ರಾಜ್ ಹುಟ್ಟುಹಬ್ಬದ ಖುಷಿ ಹೆಚ್ಚಿಸಿದ ಚಿನ್ನಸ್ವಾಮಿ ಕ್ರೀಡಾಂಗಣ
Recommended Video
ನಿನ್ನೆ (ಏಪ್ರಿಲ್ 24) ರಾಜ್ ಕುಮಾರ್ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಅಭಿಮಾನಿಗಳು ಈ ದಿನವನ್ನು ಆಚರಣೆ ಮಾಡಿದ್ದಾರೆ. ಆದರೆ, ಈ ವರ್ಷದ ಹುಟ್ಟುಹಬ್ಬ ಕೆಲವು ವಿಶೇಷ ಕಾರಣಗಳಿಂದ ಬಹಳಷ್ಟು ಖುಷಿ ನೀಡಿದೆ.
ಐಪಿಎಲ್ ಪಂದ್ಯವಳಿ ಶುರುವಾಗಿ ಬಹಳ ದಿನಗಳು ಕಳೆದಿವೆ. ದಿನ ನಡೆಯುವ ಪಂದ್ಯದ ರೀತಿ ನಿನ್ನೆಯೂ ಪಂದ್ಯ ನಡೆಯಿತು. ಬೆಂಗಳೂರು ಹಾಗೂ ಪಂಜಾಬ್ ನಡುವೆ ನಡೆದ ಈ ಪಂದ್ಯದಲ್ಲಿ ರಾಜ್ ದರ್ಶನ ಆಗಿದೆ.
ಬೆಂಗಳೂರಿನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಸಾಕಷ್ಟು ಕನ್ನಡಿಗರು ಕ್ರಿಕೆಟ್ ನೋಡಲು ಹೋಗಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ ಕುಮಾರ್ ಅವರ ಫೋಟೋವನ್ನು ಹಾಕುವ ಮೂಲಕ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಿತ್ತು. ದೊಡ್ಡ ಪರದೆ ಮೇಲೆ ರಾಜ್ ಕುಮಾರ್ ಫೋಟೋ ಹಾಗೂ ಅವರ ಹಾಡನ್ನು ಕೇಳಿ ಅಭಿಮಾನಿಗಳು ಖುಷಿಯಾದರು. ಇಡೀ ಕ್ರೀಡಾಂಗಣ ಈ ಸಂದರ್ಭವನ್ನು ಸಂಭ್ರಮಿಸಿತು.

ಮತ್ತೊಂದು ವಿಶೇಷ ಎಂದರೆ, ಈ ಪಂದ್ಯವನ್ನು ವೀಕ್ಷಣೆ ಮಾಡಲು ನಟ ಶಿವರಾಜ್ ಕುಮಾರ್ ಸಹ ಹೋಗಿದ್ದರು. ನಿರ್ಮಾಪಕ ಶ್ರೀಕಾಂತ್ ಹಾಗೂ ನಿರ್ದೇಶಕ ರಘುರಾಮ್ ಇಬ್ಬರು ಶಿವಣ್ಣನ ಜೊತೆಗೆ ಪಂದ್ಯವನ್ನು ಆನಂದಿಸಿದರು.

ಈ ಎಲ್ಲ ವಿಶೇಷತೆಗಳ ಜೊತೆಗೆ ಪಂಜಾಬ್ ವಿರುದ್ಧ ಆರ್ ಸಿಬಿ ಪಂದ್ಯವನ್ನು ಗೆದ್ದಿದೆ. 17 ರನ್ನಗಳಿಂದ ಬೆಂಗಳೂರು ತಂಡ ನಿನ್ನೆಯ ಪಂದ್ಯದಲ್ಲಿ ಜಯ ಪಡೆದಿದೆ.


Click it and Unblock the Notifications











