»   » 'ಮಫ್ತಿ'ಯ ಭೈರತಿ ರಣಗಲ್ಲು ವೇ‍ಷದಲ್ಲಿ ಡಾ.ರಾಜ್ ಕುಮಾರ್ !

'ಮಫ್ತಿ'ಯ ಭೈರತಿ ರಣಗಲ್ಲು ವೇ‍ಷದಲ್ಲಿ ಡಾ.ರಾಜ್ ಕುಮಾರ್ !

Posted By:
Subscribe to Filmibeat Kannada

'ಮಫ್ತಿ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಭೈರತಿ ರಣಗಲ್ಲು ಎಂಬ ಗ್ಯಾಂಗ್ ಸ್ಟರ್ ಪಾತ್ರವನ್ನು ಮಾಡಿದ್ದರು. 110ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಶಿವಣ್ಣನಿಗೆ ಈ ಪಾತ್ರ ತುಂಬ ವಿಭಿನ್ನವಾಗಿತ್ತು. ಈಗ ಇದೇ ಭೈರತಿ ರಣಗಲ್ಲು ವೇ‍ಷದಲ್ಲಿ ಇರುವ ರಾಜ್ ಕುಮಾರ್ ರವರ ಫೋಟೋವೊಂದು ಹೊರಬಂದಿದೆ.

ಈ ಫೋಟೋದಲ್ಲಿ ಭೈರತಿ ರಣಗಲ್ಲು ರೀತಿಯೇ ರಾಜ್ ಕುಮಾರ್ ಕಪ್ಪು ಅಂಗಿ ಮತ್ತು ಪಂಚೆ ಧರಿಸಿದ್ದಾರೆ. ಅಣ್ಣಾವ್ರ ಅಪರೂಪದ ಫೋಟೋ ಇದಾಗಿದ್ದು, ಈ ಫೋಟೋ ಭೈರತಿ ರಣಗಲ್ಲು ಲುಕ್ ರೀತಿಯೇ ಇರುವುದು ವಿಶೇಷ. ಜೊತೆಗೆ ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Rajkumar photo look like 'Bairathi Ranagallu'

ಅಂದಹಾಗೆ, ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಅಭಿನಯದ 'ಮಫ್ತಿ' ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿದೆ. ಎಲ್ಲ ಕಡೆಯಿಂದೆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹೊಸ ನಿರ್ದೇಶಕ ನರ್ತನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ದೇವರಾಜ್, ಪ್ರಕಾಶ್ ಬೆಳವಾಡಿ, ವಸಿಷ್ಠ ಮತ್ತು ಶಾನ್ವಿ ಶ್ರೀವಾಸ್ತವ ನಟಿಸಿದ್ದರು.

English summary
This Rajkumar's rare photo looks like 'Mufti' movie 'Bairathi Ranagallu' character.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada