twitter
    For Quick Alerts
    ALLOW NOTIFICATIONS  
    For Daily Alerts

    ಬಣ್ಣ ತುಂಬಿಕೊಂಡು ಬರಲಿದೆ ಡಾ.ರಾಜ್ ಅವರ ಮತ್ತೊಂದು ಸಿನಿಮಾ

    |

    ಹಳೆಯ ಕಪ್ಪು-ಬಿಳುಪು ಸಿನಿಮಾಗಳು ಬಣ್ಣದ ರೂಪದಲ್ಲಿ ಮರುಬಿಡುಗಡೆ ಆಗುತ್ತಿದ್ದು ಹೊಸ ತಲೆಮಾರಿಗೆ ಸಿನಿಮಾಗಳನ್ನು ತಲುಪಿಸಲು ಬಣ್ಣಗಳನ್ನು ತುಂಬಿ ಬಿಡುಗಡೆ ಮಾಡುವ ಸಂಪ್ರದಾಯ ಕೆಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ.

    ಮೊದಲು ಬಣ್ಣದಲ್ಲಿ ಬಿಡುಗಡೆ ಆದ ಕಪ್ಪು-ಬಿಳುಪು ಕನ್ನಡ ಸಿನಿಮಾ ರಾಜ್‌ಕುಮಾರ್ ಅವರ 'ಸತ್ಯ ಹರಿಶ್ಚಂದ್ರ'. ಆ ನಂತರ ಕಸ್ತೂರಿ ನಿವಾಸ ಸಹ ಬಣ್ಣವಾಯಿತು. ಈಗ ಮತ್ತೆ ರಾಜ್‌ಕುಮಾರ್ ಅವರ ಮತ್ತೊಂದು ಅದ್ಭುತ ಕಪ್ಪು-ಬಿಳು ಸಿನಿಮಾವನ್ನು ಬಣ್ಣ ತುಂಬಿ ಬಿಡುಗಡೆ ಮಾಡಲಾಗುತ್ತಿದೆ.

    ರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರುರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರು

    ಸ್ವತಃ ಡಾ.ರಾಜ್‌ಕುಮಾರ್ ಅವರಿಗೆ ಬಹಳ ಇಷ್ಟವಾಗಿದ್ದ ಸಿನಿಮಾವನ್ನು ಬಣ್ಣಗೊಳಿಸಿ ಬಿಡುಗಡೆಗೆ ಸಜ್ಜು ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಸಿನಿಮಾ ಬರಲಿದೆ.

    ಯಾವ ಸಿನಿಮಾ?

    ಯಾವ ಸಿನಿಮಾ?

    ಡಾ.ರಾಜ್‌ಕುಮಾರ್ ಅಭಿನಯದ 'ಮಂತ್ರಾಲಯ ಮಹಾತ್ಮೆ' ಸಿನಿಮಾ ಇದೀಗ ಬಣ್ಣಗೊಳ್ಳುತ್ತಿದೆ. ರಾಜ್ ಅವರ 'ಕಸ್ತೂರಿ ನಿವಾಸ' ಸಿನಿಮಾವನ್ನು ಬಣ್ಣದ ಸಿನಿಮಾ ಆಗಿ ಬದಲಾಯಿಸಿದ್ದ ತಂಡವೇ ಮಂತ್ರಾಲಯ ಮಹಾತ್ಮೆ ಸಿನಿಮಾವನ್ನೂ ಕಲರ್ ಮಾಡುತ್ತಿದೆ.

    ಟಿವಿ ಸಿಂಗ್ ಠಾಕೂರ್ ನಿರ್ದೇಶಿಸಿದ್ದರು

    ಟಿವಿ ಸಿಂಗ್ ಠಾಕೂರ್ ನಿರ್ದೇಶಿಸಿದ್ದರು

    1966 ರಲ್ಲಿ ಬಿಡುಗಡೆ ಆಗಿದ್ದ ಮಂತ್ರಾಲಯ ಮಹಾತ್ಮೆ ಸಿನಿಮಾವನ್ನು ಟಿವಿ ಸಿಂಗ್ ಠಾಕೂರ್ ನಿರ್ದೇಶಿಸಿದ್ದರು, ಅವರೇ ನಿರ್ಮಾಣವನ್ನೂ ಮಾಡಿದ್ದರು. ಆ ಕಾಲಕ್ಕೆ ಈ ಸಿನಿಮಾ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಅಣ್ಣಾವ್ರ ಅಭಿನಯ ಬಹು ಪ್ರಶಂಸೆಗೆ ಕಾರಣವಾಗಿತ್ತು.

    ರಾಜ್‌ಕುಮಾರ್ ಬಗ್ಗೆ ಅವಹೇಳನ: ಪತ್ರಿಕಾ ಸಂಪಾದಕನ ವಿರುದ್ಧ ನಮ್ಮ ಕರವೇ ದೂರುರಾಜ್‌ಕುಮಾರ್ ಬಗ್ಗೆ ಅವಹೇಳನ: ಪತ್ರಿಕಾ ಸಂಪಾದಕನ ವಿರುದ್ಧ ನಮ್ಮ ಕರವೇ ದೂರು

    ಜಯಂತಿ, ಕಲ್ಪನಾ ಅಭಿನಯಿಸಿದ್ದಾರೆ

    ಜಯಂತಿ, ಕಲ್ಪನಾ ಅಭಿನಯಿಸಿದ್ದಾರೆ

    ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ರಾಜ್‌ಕುಮಾರ್ ಅವರು ಗುರು ರಾಘೇಂದ್ರರ ಪಾತ್ರವಹಿಸಿದ್ದರು. ಸಿನಿಮಾದಲ್ಲಿ ಉದಯ್‌ಕುಮಾರ್, ಜಯಂತಿ, ಕಲ್ಪನಾ, ಶೇಷಗಿರಿ ರಾವ್ ಇನ್ನೂ ಹಲವರು ನಟಿಸಿದ್ದರು.

    ಲಾಕ್‌ಡೌನ್ ಮುಗಿದ ಮೇಲೆ ಬಿಡುಗಡೆ

    ಲಾಕ್‌ಡೌನ್ ಮುಗಿದ ಮೇಲೆ ಬಿಡುಗಡೆ

    ಸಿನಿಮಾಕ್ಕೆ ಬಣ್ಣ ತುಂಬುವ ಕಾರ್ಯ ಬಹುತೇಕ ಮುಗಿದಿದ್ದು, ಲಾಕ್‌ಡೌನ್ ಮುಗಿದು ಚಿತ್ರಮಂದಿರಗಳು ತೆರೆದ ಬಳಿಕ ಸಿನಿಮಾ ಬಿಡುಗಡೆ ಆಗಲಿದೆ.

    English summary
    Dr Rajkumar's 1966 released Manthralaya Mahathme movie re-releasing in colored version.
    Sunday, June 28, 2020, 9:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X