»   » ಶಿವಣ್ಣ ಅಭಿಮಾನಿಗಳ ಮೇಲೆ ರಾಜ್ ಅಭಿಮಾನಿಗಳು ಬೇಸರವಾಗಿದ್ದೇಕೆ?

ಶಿವಣ್ಣ ಅಭಿಮಾನಿಗಳ ಮೇಲೆ ರಾಜ್ ಅಭಿಮಾನಿಗಳು ಬೇಸರವಾಗಿದ್ದೇಕೆ?

Posted By: Naveen
Subscribe to Filmibeat Kannada

ಡಾ.ರಾಜ್ ಹುಟ್ಟುಹಬ್ಬವನ್ನ ಅಭಿಮಾನಿಗಳು ತುಂಬಾ ವಿಶೇಷವಾಗಿ ಆಚರಿಸುತ್ತಿದ್ದಾರೆ. ಅಣ್ಣಾವ್ರ ಹುಟ್ಟುಹಬ್ಬವನ್ನ ಕೇವಲ ಒಂದು ದಿನ ಮಾತ್ರವಲ್ಲದೇ, ಮೂರು ದಿನಗಳ ಕಾಲ ಅದ್ದೂರಿ ಸೆಲೆಬ್ರೇಟ್ ಮಾಡಲಾಗುತ್ತಿದೆ. ಆದ್ರೆ, ಶಿವರಾಜ್ ಕುಮಾರ್ ಅಭಿಮಾನಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಭ್ರಮದ ಬಗ್ಗೆ ಕೆಲವು ಡಾ.ರಾಜ್ ಕುಮಾರ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

'ರಾಜ್ ಕುಮಾರ್ ಹಬ್ಬ' ಎಂಬ ಹೆಸರಿನಡಿ 'ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ' ರಾಜ್ ಹುಟ್ಟುಹಬ್ಬವನ್ನ ಮೂರು ದಿನ ಆಚರಿಸುವುದಕ್ಕೆ ನಿರ್ಧಾರ ಮಾಡಿದ್ದಾರೆ. ರಾಜ್ ಕುಮಾರ್ ಅವರ 6 ಅಡಿ ಎತ್ತರದ ಮಣ್ಣಿನ ಮೂರ್ತಿಯನ್ನ ಮಾಡಿ, 3 ದಿನಗಳ ಪೂಜಿಸಿ ಬಳಿಕ ಬೆಂಗಳೂರಿನ ಕೆಲ ನಗರಗಳಲ್ಲಿ ಮೆರವಣಿಗೆ ಮಾಡಿ ಆ ಮೂರ್ತಿಯನ್ನ ನದಿಗೆ ವಿಸರ್ಜನೆ ಮಾಡುವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.

Rajkumar Fans Sad on Shivaraj Kumar Fans

ಆದ್ರೆ, ಈ ರೀತಿಯ ಆಚರಣೆ ರಾಜ್ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಅಭಿಮಾನಿಗಳನ್ನ ದೇವರೆಂದ ನಟನ ಮೂರ್ತಿಯನ್ನ ವಿಸರ್ಜನೆ ಮಾಡುವುದು ಸೂಕ್ತವಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆಯೂ 'ರಾಜ್ ಕುಮಾರ್ ಹಬ್ಬ' ಇದೇ ತಿಂಗಳು ಏಪ್ರಿಲ್ 28 ರಿಂದ ಏಪ್ರಿಲ್ 30ರ ವರೆಗೆ ನಡೆಯಲಿದೆ.

English summary
Shivaraj Kumar Fans Planing to Calibrate Rajkumar Birthday in a Different way. But Rajkumar Fans Are sad About That.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada