'ಅಂಬಿ' ನೋಡಲಿದ್ದಾರೆ ಪರಭಾಷೆಯ 'ಸೂಪರ್ ಸ್ಟಾರ್ಸ್' ನಟರು
Recommended Video

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಅದ್ಧೂರಿಯಾಗಿ ಪ್ರದರ್ಶನವಾಗ್ತಿದೆ.
ಈಗಾಗಲೇ ಈ ಸಿನಿಮಾವನ್ನ ಕನ್ನಡ ಚಿತ್ರರಂಗದ ಖ್ಯಾತ ನಟರು ನೋಡಿ ಮೆಚ್ಚಿಕೊಂಡಿದ್ದಾರೆ. ಶಿವರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ತಮಿಳು ನಟ ಶರತ್ ಕುಮಾರ್, ಸುಮಲತಾ ಅಂಬರೀಶ್ ಸೇರಿದಂತೆ ಹಲವರು ಅಂಬಿಯನ್ನ ನೋಡಿ ಖುಷಿಯಾಗಿದ್ದಾರೆ.
ಇದೀಗ, ಅಂಬರೀಶ್ ಅವರ ಸೂಪರ್ ಹಿಟ್ ಚಿತ್ರವನ್ನ ಭಾರತೀಯ ಸಿನಿಮಾರಂಗದ ಸೂಪರ್ ಸ್ಟಾರ್ ನಟರು ನೋಡಲಿದ್ದಾರೆ. ಇವರ ಜೊತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕೂಡ ಇಂದು ಅಂಬಿ ಸಿನಿಮಾ ನೋಡಿ ಕಣ್ತುಂಬಿಕೊಳ್ಳಲಿದ್ದಾರೆ. ಯಾರದು.? ಮುಂದೆ ಓದಿ...

ಅಂಬಿ ನೋಡಲಿದ್ದಾರೆ ರಜನಿಕಾಂತ್
ಅಂಬರೀಶ್ ಸ್ನೇಹಿತರು ಹಾಗೂ ಸಮಕಾಲಿನ ನಟರಾದ ರಜನಿಕಾಂತ್, ಶತ್ರುಘ್ಞ ಸಿನ್ಹಾ, ಮೋಹನ್ ಬಾಬು ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನ ವೀಕ್ಷಿಸಲಿದ್ದಾರೆ ಎನ್ನಲಾಗಿದೆ. ಆದ್ರೆ, ಯಾವಾಗ ಮತ್ತು ಎಲ್ಲಿ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

ಆಡಿಯೋ ಕಾರ್ಯಕ್ರಮಕ್ಕೆ ಬರಬೇಕಿತ್ತು
ವಿಶೇಷ ಅಂದ್ರೆ, 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಆಡಿಯೊ ಲಾಂಚ್ ಗೆ ಇವರೆಲ್ಲರೂ ಬರಬೇಕಿತ್ತು. ಆದ್ರೆ. ಕಾರಣಾಂತರಗಳಿಂದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅಧಿಕೃತವಾಗಿ ನಡೆದಿಲ್ಲ. ಹಾಗಾಗಿ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.

ಸಿನಿಮಾ ಮಾಡಲು ರಜನಿ ಒಪ್ಪಿಸಿದ್ದರು
ಮತ್ತೊಂದು ವಿಶೇಷ ಅಂದ್ರೆ, ಅಂಬರೀಶ್ ಅವರಿಗೆ ಈ ಸಿನಿಮಾ ಮಾಡ್ಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಗೊಂದಲವಿತ್ತು. ಆ ಸಮಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರೇ ಅಂಬಿಯ ಬಳಿ ''ಈ ಸಿನಿಮಾವನ್ನ ನೀವು ಮಾಡಿ ಎಂದು ಒತ್ತಾಯಿಸಿದರು ಎಂದು ಸ್ವತಃ ಅಂಬರೀಶ್ ಅವರೇ ಹೇಳಿಕೊಂಡಿದ್ದಾರೆ.

ಪುನೀತ್ ನೋಡಲಿದ್ದಾರೆ
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ನೋಡಲಿದ್ದಾರೆ. ಇತ್ತೀಚಿಗಷ್ಟೆ ಶಿವರಾಜ್ ಕುಮಾರ್ ಕೂಡ ಸಿನಿಮಾ ನೋಡಿದ್ದರು.

ಅಂಬಿ ಮತ್ತು ಸುದೀಪ್ ಸಿನಿಮಾ
ಇನ್ನುಳಿದಂತೆ ಅಂಬರೀಶ್ ಜೊತೆ ಸುದೀಪ್, ಸುಹಾಸಿನಿ, ಶ್ರುತಿ ಹರಿಹರನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಗುರುದಾತ್ ಗಾಣಿಗ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











