twitter
    For Quick Alerts
    ALLOW NOTIFICATIONS  
    For Daily Alerts

    ರಜನೀಕಾಂತ್ ಚಿತ್ರಕ್ಕೆ ರಾಜಕುಮಾರ್ ಚಿತ್ರದ ಪೈಪೋಟಿ

    |

    ವರನಟ ಡಾ. ರಾಜಕುಮಾರ್ ಅವರ ಹಳೆಯ ಚಿತ್ರಗಳಿಗೀಗ ಪರ್ವಕಾಲ. ಅವರ ಅಭಿನಯದ ಕಸ್ತೂರಿ ನಿವಾಸ ಕಲರೀಕರಣಗೊಂಡು ರಿ-ರಿಲೀಸ್ ಆಗಿ ಭರ್ಜರಿ ಯಶಸ್ಸು ಪಡೆದ ಬೆನ್ನಲ್ಲೇ ಅವರ ಮತ್ತೊಂದು ಸೂಪರ್ ಹಿಟ್ ಚಿತ್ರ ತೆರೆ ಮೇಲೆ ರಾರಾಜಿಸಲು ಸಜ್ಜಾಗಿದೆ.

    ಡಾ. ರಾಜಕುಮಾರ್ ವೃತ್ತಿ ಜೀವನದ ಸೂಪರ್ ಹಿಟ್ ಚಿತ್ರಗಳಲ್ಲೊಂದಾದ 'ಮಯೂರ' ಚಿತ್ರ ಇದೇ ಡಿಸೆಂಬರ್ ಹನ್ನೆರಡರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಅಂದೇ ರಾಜ್ ಅವರ ಅಭಿಮಾನಿಯೂ ಆಗಿರುವ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ 'ಲಿಂಗಾ' ಚಿತ್ರ ಕೂಡಾ ಅಂದೇ ವಿಶ್ವದ್ಯಾಂತ ತೆರೆಕಾಣುತ್ತಿರುವುದು ವಿಶೇಷ.

    1975ರಲ್ಲಿ ಬಿಡುಗಡೆಯಾಗಿದ್ದ ಮಯೂರ ಚಿತ್ರ ರಾಜ್ ಅವರಿಗೆ ಭಾರೀ ಹೆಸರನ್ನು ತಂದುಕೊಟ್ಟಿತ್ತು. ಈ ಚಿತ್ರವೀಗ ಹೊಸ ತಂತ್ರಜ್ಞಾನದೊಂದಿಗೆ ಮತ್ತು ಸಿನಿಮಾಸ್ಕೋಪ್ ಡಿಟಿಎಸ್ 5.1 ಸೌಂಡ್ ಟ್ರ್ಯಾಕ್ ಸಿಸ್ಟಂ ಮೂಲಕ ಅಭಿಮಾನಿಗಳ ಮುಂದೆ ಬರಲಿದೆ. (ಕಸ್ತೂರಿ ನಿವಾಸ ಅದ್ದೂರಿ ಕಲೆಕ್ಷನ್)

    ಕನ್ನಡದ ಪ್ರಥಮ ರಾಜನೆಂದು ಹೆಸರಾದ ಕದಂಬ ರಾಜಮನೆತನದ ದೊರೆ ಮಯೂರವರ್ಮನ ಕಥೆಯನ್ನಾಧರಿಸಿದ ಚಲನಚಿತ್ರ ಇದಾಗಿದ್ದು, ದೇವಡು ನರಸಿಂಹ ಶಾಸ್ತ್ರಿ ಅವರ ಕಾದಂಬರಿಯನ್ನಾಧರಿಸಿ ಈ ಚಿತ್ರವನ್ನು ತೆಗೆಯಲಾಗಿತ್ತು.

    ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಜಿ ಕೆ ವೆಂಕಟೇಶ್ ಸಂಗೀತ ನೀಡಿದ್ದರು. ಟಿ ಪಿ ವೇಣುಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಅಣ್ಣಯ್ಯ ಛಾಯಾಗ್ರಾಹಕರಾಗಿದ್ದರು.

    ರಾಜಕುಮಾರ್, ಮಂಜುಳಾ, ಕೆ ಎಸ್ ಅಶ್ವಥ್, ವಜ್ರಮುನಿ, ಶ್ರೀನಾಥ್, ಎಂ ಪಿ ಶಂಕರ್, ಬಾಲಕೃಷ್ಣ ಮುಂತಾದವರು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ.

    ವೇದಪಾಠ ಕಲಿಯಲು ಕಂಚಿ ನಗರಕ್ಕೆ ಬ್ರಾಹ್ಮಣ ಯುವಕನಾಗಿ ಮಯೂರನ ಆಗಮನದ ಮೂಲಕ ಚಿತ್ರ ಆರಂಭಗೊಳ್ಳುತ್ತದೆ. ಸುಮಾರು ಮೂರು ತಾಸಿನ ಸಿನಿಮಾ ಇದಾಗಿದ್ದು, 'ನಾನಿರುವುದೇ ನಿಮಗಾಗಿ', 'ಈ ಮೌನವ ತಾಳೆನು' ಮುಂತಾದ ಚಿ ಉದಯಶಂಕರ್ ಸಾಹಿತ್ಯದ ಹಾಡುಗಳು ಚಿತ್ರದ ಪ್ರಮುಖ ಹೈಲೆಟ್ಸ್. (ಅಣ್ಣಾವ್ರ ಜೀವನದ ಕಹಿ ಸತ್ಯ ಬಿಚ್ಚಿಟ್ಟ ರಾಘಣ್ಣ)

    Dr Rajkumar evergreen movie Mayura releasing in Cinema scope

    ಈ ಚಿತ್ರವನ್ನು ರಾಜ್ಯದ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ತರುತ್ತಿದ್ದೇವೆ. ಬೆಂಗಳೂರಿನಲ್ಲಿ ಕೆ ಜಿ ರಸ್ತೆಯ ಸಂತೋಷ್ ಚಿತ್ರಮಂದಿರ ಸೇರಿ ಹತ್ತಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ.

    ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ತುಮಕೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಶಿವಲಿಂಗಯ್ಯ, ಮಂಜುನಾಥ್ ಮತ್ತು ಮಲ್ಲಿಕಾರ್ಜುನಯ್ಯ ಅವರ ವಿಶೇಷ ಪರಿಶ್ರಮದೊಂದಿಗೆ ಚಿತ್ರ ಡಿಜಿಟಲೀಕರಣ ಹೊಂದಿದೆ.

    ಅಣ್ಣಾವ್ರ ಅಭಿಮಾನಿಯೂ ಆಗಿರುವ ನನಗೆ ಈ ಚಿತ್ರವನ್ನು ಹಂಚಿಕೆ ಮಾಡುತ್ತಿರುವುದು ಒಂದು ವಿಶಿಷ್ಟ ಅನುಭವ ಎಂದು ಚಿತ್ರದ ಹಂಚಿಕೆದಾರ ಬಿ ಎನ್ ಗಂಗಾಧರ್ 'ಫಿಲ್ಮೀಬೀಟ್' ಗೆ ತಿಳಿಸಿದ್ದಾರೆ.

    English summary
    Dr Rajkumar's evergreen movie 'Mayura' releasing in Cinema scope. 1975 originally released movie now releasing with DTS technology. Movie releasing in more than 30 theaters across state on December 12.
    Monday, December 8, 2014, 10:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X