ಟೀಸರ್ ಮೂಲಕವೇ ವಿಶ್ವವನ್ನ ಬೆರಗುಗೊಳಿಸುತ್ತಿದೆ '2.0'

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ '2.0' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಈ ಟೀಸರ್ ಇಡೀ ವಿಶ್ವವನ್ನೇ ಬೆರಗುಗೊಳಿಸುತ್ತಿದೆ.

ಹೌದು, '2.0' ಚಿತ್ರದ ಟೀಸರ್ ನೋಡಿದ್ರೆ, ಇದ್ಯಾವುದೋ ಹಾಲಿವುಡ್ ಸಿನಿಮಾ ಇರಬೇಕು ಎಂದುಕೊಳ್ಳುವುದು ಪಕ್ಕಾ. ಬಾಲಿವುಡ್ ಚಿತ್ರಗಳನ್ನ ಮೀರಿ ಈ ಸಿನಿಮಾ ತಯಾರಾಗಿದೆ. ಬಹುಶಃ ಈ ಚಿತ್ರದಿಂದ ಭಾರತೀಯ ಚಿತ್ರದ ಹಿರಿಮೆ ಮತ್ತಷ್ಟು ಎತ್ತರಕ್ಕೆ ಹೋದರು ಅಚ್ಚರಿಯಿಲ್ಲ.

ನಿರೀಕ್ಷೆಯತೆ '2.0' ಸಿನಿಮಾದಲ್ಲಿ ಹೆಚ್ಚು ಗ್ರಾಫಿಕ್ಸ್ ಆಕರ್ಷಣೆಯಾಗಿದೆ. ಗ್ರಾಫಿಕ್ಸ್ ಮೂಲಕವೇ ಥ್ರಿಲ್ಲಿಂಗ್ ದೃಶ್ಯಗಳನ್ನ ತಯಾರಿಸಿದ್ದಾರೆ. ಈ ಟೀಸರ್ ನೋಡಿದ್ರೆ, ಬಹುಶಃ ಚಿತ್ರಪ್ರೇಮಿಗಳಿಗೆ ಪಕ್ಕಾ ಆಕ್ಷನ್ ಮನರಂಜನೆ ಸಿಗೋದು ಖಚಿತವೆನ್ನಲಾಗಿದೆ.

Rajinikanths 2.0 teaser released

ಇನ್ನು ವಿಶೇಷ ಅಂದ್ರೆ, 'ರೋಬೋ' ಮೊದಲ ಭಾಗದಲ್ಲಿ ಕಮಾಲ್ ಮಾಡಿದ್ದ ಚಿಟ್ಟಿ ಪಾತ್ರ ಇಲ್ಲಿಯೂ ಮುಂದುವರೆದಿದೆ. ಹಾಗಾಗಿ, ತಲೈವಾ ಫ್ಯಾನ್ಸ್ ಗೆ ಇದು ಡಬಲ್ ಖುಷಿ.

Rajinikanths 2.0 teaser released

ಇನ್ನು ವಿಲನ್ ಪಾತ್ರದಲ್ಲಿ ಮಿಂಚಿರುವ ಅಕ್ಷಯ್ ಕುಮಾರ್ ಅವರ ಗೆಟೆಪ್, ಲುಕ್, ಅವರ ಎಂಟ್ರಿ ಇಡೀ ಸಿನಿಮಾವನ್ನೇ ಆವರಿಸಿಕೊಂಡಿದೆ. ಬಹುಶಃ ರಜನಿಕಾಂತ್ ಅವರಂತೆ ಅಕ್ಷಯ್ ಕುಮಾರ್ ಕೂಡ ಈ ಸಿನಿಮಾದಲ್ಲಿ ಹೆಚ್ಚು ಮೋಡಿ ಮಾಡಲಿದ್ದಾರೆ ಎನ್ನುವುದು ಈ ಟೀಸರ್ ಹೇಳುತ್ತಿದೆ.

ಸುಮಾರು 543 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾ ಇದಾಗಿದೆ. ಸ್ಟಾರ್ ನಿರ್ದೇಶಕ ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆಕಾಣಲಿದೆ.

More from Filmibeat

English summary
The teaser of Rajinikanth's much-awaited 2.0 is finally out. 2.0 is Rajinikanth's Ganesh Chaturthi bonanza for us.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X