For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಮುಡಿಗೆ 'ಗೋಲ್ಡನ್ ಜುಬಿಲಿ ಅವಾರ್ಡ್' ಗರಿ

  |

  ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಮತ್ತೊಂದು ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ 'ಐಕಾನ್ ಆಫ್ ಗೋಲ್ಡನ್ ಜುಬಿಲಿ ಅವಾರ್ಡ್'ಗೆ ಕೇಂದ್ರ ಸರ್ಕಾರ ತಲೈವಾ ರಜನಿಕಾಂತ್ ಅವರನ್ನು ಆಯ್ಕೆ ಮಾಡಿದೆ.

  ಕೇಂದ್ರ ವಾರ್ತ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. "ಹಲವು ವರ್ಷಗಳ ಕಾಲ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 'ಐಕಾನ್ ಆಫ್ ಗೋಲ್ಡನ್ ಜುಬಿಲಿ ಅವಾರ್ಡ್ ರಜಿನಿಕಾಂತ್ ಅವರಿಗೆ ನೀಡಲಾಗುತ್ತಿದೆ ಎಂದು ಘೋಷಿಸಲು ಸಂತಸವಾಗುತ್ತಿದೆ" ಎಂದು ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

  ಸೂಪರ್ ಸ್ಟಾರ್ ರಜನೀಕಾಂತ್ 'ಕಾಲ್ ಶೀಟ್' ನೀಡುತ್ತಿರುವ ಹಿಂದಿನ ರಹಸ್ಯ ಬಯಲು?ಸೂಪರ್ ಸ್ಟಾರ್ ರಜನೀಕಾಂತ್ 'ಕಾಲ್ ಶೀಟ್' ನೀಡುತ್ತಿರುವ ಹಿಂದಿನ ರಹಸ್ಯ ಬಯಲು?

  ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸುವ ಮೂಲಕ ಪ್ರಶಸ್ತಿ ಬಂದ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ "ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ ಗೋಲ್ಡನ್ ಜುಬಿಲಿ ಸಂದರ್ಭದಲ್ಲಿ ನನ್ನನ್ನು ಗೌರವಾನ್ವಿತ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸರ್ಕಾರಕ್ಕೆ ಕೃತಜ್ಞತೆಗಳು" ಎಂದು ಹೇಳಿದ್ದಾರೆ.

  ಇಂದೇ ತಿಂಗಳು ನವೆಂಬರ್ 20 ರಿಂದ 28ರವರೆಗೆ ಗೋವಾದಲ್ಲಿ ನಡೆಯುವ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅಂದ್ಹಾಗೆ ಜೀವಮಾನ ಸಾಧನೆಗಾಗಿ ಫ್ರೆಂಚ್ ಕಲಾವಿದೆ ಇಸಾಬೆಲ್ಲ ಹ್ಯೂಪರ್ಟ್ ಆಯ್ಕೆಯಾಗಿದ್ದಾರೆ.

  ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಬೇರೆ ಬೇರೆ ದೇಶಗಳ 250 ಸಿನಿಮಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ 200 ವಿದೇಶಿ ಸಿನಿಮಾಗಳಲ್ಲಿ ಆಸ್ಕರ್ ನಾಮಿನೇಷನ್ ಸ್ಪರ್ಧೆಯಲ್ಲಿರುವ 24 ಸಿನಿಮಾಗಳು ಇವೆ. ಜೊತೆಗೆ 50 ಮಹಿಳಾ ನಿರ್ದೇಶಕರ 50 ಸಿನಿಮಾಗಳನ್ನು ಫೆಸ್ಟಿವಲ್ ನಲ್ಲಿ ಪ್ರದರ್ಶಿಸಲಾಗುವುದು ಎಂದು ಜಾವಡೇಕರ್ ಹೇಳಿದ್ದಾರೆ.

  English summary
  Rajinikanth to be honored with golden jubilee award at international film festival of India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X