»   » ರಜನಿ ಇನ್ನು ಮುಂದೆ ಸಿನಿಮಾದಲ್ಲಿ ಅಭಿನಯಿಸುವುದಿಲ್ವಂತೆ

ರಜನಿ ಇನ್ನು ಮುಂದೆ ಸಿನಿಮಾದಲ್ಲಿ ಅಭಿನಯಿಸುವುದಿಲ್ವಂತೆ

Posted By:
Subscribe to Filmibeat Kannada
ರಜಿನಿಕಾಂತ್ ಸಿನಿಮಾಗಳಿಗೆ ಗುಡ್ ಬೈ ಹೇಳ್ತಾರಾ? | Filmibeat Kannada

ಚಿತ್ರರಂಗದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ರಾಜಕೀಯಕ್ಕೆ ಬರುವುದನ್ನ ಕನ್ಫರ್ಮ್ ಮಾಡಿದ್ದಾರೆ. ಚೆನೈನ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳ ಜೊತೆ ನಡೆಸುತ್ತಿರುವ ಸಂವಾದದಲ್ಲಿ ರಜನಿ ಪೊಲಿಟಿಕ್ಸ್ ಗೆ ಎಂಟ್ರಿ ಕೊಡುವುದನ್ನ ಖಚಿತ ಪಡಿಸಿದ್ದಾರೆ.

ರಜನಿಕಾಂತ್ ರಾಜಕೀಯಕ್ಕೆ ಬರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಂತೋಷದ ಜೊತೆಗೆ ನೋವನ್ನು ನೀಡಿದೆ. ರಜನಿಕಾಂತ್ ಇನ್ನು ಮುಂದೆ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದ್ದರಿಂದ ಸಿನಿಮಾಗಳಲ್ಲಿ ಅಭಿನಯಿಸುವುದು ಡೌಟ್ ಅನ್ನುವ ಸುದ್ದಿ ಹರಿದಾಡುತ್ತಿದೆ.

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್

Rajinikanth would not be acting in movies after coming to politics

ರಜನಿಕಾಂತ್ ರಾಜಕೀಯ ರಂಗಕ್ಕೆ ಪ್ರವೇಶ ಮಾಡುತ್ತಿರುವ ಬಗ್ಗೆ ಖಾಸಗಿ ವಾಹಿನಿಯ ಜೊತೆ ಮಾತನಾಡಿದ ಸಹೋದರ ಸತ್ಯನಾರಾಯಣ್ ರಾವ್ ರಜನಿ ಇನ್ನು ಮುಂದೆ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದಿದ್ದಾರೆ.

ಒಂದು ತಿಂಗಳ ಹಿಂದೆ ಮಂತ್ರಾಲಯಕ್ಕೆ ಭೇಟಿ ನೀಡುವ ಮುನ್ನ ಸಹೋದರ ಸತ್ಯನಾರಾಯಣ್ ಅವರನ್ನ ಮನೆಗೆ ಬಂದಿದ್ದ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಮಾಡಿದ್ದರಂತೆ.

Rajinikanth would not be acting in movies after coming to politics

ಸದ್ಯ ಅಭಿನಯಿಸಿರುವ 2.೦ ಹಾಗೂ ಕಾಲ ಕರಿಕಾಳನ್ ಚಿತ್ರಗಳ ನಂತರ ತಲೈವಾ ಯಾರಿಗೂ ಕಾಲ್ ಶೀಟ್ ನೀಡುವುದಿಲ್ಲವಂತೆ. ರಾಜಕೀಯ ಪ್ರವೇಶ ಮಾಡಿ ಜನರ ಸೇವೆ ಮಾಡಬೇಕು ಅನ್ನುವುದು ರಜನಿಯ ಮಹಾದಾಸೆ . ಆದ್ದರಿಂದ ಇನ್ನು ಮುಂದೆ ಅಭಿನಯಕ್ಕೆ ಗುಡ್ ಬೈ ಹೇಳುತ್ತಾರೆ ಅಂತಿದ್ದಾರೆ.

English summary
Super star Rajinikanth enters politics, His brother Sathyanarayan rao said Rajinikanth would not be acting in movies after coming to politics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X