಗಿದೆ '2.0' ಚಿತ್ರ

  ಈಗಾಗಲೇ ಬಿಡುಗಡೆ ಆಗಿರುವ '2.0' ಸಿನಿಮಾದ ಮೇಕಿಂಗ್ ನೋಡಿದ್ರೆ, ಹಾಲಿವುಡ್ ಶೈಲಿಯಲ್ಲಿ ಈ ಚಿತ್ರವನ್ನ ನಿರ್ದೇಶಕ ಶಂಕರ್ ರೆಡಿ ಮಾಡಿರುವುದು ಸ್ಪಷ್ಟವಾಗಿದೆ. ಪ್ರತಿಯೊಂದು ದೃಶ್ಯವೂ ಮೈನವಿರೇಳಿಸುವ ಹಾಗೆ ಶಂಕರ್ '2.0' ಚಿತ್ರವನ್ನ ತಯಾರು ಮಾಡಿದ್ದಾರೆ.

  15 ಭಾಷೆಗಳಲ್ಲಿ ಬರಲಿದೆ ಸೂಪರ್ ಸ್ಟಾರ್ ರಜನಿಕಾಂತ್ '2.0' ಸಿನಿಮಾ15 ಭಾಷೆಗಳಲ್ಲಿ ಬರಲಿದೆ ಸೂಪರ್ ಸ್ಟಾರ್ ರಜನಿಕಾಂತ್ '2.0' ಸಿನಿಮಾ

  ರಜನಿಕಾಂತ್, ಶಂಕರ್ ಹಾಗೂ ಎ.ಆರ್.ರೆಹಮಾನ್... ಈ ಮೂರು ಅದ್ಭುತಗಳು ಒಂದಾಗಿರುವ ಸಿನಿಮಾ '2.0'. ಹೀಗಾಗಿ, '2.0' ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿದೆ. ಹಲವು ವಿಶೇಷತೆಗಳು ತುಂಬಿರುವ '2.0' ಸಿನಿಮಾ ನಿರೀಕ್ಷೆಯಂತೆ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಾ, ನೋಡಬೇಕು.!

  English summary
  Super Star Rajinikanth and Akshay Kumar starrer '2 point O' teaser releasing on september 13th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X