ಪ್ರೇಮಿಗಳ ದಿನಕ್ಕೆ ಧೀರೆನ್ ರಾಮ್‌ಕುಮಾರ್ 'ಶಿವ 143'!
ಕನ್ನಡದ ವರನಟ ಡಾ.ರಾಜ್ ಕುಮಾರ್ ಕುಟುಂಬದ ಅನೇಕರು ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ಮಕ್ಕಳ ಸರದಿ ಬಳಿಕ ಈಗ ಮೊಮ್ಮಕ್ಕಳ ಸರದಿ. ಈಗ ರಾಜ್‌ಕುಮಾರ್ ಅವರ ಮೊಮ್ಮಕ್ಕಳ ಪೀಳಿಗೆ ಸಿನಿಮಾರಂಗದಲ್ಲಿ ತಮ್ಮ ಚಾಪ್ಟರ್ ಓಪನ್ ಆಗುತ್ತಿದ್ದು, ಒಬ್ಬೊಬ್ಬರಾಗಿಯೇ ತಮ್ಮ ಸಿನಿಮಾಗಳನ್ನು ಶುರು ಮಾಡುತ್ತಿದ್ದಾರೆ.
ವಿನಯ್ ರಾಜ್‌ಕುಮಾರ್, ಧನ್ಯಾ ರಾಮ್‌ಕುಮಾರ್ ಅವರ ಬಳಿಕ ಈಗ ಯುವರಾಜ್ ಮತ್ತು ಧೀರೆನ್ ಕುಮಾರ್ ಸಿನಿಮಾಗಳು ಈಗ ಶುರುವಾಗಿವೆ. ಇವರ ಸಿನಿಮಾಗಳ ಒಂದೊಂದೆ ಅಪ್ಡೇಟ್‌ಗಳು ಬರುತ್ತಿವೆ, ಈಗ ನಟ ಧೀರೆನ್ ಕುಮಾರ್ ಅಭಿನಯದ ಶಿವ 143 ಸಿನಿಮಾತಂಡ ಪ್ರೇಕ್ಷಕರಿಗೆ ಸಿಹಿ ಸುದ್ದಿ ಕೊಟ್ಟಿದೆ.
ಇದೇ ಫೆಬ್ರವರಿ 14ಕ್ಕೆ ಸಿನಿಮಾ ತಂಡ ಸರ್ಪ್ರೈಸ್ ನೀಡಲು ಮುಂದಾಗಿದೆ. ಈ ಬಗ್ಗೆ ಚಿತ್ರದ ಪೋಸ್ಟರ್ ಒಂದನ್ನು ರಿಲೀಸ್ ಮಾಡುವ ಮೂಲಕ ಚಿತ್ರ ತಂಡ ಪ್ರಕಟ ಮಾಡಿದೆ. ಈ ಪೋಸ್ಟರ್ ಸಿನಿಮಾದ ಮುಂದಿನ ಅಪ್ಡೇಟ್ ಮೇಲೆ ಕುತೂಹಲ ಮೂಡಿಸಿದೆ. ಈ ಹಿಂದೆ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆಗಿತ್ತು. ಶಿವ 143 ಎನ್ನುವ ಟೈಟಲ್ ಸಾಕಷ್ಟು ಕುತೂಹಲ ಮೂಡಿಸಿದೆ. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆಗಳು ಮನೆ ಮಾಡಿವೆ.

ಅಪ್ಪು ನಿಧನದಿಂದಾಗಿ ದೊಡ್ಮನೆ ಕೆಲಸಗಳು ಸ್ಥಗಿತಗೊಂಡಿದ್ದವು. ಈಗ ಒಂದೊಂದೇ ಕೆಲಸಗಳು ಆರಂಭ ಆಗಿವೆ. ಸದ್ಯ ಈ ಚಿತ್ರದ ಮೊದಲ ಹಾಡು ರಿಲೀಸ್‌ಗೆ ರೆಡಿಯಾಗಿದೆ. ಪ್ರೇಮಿಗಳ ದಿನದಂದು ಚಿತ್ರದ ಮೊದಲ ಅಪ್ಡೇಟ್ ನೀಡಲು ಸಿನಿಮಾ ತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ಧೀರೆನ್ ಲವ್ವರ್ ಬಾಯ್ ಆಗಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ನಟಿ ಮಾನ್ವಿತಾ ಹರೀಶ್ ಧೀರೆನ್‌ಗೆ ಜೊತೆಯಾಗಿದ್ದಾರೆ. ಈಗಾಗಲೇ ಚಿತ್ರದ ಒಂದಷ್ಟು ಮೆಕಿಂಗ್ ಫೋಟೊಗಳು ಕೂಡ ರಿಲೀಸ್ ಆಗಿವೆ. ಮಾನ್ವಿತಾ ಮತ್ತು ಧೀರೆನ್ ಇಬ್ಬರ ಸುಂದರ್ ಪ್ರೇಮ್ ಕಹಾನಿ ಈ ಚಿತ್ರದಲ್ಲಿ ಇದೆ ಎನ್ನಲಾಗಿದೆ. ಈ ಚಿತ್ರಕ್ಕೆ ಈ ಮೊದಲು ದಾರಿ ತಪ್ಪಿದ ಮಗ ಎನ್ನುವ ಟೈಟಲ್ ಫಿಕ್ಸ್ ಮಾಡಲಾಗಿದೆ. ಈಗ ಶಿವ 143 ಎಂದು ಟೈಟಲ್ ಬದಲಾಗಿದ್ದು. ಮೊದಲ ಹಾಡಿನಲ್ಲಿ ಈ ಜೋಡಿ ಹೇಗೆ ಕಾಣಿಸಿಕೊಳ್ಳಲಿದೆ ಎನ್ನುವ ಕುತೂಹಲ ಮೂಡಿದೆ. ಈ ಚಿತ್ರಕ್ಕೆ ನಿರ್ದೇಶಕ ಅನಿಲ್ ಆ್ಯಕ್ಷನ್ ಕಟ್ ಹೇಳಿದ್ದು, ಜಯಣ್ಣ ಕಂಬೈಂನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.


Click it and Unblock the Notifications











