For Quick Alerts
  ALLOW NOTIFICATIONS  
  For Daily Alerts

  ರಜನಿ ಜೊತೆ ಅಭಿನಯಿಸಿದ್ದ ನಾಯಿಯ ಬೆಲೆ ಇಷ್ಟೊಂದು ಕೋಟಿನಾ.!

  By Bharath Kumar
  |
  ರಜಿನಿ ಕಾಲಾ ಸಿನಿಮಾದ ಪೋಸ್ಟರ್ ನಲ್ಲಿರುವ ನಾಯಿಯ ಬೆಲೆ ಎಷ್ಟು ಗೊತ್ತಾ? | Filmibeat Kannada

  ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಕಾರು, ಬೈಕ್ ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇರುತ್ತೆ. ಇನ್ನು ಸೆಲೆಬ್ರಿಟಿಗಳು ಹಾಕಿಕೊಂಡಿದ್ದ ಕಾಸ್ಟ್ಯೂಮ್ ಗಳನ್ನ ಕೂಡ ದುಬಾರಿ ಬೆಲೆ ಕೊಟ್ಟು ಖರೀದಿಸುವಂತಹ ಜನರನ್ನ ನೋಡಬಹುದು. ಈಗ ಇವುಗಳನ್ನ ಮೀರಿಸುವಂತಹ ಅಭಿಮಾನಿಗಳು ಗಮನ ಸೆಳೆಯುತ್ತಿದ್ದಾರೆ.

  ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲ' ಸಿನಿಮಾದಲ್ಲಿ 'ಮಣಿ' ಎಂಬ ನಾಯಿ ಅಭಿನಯಿಸಿದೆ. ಈ ಶ್ವಾನಕ್ಕೆ ಈಗ ಸಖತ್ ಬೆಲೆ ಬಂದಿದೆ. ಕೋಟ್ಯಾಂತರ ರೂಪಾಯಿ ಕೊಟ್ಟು 'ಮಣಿ'ಯನ್ನ ಕೊಂಡುಕೊಳ್ಳಲು ಫ್ಯಾನ್ಸ್ ಮುಂದೆ ಬಂದಿದ್ದಾರೆ.

  ಟೀಸರ್: 'ಕಬಾಲಿ'ಗಿಂತ ಜೋರಾಗಿದೆ 'ಕಾಲ'ನ ರೌಡಿಸಂಟೀಸರ್: 'ಕಬಾಲಿ'ಗಿಂತ ಜೋರಾಗಿದೆ 'ಕಾಲ'ನ ರೌಡಿಸಂ

  'ಕಾಲ' ಪೋಸ್ಟರ್ ನಲ್ಲಿ ಈ ಶ್ವಾನ ಹೆಚ್ಚು ಗಮನ ಸೆಳೆಯುತ್ತಿದೆ. ಈ ಶ್ವಾನವನ್ನ ಖರೀದಿಸಿಲು ಮಲೇಷಿಯಾ ಮೂಲದ ವ್ಯಕ್ತಿಗಳು 1 ಕೋಟಿ ಆಫರ್ ಮಾಡಿದ್ದಾರೆ, ಇನ್ನೊಬ್ಬ ವ್ಯಕ್ತಿ 2 ಕೋಟಿ ಡಿಮ್ಯಾಂಡ್ ಇಟ್ಟಿದ್ದಾನೆ ಎಂದು ಟ್ರೈನರ್ ಸೈಮನ್ ತಿಳಿಸಿದ್ದಾರೆ. ಆದ್ರೆ, ಈ ಶ್ವಾನವನ್ನ ಮರಿಯಾಗಿದ್ದನಿಂದಲೂ ಸಾಕಿರುವ ಸೈಮನ್ ಈ ನಾಯಿಯನ್ನ ಮಾರಲು ಇಷ್ಟವಿಲ್ಲವೆಂದು ಈ ಅವಕಾಶವನ್ನ ತಳ್ಳಿದ್ದಾರೆ ಎಂದು ತಮಿಳುನಾಡು ಮೂಲದ ಮಾಧ್ಯಮಗಳು ವರದಿ ಮಾಡಿವೆ.

  ರಜನಿಕಾಂತ್ ಸಿನಿಮಾ ಬಗ್ಗೆ ಹೀಗೊಂದು ಅನುಮಾನ ಶುರುವಾಗಿದೆ.!ರಜನಿಕಾಂತ್ ಸಿನಿಮಾ ಬಗ್ಗೆ ಹೀಗೊಂದು ಅನುಮಾನ ಶುರುವಾಗಿದೆ.!

  ಮಣಿ (ಶ್ವಾನ) ಗೂ ಮತ್ತು ಸೂಪರ್ ಸ್ಟಾರ್ ನಡುವೆ ಉತ್ತಮ ಸಂಬಂಧ ಮೂಡಿದೆ. ಪ್ರತಿದಿನವೂ ರಜನಿ, ಮಣಿಗಾಗಿ ಒಂದು ಬಿಸ್ಕಟ್ ಪ್ಯಾಕ್ ತರುತ್ತಿದ್ದರು. ಹೀಗಾಗಿ, ನಮ್ಮ ಕೆಲಸವನ್ನ ತಲೈವಾ ಕಮ್ಮಿ ಮಾಡಿದ್ದರು ಎಂದು ಸೈಮನ್ ಹೇಳಿದ್ದಾರೆ.

  ಇದರ ಜೊತೆಗೆ ಫೇಸ್ ಬುಕ್ ಗೆ ಸೂಪರ್ ಸ್ಟಾರ್ ರಜನಿಕಾಂತ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗಷ್ಟೆ ಇನ್ಸ್ಟಾಗ್ರಾಮ್ ಗೂ ಪ್ರವೇಶ ಮಾಡಿದ ತಲೈವಾ ಸೋಶಿಯಲ್ ಮೀಡಿಯಾದಲ್ಲಿ ಸಂಪೂರ್ಣವಾಗಿ ಸಕ್ರೀಯರಾಗಿದ್ದಾರೆ.

  ಸಾಮಾಜಿಕ ಜಾಲತಾಣಗಳಲ್ಲಿ ರಜನಿಕಾಂತ್ ಹವಾ ಬಲು ಜೋರುಸಾಮಾಜಿಕ ಜಾಲತಾಣಗಳಲ್ಲಿ ರಜನಿಕಾಂತ್ ಹವಾ ಬಲು ಜೋರು

  ಇನ್ನು 'ಕಾಲ' ಚಿತ್ರಕ್ಕೆ 'ಕಬಾಲಿ' ಖ್ಯಾತಿಯ ನಿರ್ದೇಶಕ ಪಾ ರಂಜಿತ್ ಆಕ್ಷನ್ ಕಟ್ ಹೇಳಿದ್ದಾರೆ. ನಟ ಧನುಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಏಪ್ರಿಲ್ 27 ರಂದು 'ಕಾಲ' ಸಿನಿಮಾ ರಿಲೀಸ್ ಆಗುತ್ತಿದೆ.

  English summary
  Professional animal trainer Simon revealed that many people from Malaysia have offered to pay crores for the dog, named Mani, only because he was privileged enough to sit next to the rajinikanth in kaala movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X