For Quick Alerts
  ALLOW NOTIFICATIONS  
  For Daily Alerts

  7 ತಿಂಗಳಲ್ಲಿ 1000 ಕೋಟಿ ಗಳಿಸಿದ ರಜನಿಕಾಂತ್

  |

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಜಮಾನ ಮುಗಿದಿದೆ. ಈಗ ಅವರ ಚಿತ್ರಗಳಿಗೆ ಬೇಡಿಕೆ ಇಲ್ಲ. ರಜನಿ ಸಿನಿಮಾಗಳನ್ನ ನೋಡುವ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಯುವ ನಟರ ಹವಾ ಹೆಚ್ಚಾದ ಕಾರಣ ತಲೈವಾ ಸಿನಿಮಾಗಳು ಬಿಸಿನೆಸ್ ಮಾಡ್ತಿಲ್ಲ ಎಂದೆಲ್ಲ ಚಿತ್ರಜಗತ್ತಿನಲ್ಲಿ ಆಡಿಕೊಂಡುವರಿದ್ದಾರೆ.

  ಆದ್ರೆ, ಹೀಗೆ ಹೇಳಿ ಆಡಿಕೊಂಡುವರಿಗೆಲ್ಲಾ ತಲೈವಾ ಮಾಂಜಾ ಕೊಟ್ಟಿದ್ದಾರೆ. ಸೂಪರ್ ಸ್ಟಾರ್ ಗೆ ಮಾರ್ಕೆಟ್ ಬಿದ್ದೋಗಿದೆ ಎಂದಿದ್ದವರಿಗೆ ಮಾರುಕಟ್ಟೆಗೆ ಬಾಸ್ ರಜನಿಕಾಂತ್ ಎಂದು ಅಂಕಿ ಅಂಶಗಳು ಹೇಳುತ್ತಿದೆ.

  ರಜನಿ ಮುಂದಿನ ಚಿತ್ರಕ್ಕೆ ಸ್ಟಾರ್ ನಿರ್ದೇಶಕ ಮತ್ತು ಸ್ಟಾರ್ ನಟಿ.!

  ಹೌದು, ಕೇವಲ 7 ತಿಂಗಳಲ್ಲಿ ರಜನಿಕಾಂತ್ 1000 ಕೋಟಿ ಗಳಿಸಿ ಇನ್ನು ಆಟ ಮುಗಿದಿಲ್ಲ ಎಂದು ತೋರಿಸಿದ್ದಾರೆ. ಅಷ್ಟಕ್ಕೂ, ಈ ಸಾವಿರ ಕೋಟಿಯ ಅಸಲಿ ಕಥೆ ಏನು? ಮುಂದೆ ಓದಿ.....

  ಗೆದ್ದು ಬೀಗಿದ ಪೇಟಾ

  ಗೆದ್ದು ಬೀಗಿದ ಪೇಟಾ

  ಪೇಟಾ ಸಿನಿಮಾ ನೋಡಿದ ಬಳಿಕ 'ತುಂಬಾ ವರ್ಷಗಳ ನಂತರ ನಿಜವಾದ ರಜನಿಕಾಂತ್ ನೋಡುತ್ತಿದ್ದೇವೆ ಎನ್ನುತ್ತಿದ್ದಾರೆ ಪ್ರೇಕ್ಷಕರ. ಅದರ ಪರಿಣಾಮ ಪೇಟಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದು ಬೀಗಿದೆ. ಸದ್ಯದ ದಾಖಲೆಯ ಪ್ರಕಾರ 250 ಕೋಟಿ ಗಳಿಕೆ ಕಂಡು ಮುನ್ನುಗ್ಗುತ್ತಿದೆ ತಲೈವಾ ಅಭಿನಯದ ಪೇಟಾ.

  ಅಭಿಮಾನಿಗಳ ಆಸೆಯನ್ನ ನಿರಾಸೆ ಮಾಡಿದ ಸೂಪರ್ ಸ್ಟಾರ್.!

  800 ಕೋಟಿ ಮುಟ್ಟಿದ 2.0

  800 ಕೋಟಿ ಮುಟ್ಟಿದ 2.0

  ಪೇಟಾ ಚಿತ್ರಕ್ಕೂ ಮುಂಚೆ ಬಿಡುಗಡೆಯಾಗಿದ್ದ 2.0 ಸಿನಿಮಾ ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತು. ಆದ್ರೆ, ಚಿತ್ರಕ್ಕೆ ಬಂದ ಮಿಶ್ರಪ್ರತಿಕ್ರಿಯೆಯಿಂದ ಕಲೆಕ್ಷನ್ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವಂತಾಯಿತು. ಹಾಗಿದ್ದರೂ ಸಿನಿಮಾ ಮಾತ್ರ ಮುನ್ನಗುತ್ತಿದೆ. ಸದ್ಯಕ್ಕೆ 800 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಈ ಎರಡು ಸಿನಿಮಾಗಳು ರಿಲೀಸ್ ಆದ ಅಂತರ ಬಹಳ ಕಮ್ಮಿ. ಎರಡ್ಮೂರು ತಿಂಗಳಲ್ಲಿ ಎರಡು ಸಿನಿಮಾ ತೆರೆಕಂಡಿತ್ತು.

  Petta review: ಅಭಿಮಾನಿಗಳು ನಿರೀಕ್ಷೆ ಮಾಡಿದ್ದು ಇದನ್ನೇ

  ಮಕಾಡೆ ಮಲಗಿದೆ ಕಾಲಾ

  ಮಕಾಡೆ ಮಲಗಿದೆ ಕಾಲಾ

  ಈ ಎರಡು ಚಿತ್ರಗಳಿಗೂ ಮುಂಚೆ ರಿಲೀಸ್ ಆಗಿದ್ದ ಕಾಲಾ ಅದ್ಯಾಕೋ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ. ರಿಲೀಸ್ ಗೂ ಮೊದಲು ಇದ್ದ ನಿರೀಕ್ಷೆ ತೆರೆಕಂಡ ಬಳಿಕ ಹುಸಿಯಾಯಿತು. ಹಾಗಿದ್ದರೂ 160 ಕೋಟಿವರೆಗೂ ಬಿಸಿನೆಸ್ ಮಾಡಿತ್ತು.

  ಕನ್ನಡದಲ್ಲಿ ಸದ್ಯಕ್ಕಿಲ್ಲ ರಜನಿ 'ಪೇಟಾ', ತಲೈವಾ ಧ್ವನಿಯಲ್ಲಿ ಕನ್ನಡ.!

  1000 ಕೋಟಿ ದಾಟಿದ ರಜನಿ

  1000 ಕೋಟಿ ದಾಟಿದ ರಜನಿ

  ಹಾಗ್ನೋಡಿದ್ರೆ, ರಜನಿಕಾಂತ್ ಅಭಿನಯದ ಈ ಮೂರು ಚಿತ್ರಗಳು ಕೇವಲ 7 ತಿಂಗಳ ಅಂತರದಲ್ಲಿ ತೆರೆಕಂಡಿದೆ. 7 ತಿಂಗಳಲ್ಲಿ 1000ಕ್ಕೂ ಅಧಿಕ ಕೋಟಿ ರಜನಿ ಸಿನಿಮಾದಿಂದ ಬಂದಿದೆ. ಮೂರ್ನಾಲ್ಕು ವರ್ಷಗಳ ಕಾಲ ಸಿನಿಮಾ ಮಾಡಿ 1000 ಕೋಟಿ ಮಾಡಿದ ಉದಾಹರಣೆ ಇದೆ. ಆದ್ರೆ, ಕೇವಲ 7 ಏಳೆಂಟು ತಿಂಗಳಲ್ಲಿ 1000 ಕೋಟಿ ಮಾಡುವುದು ಅಂದ್ರೆ ಅದು ತಲೈವಾ ಮಾತ್ರ. ಈ ಅಂಕಿ ಅಂಶಗಳನ್ನ ಗಮನಿಸಿದ್ರೆ ರಜನಿ ಜಮಾನ ಇನ್ನು ಮುಗಿದಿಲ್ಲ ಎನ್ನುವುದು ಖಾತ್ರಿ.

  ಕಬಾಲಿ, ರೋಬೋ ದಾಖಲೆ ಅಳಿಸಿ ಹೊಸ ದಾಖಲೆ ಬರೆದ ಕೆಜಿಎಫ್

  English summary
  rajinikanth movies, rajinikanth films grossed 1000 crore, Kaala, 2.0, Petta,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X