'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಅಪ್ಪು ಪಾತ್ರವನ್ನ ಇವರು ಮಾಡಬೇಕಿತ್ತಂತೆ.!
Recommended Video
ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ಭಕ್ತ ಪ್ರಹ್ಲಾದ' ಚಿತ್ರವನ್ನ ಯಾರೂ ಮರೆಯಲು ಸಾಧ್ಯವಿಲ್ಲ. ತಂದೆ-ಮಗನ ಆ ಜುಗಲ್ ಬಂದಿ ನೋಡಿ ಕನ್ನಡ ಕಲಾರಸಿಕರು ಫುಲ್ ಖುಷಿಯಾಗಿದ್ದರು.
ಹಿರಣ್ಯ ಕಶಿಪು ಪಾತ್ರದಲ್ಲಿ ಅಣ್ಣಾವ್ರ ಅಮೋಘ ನಟನೆ ಹಾಗೂ ಭಕ್ತ ಪ್ರಹ್ಲಾದನಾಗಿ ಮಾಸ್ಟರ್ ಲೋಹಿತ್ (ಪುನೀತ್ ಮೊದಲ ಹೆಸರು) ಅಭಿನಯ ನೋಡಿದವರು, ಬಹುಶಃ ಇವರೇ ಇರಬೇಕು ನಿಜವಾದ ಹಿರಣ್ಯ ಕಶಿಪು ಮತ್ತು ಭಕ್ತ ಪ್ರಹ್ಲಾದ ಎಂದುಕೊಂಡಿರುತ್ತಾರೆ. ಅಷ್ಟರ ಮಟ್ಟಿಗೆ ಈ ಪಾತ್ರಗಳು ನೋಡುಗರ ಮನಸ್ಸಿನ ಮೇಲೆ ಪ್ರಭಾವ ಬೀರಿದೆ.
ಭಕ್ತ ಪ್ರಹ್ಲಾದನಾಗಿ ಪುನೀತ್ ಅವರ ಬದಲು ಯಾರೇ ಮಾಡಿದ್ದರು ಅಂತಹ ಅಭಿನಯದ ಬರ್ತಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೀಗ, ಯಾರಿಗೂ ಗೊತ್ತಿಲ್ಲದ ಅಪರೂಪದ ಸಂಗತಿಯೊಂದು ಬಹಿರಂಗವಾಗಿದೆ. ಪುನೀತ್ ಗೂ ಮೊದಲು ಭಕ್ತ ಪ್ರಹ್ಲಾದ ಪಾತ್ರವನ್ನ ಇನ್ನೊಬ್ಬರು ಮಾಡಬೇಕಿತ್ತು ಎಂಬ ಆಸೆ ಡಾ ರಾಜ್ ಗೆ ಇತ್ತಂತೆ. ಆದ್ರೆ, ಅದು ಆಗ್ಲಿಲ್ಲ. ಯಾರದು? ಮುಂದೆ ಓದಿ.....

ಡಾ ರಾಜ್ ಗೆ ಆಸೆ ಇತ್ತಂತೆ
ಡಾ ರಾಜ್ ಕುಮಾರ್ ಅವರಿಗೆ ಐದು ಜನ ಮಕ್ಕಳು. ಮೂರು ಗಂಡು ಮತ್ತು ಇಬ್ಬರು ಹೆಣ್ಣು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮೂವರು ಸಿನಿಮಾದಲ್ಲಿ ನಟಿಸಿದ್ದಾರೆ. ಆದ್ರೆ, ಹೆಣ್ಣು ಮಕ್ಕಳಿಬ್ಬರು ಬೆಳ್ಳಿತೆರೆ ಮೇಲೆ ಬರಲೇ ಇಲ್ವಲ್ಲ ಎಂಬ ಕುತೂಹಲ ಕೆಲವು ಅಭಿಮಾನಿಗಳಲ್ಲಿ ಇದೆ. ಅಚ್ಚರಿ ಏನಪ್ಪಾ ಅಂದ್ರೆ, ರಾಜ್ ಕುಮಾರ್ ಪುತ್ರಿಯರಲ್ಲಿ ಒಬ್ಬರು ಸಿನಿಮಾದಲ್ಲೂ ನಟಿಸಿದ್ದಾರಂತೆ.

ಪೂರ್ಣಿಮಾ ಪ್ರಹ್ಲಾದ ಆಗಬೇಕಿತ್ತಂತೆ
ಎಲ್ಲ ಅಂದುಕೊಂಡಂತೆ ಆಗಿದ್ದರೇ ಡಾ ರಾಜ್ ಕುಮಾರ್ ಅವರ ಕಿರಿಯ ಪುತ್ರಿ ಪೂರ್ಣಿಮಾ ಅವರು ಭಕ್ತ ಪ್ರಹ್ಲಾದನ ಪಾತ್ರ ಮಾಡಬೇಕಿತ್ತಂತೆ. ಆಗಾಗಲೇ ಮೂರ್ನಾಲ್ಕು ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದ ಪೂರ್ಣಿಮಾ, ಈ ಪಾತ್ರ ಮಾಡಬೇಕೆಂದು ಸ್ವತಃ ಅಣ್ಣಾವ್ರಿಗೂ ಇಷ್ಟವಿತ್ತಂತೆ. ಆದ್ರೆ, ಈ ಪಾತ್ರಕ್ಕೆ ಪೂರ್ಣಿಮಾ ದೊಡ್ಡವರಾಗ್ತಾರೆ ಎಂಬ ಕಾರಣಕ್ಕೆ ಪುನೀತ್ ಅವರಿಂದ ಮಾಡಿಸಿದರಂತೆ. ಈ ವಿಷ್ಯ ಖುದ್ದು ಪೂರ್ಣಿಮಾ ಮತ್ತು ಲಕ್ಷ್ಮಿ ಅವರೇ ಸಂದರ್ಶನವೊಂದರಲ್ಲಿ ಬಿಟ್ಟುಕೊಟ್ಟಿದ್ದಾರೆ.

ಇಂಡಸ್ಟ್ರಿಗೆ ಪೂರ್ಣಿಮಾ ಮಕ್ಕಳು
ಬಾಲನಟಿಯಾಗಿ ನಟಿಸಿದ್ದ ಪೂರ್ಣಿಮಾ ಅವರು ಮುಂದೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಈಗ ಅವರ ಮಕ್ಕಳು ಇಬ್ಬರು ಸಿನಿಮಾ ಇಂಡಸ್ಟ್ರಿಗೆ ಬರಲು ಸಜ್ಜಾಗುತ್ತಿದೆ. ಮಗ ಧೀರೆನ್ ರಾಮ್ ಕುಮಾರ್ ಈಗಾಗಲೇ 'ದಾರಿ ತಪ್ಪಿದ ಮಗ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಗಳೂ ಕೂಡ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ.

ಭಕ್ತ ಪ್ರಹ್ಲಾದ ಚಿತ್ರದ ಬಗ್ಗೆ
ವಿಜಯ್ ನಿರ್ದೇಶನ ಮಾಡಿದ್ದ ಭಕ್ತ ಪ್ರಹ್ಲಾದ ಸಿನಿಮಾ 1983ರಲ್ಲಿ ಬಿಡುಗಡೆಯಾಗಿತ್ತು. ಎಸ್ ಎ ಗೋವಿಂದರಾಜು ನಿರ್ಮಾಣದ ಈ ಚಿತ್ರದಲ್ಲಿ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸರಿತಾ, ಅನಂತ್ ನಾಗ್ ನಟಿಸಿದ್ದರು.


Click it and Unblock the Notifications











