Rajinikanth on KGF 2 : 'ಕೆಜಿಎಫ್ 2' ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದೇನು?
ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ 'ಕೆಜಿಎಫ್ ಚಾಪಕ್ಟರ್ 2' ಅದ್ಧೂರಿಯಾಗಿ ಬಿಡುಗಡೆಯಾಗಿದೆ. 'ಕೆಜಿಎಫ್ 2' ಬಹುಭಾಷೆಯಲ್ಲಿ ತೆರೆಗೆ ಬಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ 'KGF 2'.
ಸಿನಿಮಾ ಪ್ರೇಕ್ಷಕರು 'ಕೆಜಿಎಫ್ 2' ಸಿನಿಮಾಗೆ ಜೈ ಕಾರ ಹಾಕುತ್ತಾ ಇದ್ದಾರೆ. ಎಲ್ಲಾ ಭಾಷೆಯಲ್ಲಿ ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೇವಲ ಪ್ರೇಕ್ಷಕರು ಮಾತ್ರ ಅಲ್ಲ. ಈ ಚಿತ್ರಕ್ಕೆ ಪರಭಾಷೆಯ ಕಲಾವಿದರು ಕೂಡ ಫಿದಾ ಆಗಿದ್ದಾರೆ. ಕೆಜಿಎಫ್ ಯಶಸನ್ನು ಕಂಡು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸೂಪರ್ ರಜನಿಕಾಂತ್ ಕೂಡ 'ಕೆಜಿಎಫ್ 2' ಚಿತ್ರವನ್ನು ನೋಡಿದ್ದು, ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.
ಕನ್ನಡ ಚಿತ್ರರಂಗದಲ್ಲೇ ಧೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚ್ಯಾಪ್ಟರ್ 2' ಸಿನಿಮಾವನ್ನು ಸೂಪರ್ ಸ್ಟಾರ್ ರಜನಿಕಾಂತ್ ನೋಡಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಚಿತ್ರವನ್ನು ನೋಡಿ ತಲೈವಾ ಫುಲ್ ದಿಲ್ ಖುಷ್ ಆಗಿದ್ದಾರಂತೆ.

ಗುರುವಾರ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಚೆನ್ನೈನ ಚಿತ್ರಮಂದಿರದಲ್ಲಿ ರಜನಿಕಾಂತ್ 'ಕೆಜಿಎಫ್ 2' ವೀಕ್ಷಿಸಿದ್ದಾರೆ. ತಲೈವಾ ಕನ್ನಡದಲ್ಲಿಯೇ ಸಿನಿಮಾವನ್ನು ನೋಡಿರುವುದು ವಿಶೇಷ. ಸಿನಿಮಾ ನೋಡಿದ ಬಳಿಕ ಚಿತ್ರತಂಡದ ಜೊತೆಗೆ ರಜನಿಕಾಂತ್ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಜೊತೆಗೆ ಮಾತನಾಡಿ, ಉತ್ತಮ ಚಿತ್ರ ಮಾಡಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರಂತೆ.

ಇನ್ನು 'ಕೆಜಿಎಫ್ 2' ಚಿತ್ರದ ಬಗ್ಗೆ ಜಗಪತಿ ಬಾಬು ಟ್ವೀಟ್ ಮಾಡಿದ್ದಾರೆ. "ಕೆಜಿಎಫ್ 2 ಚಿತ್ರ ಗಳಿಕೆ ಖುಷಿ ಕೊಟ್ಟಿದೆ. ಈ ಯಶಸ್ಸನ್ನು ಚಿತ್ರತಂಡದ ಜೊತೆಗೆ ನಾನು ಹಂಚಿಕೊಳ್ಳುತ್ತೇನೆ. ಭಾರತೀಯ ಚಿತ್ರರಂಗದ ಬಾವುಟವನ್ನು ಮತ್ತಷ್ಟು ಮೇಲೆ ಕೊಂಡೊಯ್ದ ಕೀರ್ತಿ ಸಲ್ಲುತ್ತದೆ." ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











