»   » 'ದೊಡ್ಮನೆ'ಯ ದೊಡ್ಡ ಸುದ್ದಿ: ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದ ರಾಜ್ ಕುಟುಂಬದ ಕುಡಿ!

'ದೊಡ್ಮನೆ'ಯ ದೊಡ್ಡ ಸುದ್ದಿ: ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದ ರಾಜ್ ಕುಟುಂಬದ ಕುಡಿ!

Posted By:
Subscribe to Filmibeat Kannada
Dr.Rajkumar family member Lucky Gopal to make his sandalwood debut as Director| Filmibeat Kannada

ಡಾ.ರಾಜ್ ಕುಮಾರ್ ಅವರ ಇಡೀ ಕುಟುಂಬ ಕನ್ನಡ ಚಿತ್ರರಂಗವನ್ನು ಉಸಿರಾಗಿಸಿಕೊಂಡಿದೆ. ಕನ್ನಡ ಸಿನಿಮಾ ಬಿಟ್ಟು ರಾಜ್ ಕುಟುಂಬ ಇಲ್ಲ, ರಾಜ್ ಕುಟುಂಬ ಇಲ್ಲದ ಕನ್ನಡ ಚಿತ್ರರಂಗವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಷ್ಟು ದಿನ ನಟನೆ ಮತ್ತು ನಿರ್ಮಾಣ ಮಾಡುತ್ತಿದ್ದ ಈ ಕುಟುಂಬ ಈಗ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದೆ.

ರಾಜ್ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಲಕ್ಕಿ ಗೋಪಾಲ್ ಈಗ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದರೆ ಲಕ್ಕಿ ಗೋಪಾಲ್ ನಿರ್ದೇಶನ ಮಾಡುತ್ತಿರುವುದು ನಟ ಶಿವರಾಜ್ ಕುಮಾರ್ ಅಭಿನಯದ ಚಿತ್ರಕ್ಕೆ. ರಾಜ್ ಕುಮಾರ್, ಶಿವಣ್ಣ, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಮತ್ತು ವಿನಯ್ ಹೀಗೆ ರಾಜ್ ಕುಟುಂಬದ ಕುಡಿಗಳು ಇಷ್ಟು ದಿನ ನಾಯಕರಾಗಿ ಮತ್ತು ನಿರ್ಮಾಪಕರ ಸ್ಥಾನ ತುಂಬಿದ್ದರು. ಇದೀಗ ಮೊಟ್ಟ ಮೊದಲ ಬಾರಿಗೆ ರಾಜ್ ಕುಟುಂಬದ ಸದ್ಯಸರೊಬ್ಬರು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಮುಂದೆ ಓದಿ...

ನಿರ್ದೇಶಕ ಕೈ ಹಾಕಿದ ರಾಜ್ ಫ್ಯಾಮಿಲಿ

ಡಾ.ರಾಜ್ ಕುಟುಂಬದಲ್ಲಿ ಒಬ್ಬರಾದ ಲಕ್ಕಿ ಗೋಪಾಲ್ ಅವರು ಈಗ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ನಟನೆ, ಗಾಯನ, ನಿರ್ಮಾಣದ ನಂತರ ನಿರ್ದೇಶನದ ವಿಭಾಗಕ್ಕೆ ಮೊದಲ ಬಾರಿಗೆ ರಾಜ್ ಕುಟುಂಬ ಕೈ ಹಾಕಿದೆ.

ಲಕ್ಕಿ ಗೋಪಾಲ್ ಕುರಿತು...

ಡಾ.ರಾಜ್ ಕುಮಾರ್ ರವರ ಸಹೋದರಿಯ ಮೊಮ್ಮಗ ಈ ಲಕ್ಕಿ ಗೋಪಾಲ್.

'ಪ್ರೊಡಕ್ಷನ್ ನಂ 1'

ಈ ಹೊಸ ಸಿನಿಮಾದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಸದ್ಯಕ್ಕೆ 'ಪ್ರೊಡಕ್ಷನ್ ನಂ 1' ಎಂಬ ಹೆಸರಿಟ್ಟು ಚಿತ್ರವನ್ನು ಶುರು ಮಾಡಲಾಗುತ್ತಿದೆ.

ಶಿವಣ್ಣ ನಟನೆ

ಲಕ್ಕಿ ಗೋಪಾಲ್ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಮನೆ ದೊಡ್ಡಣ್ಣ ಶಿವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶಿವಣ್ಣನ ಪಾತ್ರ ತುಂಬ ವಿಭಿನ್ನ ಶೈಲಿಯಲ್ಲಿರಲಿದೆಯಂತೆ.

ಅದ್ದೂರಿ ಸಿನಿಮಾ

ಈ ಸಿನಿಮಾ ಅದ್ದೂರಿ ವೆಚ್ಚದ ಚಿತ್ರವಾಗಿದ್ದು, ಕಿರಣ್ ಕುಮಾರ್ ಎಂಬುವರು ನಿರ್ಮಾಣ ಮಾಡಲಿದ್ದಾರೆ.

ತಾರಾಗಣ

ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಜನಪ್ರಿಯ ಕಲಾವಿದ ಮತ್ತು ತಂತ್ರಜ್ಞರು ಇರಲಿದ್ದಾರೆ ಎನ್ನಲಾಗಿದೆ.

ಡಾ.ರಾಜ್ ಮೊಮ್ಮಗ ಧೀರನ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

ಅಜನೀಶ್ ಲೋಕನಾಥ್ ಸಂಗೀತ

'ಕಿರಿಕ್ ಪಾರ್ಟಿ' ಹಾಡುಗಳ ದೊಡ್ಡ ಯಶಸ್ಸಿನ ನಂತರ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಹಿಂದೆ ಶಿವಣ್ಣನ 'ಶ್ರೀಕಂಠ' ಚಿತ್ರಕ್ಕೂ ಅಜನೀಶ್ ಮ್ಯೂಸಿಕ್ ನೀಡಿದ್ದರು. ಉಳಿದಂತೆ ಚೇತನ್ ಕುಮಾರ್ ಸಾಹಿತ್ಯ, ಭುವನ್ ಗೌಡ ಕ್ಯಾಮರಾ ಮತ್ತು ದೀಪು ಎಸ್ ಕುಮಾರ್ ಸಂಕಲನ ಚಿತ್ರದಲ್ಲಿದೆ.

ಹೊಸ ಪ್ರಯೋಗಕ್ಕೆ ಮುಂದಾದ ಶಿವರಾಜ್ ಕುಮಾರ್!

ಕನ್ನಡ ರಾಜ್ಯೋತ್ಸವಕ್ಕೆ ಶುರು

ಶಿವಣ್ಣನ ಈ ಹೊಸ ಸಿನಿಮಾದ ಮುಹೂರ್ತ ನವೆಂಬರ್ 1ಕ್ಕೆ ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ನಡೆಯಲಿದೆ. ಅಂದಿನ ದಿನವೇ ಚಿತ್ರದ ಮೋಷನ್ ಪೋಸ್ಟರ್ ಕೂಡ ಲಾಂಚ್ ಆಗಲಿದೆ.

English summary
Dr.Rajkumar family member Lucky Gopal to make his sandalwood debut as a Director through a new movie. Actor Shiva Rajkumar will be playing a lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada