»   » ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸೂಪರ್ ಚಾನ್ಸ್.!

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸೂಪರ್ ಚಾನ್ಸ್.!

Posted By: Naveen
Subscribe to Filmibeat Kannada

ತಮ್ಮ ಮೆಚ್ಚಿನ ಸ್ಟಾರ್ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಅಂತ ಯಾರಿಗೆ ತಾನೆ ಆಸೆ ಇರಲ್ಲ ಹೇಳಿ.... ರಜನಿಕಾಂತ್ ಅಂತಹ ಸೂಪರ್ ಸ್ಟಾರ್ ಜೊತೆ ಒಂದು ಸೂಪರ್ ಫೋಟೋ ಬೇಕು ಎನ್ನುವುದು ಅದೆಷ್ಟೋ ಜನರ ಕನಸು. ಈಗ ಆ ಕನಸು ಅನೇಕರ ಪಾಲಿಗೆ ನನಸಾಗಲಿದೆ.[ಬರ್ತ್ ಡೇ ಆಚರಿಸಿಕೊಳ್ಳುವ ಮೂಡ್ ನಲ್ಲಿಲ್ಲ ರಜನಿಕಾಂತ್!]

ರಜನಿ ಈಗ ತಮ್ಮ ಫ್ಯಾನ್ಸ್ ಗೆ ಒಂದು ಸುವರ್ಣಾವಕಾಶ ನೀಡಿದ್ದಾರೆ. ತಮ್ಮೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳಿಗೆ ಸ್ವತಃ ರಜನಿ ಆಹ್ವಾನ ನೀಡಿದ್ದಾರೆ. ಭಾರತದ ಮೂಲೆಮೂಲೆಯಲ್ಲೂ ಅಭಿಮಾನಿಗಳನ್ನ ಹೊಂದಿರುವ 'ತಲೈವಾ' ನೀಡಿರುವ ಈ ಆಫರ್ ಎಲ್ಲರ ಮೊಗ ಅರಳಿಸಿದೆ.[ಈ ನಟನಿಗೆ ರಜನಿಕಾಂತ್ ತಂದೆಯಂತೆ, ಧನುಷ್ ಸ್ಫೂರ್ತಿಯಂತೆ!]

'ಶಿವಾಜಿ' ಸಿನಿಮಾ ಸೂಪರ್ ಹಿಟ್ ಆದಾಗ ರಜನಿ ಇದೇ ರೀತಿ ಅಭಿಮಾನಿಗಳನ್ನ ಭೇಟಿ ಮಾಡಿದ್ದರು. ಈಗ 8 ವರ್ಷದ ಬಳಿಕ ಮತ್ತೆ ರಜನಿಕಾಂತ್ ಇಂತಹ ಚಾನ್ಸ್ ನೀಡಿದ್ದಾರೆ. ಮುಂದೆ ಓದಿ...

8 ವರ್ಷದ ಬಳಿಕ ಭೇಟಿ

ಸಾವಿರಾರು ಅಭಿಮಾನಿಗಳು ಜೀವನದಲ್ಲಿ ಒಮ್ಮೆಯಾದರೂ ರಜನಿಕಾಂತ್ ರವರನ್ನ ನೋಡುವ ಆಸೆ ಇಟ್ಟುಕೊಂಡಿರುತ್ತಾರೆ. ಆಗಾಗ ರಜನಿ ಸಹ ಅಭಿಮಾನಿಗಳ ಈ ಆಸೆಯನ್ನ ಈಡೇರಿಸುತ್ತಿರುತ್ತಾರೆ. ಬರೋಬ್ಬರಿ 8 ವರ್ಷಗಳ ಬಳಿಕ ರಜನಿ ತಮ್ಮ ಅಭಿಮಾನಿಗಳಿಗೆ ಒಂದು ಸುವರ್ಣಾವಕಾಶ ನೀಡಿದ್ದಾರೆ.

ಯಾವಾಗ.?

ರಜನಿ ಅವರನ್ನ ಭೇಟಿ ಮಾಡುವುದಕ್ಕೆ ಮೇ 15 ರಿಂದ ಮೇ 19 ರವರೆಗೂ.. ಅಂದ್ರೆ 4 ದಿನಗಳು ಅಭಿಮಾನಿಗಳಿಗಾಗಿ ನಿಗದಿಯಾಗಿದೆ. ಈ ನಾಲ್ಕು ದಿನಗಳಲ್ಲಿ ಅವರ ವಿವಿಧ ಅಭಿಮಾನಿ ಸಂಘಗಳು ಹಾಗೂ ಸಾಮಾನ್ಯ ಅಭಿಮಾನಿಗಳನ್ನ ರಜನಿ ಭೇಟಿ ಮಾಡಬಹುದಾಗಿದೆ.

ಎಲ್ಲಿ..?

ರಜನಿಕಾಂತ್ ಚೆನ್ನೈನಲ್ಲಿ ಈ ಕಾರ್ಯಕ್ರಮವನ್ನ ನಡೆಸುವ ತಯಾರಿಯನ್ನ ಮಾಡಿಕೊಂಡಿದ್ದಾರೆ. ಚೆನ್ನೈ ನಗರದ ರಾಘವೇಂದ್ರ ವೆಡ್ಡಿಂಗ್ ಹಾಲ್ ನಲ್ಲಿ ನಾಲ್ಕೂ ದಿನ ಬೆಳ್ಳಗೆ 7 ಗಂಟೆಗೆ ರಜನಿ ಆ ಸ್ಥಳದಲ್ಲಿ ಹಾಜರ್ ಇರುತ್ತಾರೆ.

ಸೆಲ್ಫಿ ಸಿಗುತ್ತೆ.!

ರಜನಿಕಾಂತ್ ಅವರ ಈ ಭೇಟಿಯ ಮುಖ್ಯ ಉದೇಶ ತಮ್ಮ ಅಭಿಮಾನಿಗಳನ್ನ ಭೇಟಿ ಮಾಡಿ ಅವರಿಗೆ ಫೋಟೋ ನೀಡುವುದಾಗಿದೆ. ಈ ಕಾರ್ಯಕ್ರಮದಲ್ಲಿ ವೈಯುಕ್ತಿಕವಾಗಿ ಒಬ್ಬ ಅಭಿಮಾನಿ ರಜನಿ ಜೊತೆಗೆ ನಿಂತು ಸೆಲ್ಫಿ ತೆಗೆದುಕೊಳಬಹುದಾಗಿದೆ.

ಯಾವುದೇ ಚರ್ಚೆ ಇಲ್ಲ

ರಜನಿಯ ಈ ಭೇಟಿಯ ಸಮಯದಲ್ಲಿ ತಮ್ಮ ಸಿನಿಮಾದ ಅಥವಾ ರಾಜಕೀಯ ಎಂಟ್ರಿಯ ಕುರಿತು ಯಾವುದೇ ವಿಷಯದ ಬಗ್ಗೆ ಚರ್ಚೆಯನ್ನ ನಡೆಸುವ ಯೋಚನೆ ಇಲ್ಲವಂತೆ. ಇದು ಅಭಿಮಾನಿಗಳ ಕನಸನ್ನ ಈಡೇರಿಸುವ ಒಂದು ಭೇಟಿ ಅಷ್ಟೆ.

ಕಳೆದ ತಿಂಗಳೇ ನಿಗದಿಯಾಗಿತ್ತು.!

ರಜನಿಕಾಂತ್ ಅವರ ಈ ಕಾರ್ಯಕ್ರಮ ಕಳೆದ ತಿಂಗಳೇ ನಿಗದಿಯಾಗಿತ್ತು. ಆದರೆ, ಅಭಿಮಾನಿಗಳಿಗೆ ವೈಯುಕ್ತಿಕವಾಗಿ ಫೋಟೋ ನೀಡಬೇಕು ಎನ್ನುವ ಕೋರಿಕೆಯಿಂದ ಒಂದು ತಿಂಗಳು ಕಾರ್ಯಕ್ರಮವನ್ನ ಮುಂದಕ್ಕೆ ಹಾಕಲಾಯಿತು.

2.0 ಸಿನಿಮಾದ ನಿರೀಕ್ಷೆ

ರಜನಿಕಾಂತ್ ಅಭಿಮಾನಿಗಳು ಈಗ '2.0' ಸಿನಿಮಾಗಾಗಿ ಕಾಯುತ್ತಿದ್ದಾರೆ. ಇದು 'ರೋಬೊ' ಸಿನಿಮಾದ ಮುಂದುವರಿದ ಭಾಗವಾಗಿದ್ದು, ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರ 2018ರ ಜನವರಿಯಲ್ಲಿ ಬಿಡುಗಡೆಯಾಗಲಿದೆ.[ರಜನಿಕಾಂತ್ ಗೆ '2.0' ಚಿತ್ರೀಕರಣದ ವೇಳೆ ಗಾಯ !]

English summary
'Super star Rajinikanth' is all set to meet his fans from May 15. Rajini fans have been invited to meet, greet and pose for photographs with the Superstar.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X