ರಜನಿಕಾಂತ್ ರನ್ನ ಭೇಟಿ ಮಾಡಲು ಮತ್ತೊಂದು ಅವಕಾಶ

By Bharath Kumar

ಸೂಪರ್ ಸ್ಟಾರ್ ರಜನಿಕಾಂತ್ ಅವರ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳದೆ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದರು. ರಜನಿ ಜನುಮದಿನದಿಂದ ಅವರನ್ನ ಭೇಟಿ ಮಾಡುವ ಅವಕಾಶ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಜನಕ್ಕೆ ತಲೈವಾ ಶಾಕ್ ನೀಡಿದ್ದರು. ಇದೀಗ, ರಜನಿಕಾಂತ್ ಅವರನ್ನ ಭೇಟಿ ಮಾಡಲು ಮತ್ತೆ ಅವಕಾಶ ಸಿಕ್ಕಿದೆ.

ಹೌದು, ಡಿಸೆಂಬರ್ 26ರಿಂದ 31 ವರೆಗೂ ಸೂಪರ್ ಸ್ಟಾರ್ ರಜನಿ, ಅಭಿಮಾನಿಗಳನ್ನ ಭೇಟಿ ಮಾಡಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲಿದ್ದಾರೆ. ಚೆನ್ನೈನ ರಾಘವೇಂದ್ರ ಹಾಲ್ ನಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಈ ವಿಷ್ಯವನ್ನ ಖುದ್ದು ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಸಂಘ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.

Rajinikanth To Meet Fans again

ದಿನಕ್ಕೆ 1000 ಅಭಿಮಾನಿಗಳಂತೆ ಪ್ರತಿ ದಿನವೂ ಬೆಳಿಗ್ಗೆ 8 ರಿಂದ ಸಂಜೆ 3 ಗಂಟೆಯ ತನಕ ರಜನಿ, ಅಭಿಮಾನಿಗಳ ಜೊತೆ ಸಮಯ ಕಳೆಯಲಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸಿನವರಿಗೂ ಭದ್ರತೆ ಕೋರಿ ಮನವಿ ಸಲ್ಲಿಸಲಾಗಿದೆ.

ಅಂದ್ಹಾಗೆ, ಈ ವರ್ಷದಲ್ಲಿ ರಜನಿಕಾಂತ್ ಅಭಿಮಾನಿಗಳನ್ನ ಭೇಟಿ ಮಾಡುತ್ತಿರುವುದು ಎರಡನೇ ಸಲ. ಇದಕ್ಕು ಮುಂಚೆ ಮೇ ತಿಂಗಳಲ್ಲಿ ಅಭಿಮಾನಿಗಳನ್ನ ಮೀಟ್ ಮಾಡಿದ್ದರು. ಹೀಗಾಗಿ, ಕುತೂಹಲ, ಚರ್ಚೆಗಳು ಹೆಚ್ಚಾಗಿದೆ. ಇದೆಲ್ಲಾ ರಾಜಕೀಯಕ್ಕೆ ತಯಾರಿ ಎಂದು ಕೆಲವರು ಮಾತನಾಡುತ್ತಿದ್ರೆ, ಮತ್ತೆ ಕೆಲವರು ರಜನಿ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದೆ. ಇದಕ್ಕಾಗಿ ಈ ಪ್ರಚಾರ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ.

ಸದ್ಯ, ರಜನಿಕಾಂತ್ ಅಭಿನಯದ '2.0' ಹಾಗೂ 'ಕಾಲ' ಸಿನಿಮಾಗಳು ಶೂಟಿಂಗ್ ಮುಗಿಸಿದ್ದು, ಮುಂದಿನ ವರ್ಷದ ಆರಂಭದಲ್ಲಿ ತೆರೆಕಾಣಲಿದೆ.

More from Filmibeat

English summary
For the second time this year, superstar Rajinikanth is likely to meet thousands of his fans in Chennai in the last week of December.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X