ರಜನಿ ಎದುರು ಅಬ್ಬರಿಸಲಿದ್ದಾರೆ ಇಬ್ಬರು ಖಡಕ್ ಖಳನಾಯಕರು
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ 167ನೇ ಚಿತ್ರ ದರ್ಬಾರ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಎ ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಪೊಲಿಟಿಕಲ್ ಥ್ರಿಲ್ಲರ್ ಎಂದು ಹೇಳಲಾಗುತ್ತಿದೆ
ಈ ಚಿತ್ರದ ನಾಯಕಿಯಾಗಿ ನಯನತಾರ ಕಾಣಿಸಿಕೊಳ್ಳುತ್ತಿದ್ದು, ಯೋಗಿ ಬಾಬು, ನಿವೇತಾ ಥಾಮಸ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ರಜನಿಕಾಂತ್ ದ್ವಿಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ, ದರ್ಬಾರ್ ಸಿನಿಮಾದ ವಿಷ್ಯ ಈಗೇಕೆ ಅಂದ್ರಾ. ಈ ಚಿತ್ರದಲ್ಲಿ ಇಬ್ಬರು ವಿಲನ್ ಇರಲಿದ್ದಾರಂತೆ. ಈಗಾಗಲೇ ಬಾಲಿವುಡ್ ನಟರೊಬ್ಬರು ಈ ಪ್ರಾಜೆಕ್ಟ್ ನಲ್ಲಿದ್ದು, ಈಗ ಮಲಯಾಳಂ ಭಾಷೆಯಿಂದ ಮತ್ತೊಬ್ಬ ಖಳನಾಯಕನನ್ನ ಕರೆತಂದಿದ್ದಾರಂತೆ. ಹಾಗಿದ್ರೆ, ತಲೈವಾ ಚಿತ್ರದಲ್ಲಿ ರಜನಿಯನ್ನ ಎದುರಿಸಲಿರುವ ಇಬ್ಬರು ವಿಲನ್ ಯಾರು? ಮುಂದೆ ಓದಿ....

ತಲೈವಾ ವಿರುದ್ಧ ಬಬ್ಬರ್ ಅಬ್ಬರ
ಖ್ಯಾತ ನಟ ರಾಜ್ ಬಬ್ಬರ್ ಅವರ ಪುತ್ರ ಪ್ರತೀಕ್ ಬಬ್ಬರ್ ಅವರು ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಭಾಗಿ 2 ಚಿತ್ರದಲ್ಲಿ ವಿಲನ್ ಆಗಿದ್ದ ಪ್ರತೀಕ್ ಬಬ್ಬರ್ ಈಗ ತಲೈವಾಗೆ ವಿಲನ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ಕಡಿಮೆ ಸಮಯದಲ್ಲಿ ರಜನಿ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿರುವುದು ಕುತೂಹಲ ಮೂಡಿಸಿದೆ.

ಮಲಯಾಳಂ ನಟನ ಎಂಟ್ರಿ
ಪ್ರತೀಕ್ ಬಬ್ಬರ್ ಜೊತೆ ಮತ್ತೊಬ್ಬ ಖಳನಾಯಕನ ಆಗಮನವಾಗಿದೆ. ಮಲಯಾಳಂನ ಚೆಂಬನ್ ವಿನೋದ್ ಜೋಸೆ ಅವರು ದರ್ಬಾರ್ ಚಿತ್ರದಲ್ಲಿ ಎರಡನೇ ವಿಲನ್ ಆಗಿ ಘರ್ಜಿಸಲಿದ್ದಾರಂತೆ.

ಗೋಲಿಸೋಡಾ 2 ಮೊದಲ ಚಿತ್ರ
ತಮಿಳಿನಲ್ಲಿ ದರ್ಬಾರ್ ಸಿನಿಮಾ ಎರಡನೇ ಚಿತ್ರ. ಇದಕ್ಕೂ ಮೊದಲು ಗೋಲಿಸೋಡಾ 2 ಚಿತ್ರದ ಮೂಲಕ ಚೆಂಬನ್ ವಿನೋದ್ ಜೋಸೆ ಪರಿಚಯವಾಗಿದ್ದರು. ಈ ಸಿನಿಮಾದಲ್ಲೂ ವಿನೋದ್ ಜೋಸೆ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಮಿಂಚಿದ್ದರು. ಆದ್ರೆ, ದರ್ಬಾರ್ ಸಿನಿಮಾದಲ್ಲಿ ಯಾವ ಪಾತ್ರ ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ.

ಕೊನೆ ಚಿತ್ರವಾಗಬಹುದು
ಅಂದ್ಹಾಗೆ, ದರ್ಬಾರ್ ರಜನಿಯ 167ನೇ ಚಿತ್ರ. ಬಹುಶಃ ಇದೇ ಕೊನೆಯ ಚಿತ್ರವಾಗಬಹುದು ಎನ್ನಲಾಗುತ್ತಿದೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ರಜನಿಕಾಂತ್, ತಮಿಳುನಾಡಿನಲ್ಲಿ ನಡೆಯಲಿರುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಜನಿ ಪಕ್ಷ ಸ್ಪರ್ಧೆ ಮಾಡಲಿದೆ. ಹಾಗಾಗಿ, ತಯಾರಿ ನಡೆಸಬೇಕಾಗಿದೆ. ಇಲ್ಲಿಂದ ಪೂರ್ತಿ ರಾಜಕೀಯಕ್ಕೆ ತೊಡಗಿಕೊಳ್ಳಲಿರುವ ರಜನಿ ನಟನೆ ನಿಲ್ಲಿಸಬಹುದು ಎಂದು ಹೇಳಲಾಗ್ತಿದೆ.


Click it and Unblock the Notifications











