For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಮುಂದಿನ ಚಿತ್ರದ ಹೆಸರು 'ಪೆಟ್ಟಾ': ಮೋಷನ್ ಪೋಸ್ಟರ್ ಬಿಡುಗಡೆ.!

  By Harshitha
  |

  ಸೂಪರ್ ಸ್ಟಾರ್ ರಜನಿಕಾಂತ್ ಕಮಲ ಹಿಡಿಯುತ್ತಾರೆ ಎಂಬ ಗುಸುಗುಸು ಇವತ್ತು ಎಲ್ಲಾ ಕಡೆ ಹಬ್ಬಿದೆ. ಬಿಜೆಪಿ ಪಕ್ಷಕ್ಕೆ ರಜನಿಕಾಂತ್ ಹೋಗ್ತಾರೋ, ಇಲ್ಲವೋ ಗೊತ್ತಿಲ್ಲ. ಆದ್ರೆ, ರಜನಿ ಅಭಿನಯದ ಮುಂದಿನ ಚಿತ್ರದ ಹೆಸರು ಮಾತ್ರ ಪಕ್ಕಾ ಆಗಿದೆ.

  ದಕ್ಷಿಣ ಭಾರತದ ಸ್ಟಂಟ್ ಗಾಡ್ ರಜನಿ ಅಭಿನಯದ ಹೊಚ್ಚ ಹೊಸ ಚಿತ್ರದ ಹೆಸರು 'ಪೆಟ್ಟಾ'. ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡುತ್ತಿರುವ 'ಪೆಟ್ಟಾ' ಚಿತ್ರದ ಮೋಷನ್ ಪೋಸ್ಟರ್ ಇಂದು ಬಿಡುಗಡೆ ಆಗಿದೆ.

  'ಪೆಟ್ಟಾ' ಚಿತ್ರದ ಮೋಷನ್ ಪೋಸ್ಟರ್ ನೋಡ್ತಿದ್ರೆ, ಇದು ಗ್ಯಾಂಗ್ ಸ್ಟರ್ ಆಕ್ಷನ್ ಡ್ರಾಮಾ ಅಂತ ಭಾಸವಾಗುತ್ತೆ. ಹಳೇ ಪಂಟರ್ ತರಹ ಚರ್ಚ್ ಒಳಗೆ ರಜನಿ ಎಂಟ್ರಿಕೊಡ್ತಾರೆ.

  ಕೊನೆಗೂ ರಜನಿಯ '2.0' ಚಿತ್ರದ ರಿಲೀಸ್ ದಿನಾಂಕ ಪಕ್ಕಾ ಆಯ್ತು ಕೊನೆಗೂ ರಜನಿಯ '2.0' ಚಿತ್ರದ ರಿಲೀಸ್ ದಿನಾಂಕ ಪಕ್ಕಾ ಆಯ್ತು

  ಹೇಳಿ ಕೇಳಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್, ರಜನಿಕಾಂತ್ ಅವರ ಅಪ್ಪಟ ಅಭಿಮಾನಿ. ಹೀಗಾಗಿ, ಅಭಿಮಾನಿಗಳು ರಜನಿಯನ್ನ ಹೇಗೆಲ್ಲಾ ನೋಡಲು ಇಷ್ಟಪಡುತ್ತಾರೋ, ಆ ಎಲ್ಲಾ ಅಂಶಗಳು 'ಪೆಟ್ಟಾ' ಚಿತ್ರದಲ್ಲಿ ಇರಲಿವೆ.

  ಕಳೆದ ಮೂರು ತಿಂಗಳುಗಳಿಂದ 'ಪೆಟ್ಟಾ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಡಾರ್ಜಿಲಿಂಗ್ ಹಾಗೂ ದೆಹ್ರಾದೂನ್ ನಲ್ಲಿ 'ಪೆಟ್ಟಾ' ಶೂಟಿಂಗ್ ನಡೆದಿದೆ.

  ಸೆಪ್ಟೆಂಬರ್ 13ಕ್ಕೆ ರಜನಿ ಅಭಿನಯದ '2.0' ಟೀಸರ್ ನಿಮ್ಮ ಮುಂದೆ.! ಸೆಪ್ಟೆಂಬರ್ 13ಕ್ಕೆ ರಜನಿ ಅಭಿನಯದ '2.0' ಟೀಸರ್ ನಿಮ್ಮ ಮುಂದೆ.!

  'ಪೆಟ್ಟಾ' ಚಿತ್ರದಲ್ಲಿ ವಿಜಯ್ ಸೇತುಪತಿ, ನವಾಝುದ್ದೀನ್ ಸಿದ್ದಿಖಿ, ಗುರು ಸೋಮಸುಂದರಮ್, ಸಿಮ್ರನ್, ತ್ರಿಷಾ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಪ್ರಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೆನ್ 'ಪೆಟ್ಟಾ'ಗಾಗಿ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ಮುಂದಿನ ವರ್ಷದ ಬೇಸಿಗೆ ಹೊತ್ತಿಗೆ 'ಪೆಟ್ಟಾ' ಬಿಡುಗಡೆ ಆಗುವ ಸಾಧ್ಯತೆ ಇದೆ.

  English summary
  Super Star Rajinikanth starrer Petta first look out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X