ರಜನಿ ಅತ್ತಿಗೆ ನಿಧನ : ಅಂತಿಮ ದರ್ಶನಕ್ಕೆ ಬೆಂಗಳೂರಿಗೆ ಬಂದ ನಟ
Recommended Video

ನೊಂದ ರಜನಿಕಾಂತ್್ಗೆ ಸಮಾಧಾನ ಹೇಳಿದ ರಾಕ್‌ಲೈನ್ ವೆಂಕಟೇಶ್..! | Filmibeat Kannada
ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ (ಸೆಪ್ಟೆಂಬರ್ 3) ಬೆಂಗಳೂರಿಗೆ ಆಗಮಿಸಿದ್ದರು. ಅನೇಕ ಬಾರಿ ಬೆಂಗಳೂರಿಗೆ ಬಂದು ತಮಗಿಷ್ಟವಾಗುವ ರಸ್ತೆಯಲ್ಲಿ ಯಾರಿಗೂ ಗೊತ್ತಾಗದಂತೆ ಸುತ್ತಾಡಿ ಹೋಗುತ್ತಿದ್ದರು ರಜನಿ. ಆದರೆ, ಈ ಬಾರಿ ರಜನಿಕಾಂತ್ ಬೆಂಗಳೂರಿಗೆ ಬಂದದ್ದು ತನ್ನ ಅತ್ತಿಗೆಯ ಅಂತಿಮ ದರ್ಶನ ಪಡೆಯಲು ಎನ್ನುವುದು ಬೇಸರದ ಸಂಗತಿ.
ಹೌದು, ನಟ ರಜನಿಕಾಂತ್ ಅವರ ಸಹೋದರ ಸತ್ಯ ನಾರಾಯಣ್ ಅವರ ಪತ್ನಿ ಪದ್ಮಾವತಿ ಭಾನುವಾರ ತಮ್ಮ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನಲ್ಲಿರುವ ಸತ್ಯ ನಾರಾಯಣ್ ಅವರ ನಿವಾಸದಲ್ಲಿ ಪದ್ಮಾವತಿ ಅವರ ಅಂತಿಮ ದರ್ಶನವನ್ನು ಏರ್ಪಡಿಸಲಾಗಿತ್ತು.

ಇದೇ ಕಾರಣಕ್ಕಾಗಿ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್ ಹಾಗೂ ಪತ್ನಿ ಲತಾ ರಜನಿಕಾಂತ್ ಮತ್ತು ಪುತ್ರಿ ಸೌಂದರ್ಯ ಪದ್ಮಾವತಿ ಅವರ ಅಂತಿಮ ದರ್ಶನ ಪಡೆದುಕೊಂಡರು. ಇದೇ ಸಮಯದಲ್ಲಿ ಕನ್ನಡ ಸಿನಿಮಾ ನಿರ್ಮಾಪಕ ಹಾಗೂ ರಜನಿಕಾಂತ್ ಅವರ ಸ್ನೇಹಿತ ರಾಕ್ ಲೈನ್ ವೆಂಕಟೇಶ್ ಕೂಡ ರಜನಿಕಾಂತ್ ಜೊತೆಯಲ್ಲಿ ಇದ್ದು ಸಾಂತ್ವನ ಹೇಳಿದರು .
More from Filmibeat
English summary
Actor Rajinikanth's family paid tributes to his sister-in-law, who passed away on Sunday, in Bengaluru. He was accompanied by Rockline Venkatesh
rajinikanth death tollywood sandalwood kannada movies ರಜನಿಕಾಂತ್ ನಿಧನ ಟಾಲಿವುಡ್ ಕನ್ನಡ ಸಿನಿಮಾ ಸ್ಯಾಂಡಲ್ ವುಡ್


Click it and Unblock the Notifications











